ತಾಲೂಕಿನ ಬಂದಾಳ ಗ್ರಾಮದಲ್ಲಿ ಮಂಗಳವಾರ ಎಸ್‌ಐಆರ್ ಪ್ರಕ್ರಿಯೆ ಹಾಗೂ ಪ್ರಗತಿಯನ್ನು ಪರಿಶೀಲಿಸಿದ ಅವರು, ಭಾರತ ಚುನಾವಣಾ ಆಯೋಗವು ಮತದಾರರ ಪಟ್ಟಿಯ ಪರಿಷ್ಕರಣೆ ಮತ್ತು ಅನರ್ಹರನ್ನು ಮತಪಟ್ಟಿಯಿಂದ ಹೊರಗುಳಿಸುವ ಉದ್ದೇಶದಿಂದ ಮನೆ-ಮನೆಗೆ ಸಿಬ್ಬಂದಿಗಳನ್ನು ಕಳುಹಿಸಿ, ಅರ್ಹ ನಾಗರಿಕರನ್ನು ಗುರುತಿಸಿ, ಪರಿಶೀಲನೆ ನಡೆಸಿ ಅವರ ಹಕ್ಕನ್ನು ವಿಶೇಷವಾಗಿ ಗುರುತಿಸುವ ಮತ್ತು ನಕಲಿ ಮತದಾರರನ್ನು ಮತಪಟ್ಟಿಯಿಂದ ಹೊರಗಿಡಲು ನಡೆಸುತ್ತಿರುವ ಎಸ್‌ಐಆರ್ ಅಭಿಯಾನವನ್ನು ಹಮ್ಮಿ ಕೊಂಡಿದೆ ಎಂದರು.