ಮಾಲೀಕತ್ವ, ಸಾಮಾನ್ಯ ಜಾಗ, ಸಾಮಾನ್ಯ ವೆಚ್ಚಗಳ ವಿಭಜನೆ, ಪಾರ್ಕಿಂಗ್ ಜಾಗ, ಮಾಲೀಕತ್ವ ನಿರ್ವಹಣೆ,
ಕ್ಲಬ್ ಹೌಸ್ ನಿರ್ವಹಣೆ, ಸಂಘದ ರಚನೆ, ಸಂಘದ ನೋಂದಣಿ, ನಿರ್ವಹಣೆ ಶುಲ್ಕಗಳನ್ನು ವಿಧಿಸುವಿಕೆ ಮತ್ತು ಶುಲ್ಕ ವಸೂಲಾತಿ,
ಬೆಂಗಳೂರು:
2026ನೇ ಸಾಲಿನ ಕರ್ನಾಟಕ ಅಪಾರ್ಟ್‌ಮೆಂಟ್ (ಮಾಲೀಕತ್ವ ಮತ್ತು ನಿರ್ವಹಣೆ) ವಿಧೇಯಕಕ್ಕೆ
ವಿಧಾನಸಭೆ ಅನುಮೋದನೆ ನೀಡಿದೆ.
ಸದನದಲ್ಲಿ ವಿಧೇಯಕ ಮಂಡನೆ ಮಾಡಿದ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಮತ್ತು ಸಂಸದೀಯ ವ್ಯವಹಾರಗಳ ಸಚಿವರಾದ ಕೃಷ್ಣ ಬೈರೇಗೌಡ ಅವರು, ರಾಜ್ಯದಲ್ಲಿ ಅಪಾರ್ಟ್‌ಮೆಂಟ್‌ಗಳು ವೇಗವಾಗಿ ಬೆಳಯುತ್ತಿದೆ. ರಾಜ್ಯದಲ್ಲಿ ಭೂಮಿಯ ಲಭ್ಯತೆ ಕಡಿಮೆ ಇರುವುದರಿಂದ ಅಪಾರ್ಟ್‌ಮೆಂಟ್ ಶೈಲಿಯ ಕಟ್ಟಡಗಳು ಹೆಚ್ಚಾಗುತ್ತಿದೆ. ಹೆಚ್ಚು ಜನರು ಅಪಾರ್ಟ್‌ಮೆಂಟ್, ವಸತಿ ಸಮುಚ್ಛಯಗಳಲ್ಲಿ ವಾಸಿಸುತ್ತಿದ್ದಾರೆ ಎಂದರು.
ಅಪಾರ್ಟ್‌ಮೆಂಟ್‌ನಲ್ಲಿ ವಾಸ ಮಾಡುವವರ ನಾನಾ ವಿಷಯಗಳು ಅಂದರೆ ಮಾಲೀಕತ್ವ, ಸಾಮಾನ್ಯ ಜಾಗ, ಸಾಮಾನ್ಯ ವೆಚ್ಚಗಳ ವಿಭಜನೆ, ಪಾರ್ಕಿಂಗ್ ಜಾಗ, ಮಾಲೀಕತ್ವ ನಿರ್ವಹಣೆ, ಕ್ಲಬ್ ಹೌಸ್ ನಿರ್ವಹಣೆ, ಸಂಘದ ರಚನೆ, ಸಂಘದ ನೋಂದಣಿ, ನಿರ್ವಹಣೆ ಶುಲ್ಕಗಳನ್ನು ವಿಧಿಸುವಿಕೆ ಮತ್ತು ಶುಲ್ಕ ವಸೂಲಾತಿ, ಸಂಘದ ಕರ್ತವ್ಯಗಳ ಬಗ್ಗೆ ವ್ಯಾಜ್ಯಗಳು, ಗೊಂದಲಗಳು ಉದ್ಭವಿಸಿವೆ. ಇವೆಲ್ಲವುಗಳಿಗೆ ಒಂದು ಸ್ಪಷ್ಟ ಕಾನೂನು ಇರಬೇಕು. ಒಂದು ಸಕ್ಷಮ ಪ್ರಾಧಿಕಾರವನ್ನು ರಚಿಸುವುದು ಈ ವಿಧೇಯಕದ ಉದ್ದೇಶವಾಗಿದೆ ಎಂದರು.
ನಿಗದಿತ ಸಮಯದ ನಂತರ ಅಪಾರ್ಟ್‌ಮೆಂಟ್ ಮರು ನಿರ್ಮಾಣಕ್ಕೆ ಶೇ.75 ರಷ್ಟು ಮಾಲೀಕರು ಒಪ್ಪಿಗೆ ನೀಡಿದ್ದಲ್ಲಿ ಮರು ನಿರ್ಮಾಣ ಮಾಡುವ ಬಗ್ಗೆ ಹಾಗೂ ಒಪ್ಪಿಗೆ ನೀಡದ ಮಾಲೀಕರಿಗೆ ಒಂದು ಮೌಲ್ಯ ನಿಗದಿಪಡಿಸಿ ಆಸ್ತಿ ಖರೀದಿ ಮಾಡಿ ಮರು ನಿರ್ಮಾಣ ಮಾಡಬಹುದಾಗಿದೆ. ಅಪಾರ್ಟ್‌ಮೆಂಟ್ ಕಟ್ಟಡಗಳ ಸಾಮಾನ್ಯ ಪ್ರದೇಶಗಳು ಮತ್ತು ಸೌಲಭ್ಯಗಳ ಕಾರ್ಯಾಚರಣೆ ಮತ್ತು ಬಳಕೆ, ಅಪಾರ್ಟ್‌ಮೆಂಟ್‌ಗಳ ಆಡಳಿತಕ್ಕಾಗಿ ಒಂದು ಕಾರ್ಯವ್ಯವಸ್ಥೆ ಮತ್ತು ಕಟ್ಟಡದಲ್ಲಿನ ವೈಯಕ್ತಿಕ ಅಪಾರ್ಟ್‌ಮೆಂಟ್‌ನ ಒಡೆತನ ಮತ್ತು ಅಂತಹ ಅಪಾರ್ಟ್‌ಮೆಂಟ್‌ಗಳಿಗೆ ಹೊಂದಿಕೊಂಡಿರುವ ಸಾಮಾನ್ಯ ಪ್ರದೇಶಗಳು ಮತ್ತು ಸೌಲಭ್ಯಗಳ ಅವಿಭಜಿತ ಹಿತಾಸಕ್ತಿಯೊಂದಿಗೆ ಅವಿಭಜಿತ ಹಂಚಿಕೆ ಹಾಗೂ ಸಂಬಂಧಪಟ್ಟ ವಿಷಯಗಳನ್ನು ಉಪಬಂಧಿಸುವುದು ಅವಶ್ಯಕವೆಂದು ಪರಿಗಣಿಸಿ ಈ ವಿಧೇಯಕವನ್ನು ಜಾರಿಗೆ ತರಲಾಗಿದೆ ಎಂದರು.
ಮುಖ್ಯಮಂತ್ರಿಗಳು ಸದರಿ ವಿಷಯಕ್ಕೆ ಸಂಬಂಧಪಟ್ಟಂತೆ ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುತ್ತಿರುವ ನಿವಾಸಿಗಳ ಸಭೆ ನಡೆಸಿ, ನಿವಾಸಿಗಳ ಸಲಹೆಗಳನ್ನು ತೆಗೆದುಕೊಂಡು ವಿಧೇಯಕದ ಚರ್ಚೆಗೆ ಅವಕಾಶ ಕೊಟ್ಟು ಕರಡು ವಿಧೇಯಕವನ್ನು ಸಿದ್ದಪಡಿಸಲಾಗಿತ್ತು. ನಿವಾಸಿಗಳ ಸಲಹೆಗಳನ್ನು ಕ್ರೋಢೀಕರಿಸಿ ಕರಡು ವಿಧೇಯಕದಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡಿ, ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುವ ನಿವಾಸಿಗಳಿಗೆ ಈ ವಿಧೇಯಕದಲ್ಲಿ ಅನುಕೂಲಗಳನ್ನು ಕಲ್ಪಿಸಲಾಗಿದೆ ಎಂದು ಸಚಿವ ಕೃಷ್ಣ ಬೈರೇಗೌಡ ವಿವರಿಸಿದರು.
*ನಿಗದಿತ ಸಮಯದ ನಂತರ ಅಪಾರ್ಟ್‌ಮೆಂಟ್ ಮರು ನಿರ್ಮಾಣಕ್ಕೆ ಶೇ.75 ರಷ್ಟು ಮಾಲೀಕರು ಒಪ್ಪಿಗೆ ನೀಡಿದ್ದಲ್ಲಿ ಮರು ನಿರ್ಮಾಣ ಮಾಡುವ ಬಗ್ಗೆ ಹಾಗೂ ಒಪ್ಪಿಗೆ ನೀಡದ ಮಾಲೀಕರಿಗೆ ಒಂದು ಮೌಲ್ಯ ನಿಗದಿಪಡಿಸಿ ಆಸ್ತಿ ಖರೀದಿ ಮಾಡಿ ಮರು ನಿರ್ಮಾಣ ಮಾಡಬಹುದಾಗಿದೆ.