ಅಂತರಂಗದಿಂದ ನಾಟಕೋತ್ಸವ

ಅಂತರಂಗ ತಂಡ
ಅಂತರಂಗ ತಂಡ
Published on

ಪ್ರಮುಖ ಮುಖ್ಯಾಂಶಗಳು

  • * ಕೈಲಾಸಂ ಅವರ ‘ಕೈಲಾಸಂ ವೈಭವ’ ನಾಟಕ’
  • * ಡಾ. ನಾಗತಿಹಳ್ಳಿ ಚಂದ್ರಶೇಖರ್ ಅವರ ಸಣ್ಣ ಕತೆ ಆಧಾರಿತ ‘ಒಳಚರಂಡಿ ಪುರಾಣ’
ಬೆಂಗಳೂರು: ಕಳೆದ ನಾಲ್ಕು ದಶಕಗಳಿಂದ ಸಕ್ರಿಯವಾಗಿ ವೈವಿಧ್ಯಯಮ ನಾಟಕಗಳನ್ನು ಪ್ರದರ್ಶಿಸುತ್ತಿರುವ ಅಂತರಂಗ ತಂಡವು ಜುಲೈ ತಿಂಗಳಲ್ಲಿ ವಾರಾಂತ್ಯ ಬಡಾವಣಾ ರಂಗೋತ್ಸವ ಅಂಗವಾಗಿ ಬಸವೇಶ್ವರ ನಗರದ ಕೆ.ಇ. ಎ. ಪ್ರಭಾತ್ ಸಭಾಂಗಣದಲ್ಲಿ ಜು. 4, 5 ಮತ್ತು 12ರಂದು ನಾಟಕೋತ್ಸವ ಹಮ್ಮಿಕೊಂಡಿದೆ.
ಮೂರು ದಿನಗಳ ಈ ನಾಟಕೋತ್ಸವದಲ್ಲಿ ಕೈಲಾಸಂ ಅವರ ‘ಕೈಲಾಸಂ ವೈಭವ’ ಹಾಗೂ ಡಾ. ನಾಗತಿಹಳ್ಳಿ ಚಂದ್ರಶೇಖರ್ ಅವರ ಸಣ್ಣ ಕತೆ ಆಧಾರಿತ ‘ಒಳಚರಂಡಿ ಪುರಾಣ’ ನಾಟಕಗಳನ್ನು ಪ್ರದರ್ಶಿಸಲಾಗುತ್ತಿದೆ.
ಜು.4ರಂದು ಶನಿವಾರ ಸಂಜೆ 7.15ಕ್ಕೆ ಅಂಕಲ್ ಶ್ಯಾಮ್ ಅವರ ನಿರ್ವಹಣೆಯಲ್ಲಿ ‘ಹೋಂ ರೂಲು ನಾಟಕ’ ಪ್ರದರ್ಶನಗೊಳ್ಳಲಿದೆ. ಇದಕ್ಕೂ ಮೊದಲು ಶ್ರೀಧರ್ ಎಡ್ರಾವಿ ಅವರಿಂದ ‘ಕನ್ನಡಕ್ಕೊಬ್ಬನೇ ಕೈಲಾಸಂ’ ಏಕ ವ್ಯಕ್ತಿ ಪ್ರದರ್ಶನ ನಡೆಯಲಿದೆ.
ಜು. 5ರಂದು ಭಾನುವಾರ ಸಂಜೆ 7.15ಕ್ಕೆ ಡಾ. ಬಿ.ವಿ. ರಾಜಾರಾಂ ಅವರ ಮೂಲ ನಿರ್ದೇಶನದ ‘ಹುತ್ತದಲ್ಲಿ ಹುತ್ತ’ ನಾಟಕವನ್ನು ಅರ್ಚನಾ ಶ್ಯಾಮ್ ಅವರ ಪರಿಷ್ಕರಣೆ ಮಾಡಿ ಪ್ರದರ್ಶಿಸಲಿದ್ದಾರೆ.
ಜು. 12ರಂದು ಭಾನುವಾರ ಸಂಜೆ 7.15ಕ್ಕೆ ನಿರ್ದೇಶಕ, ನಿರ್ಮಾಪಕ ಡಾ. ನಾಗತಿಹಳ್ಳಿ ಚಂದ್ರಶೇಖರ್ ಅವರ ಸಣ್ಣ ಕತೆ ಆಧಾರಿತ ಅಂತರಂಗದ ಹೊಸ ನಾಟಕ ‘ಒಳ ಚರಂಡಿ ಪುರಾಣ ಪ್ರದರ್ಶನವಾಗಲಿದೆ. ಇದಕ್ಕೆ ಡಾ. ಗೌರೀಶ್ ಜೋಶಿ ನಾಟಕ ರೂಪ ನೀಡಿದ್ದು, ಅರ್ಚನಾ ಶ್ಯಾಮ್ ಅವರ ನಿರ್ದೇಶನದಲ್ಲಿ ಪ್ರದರ್ಶನ ನಾಟಕ ಕಾಣಲಿದೆ.
ಟಿಕೆಟ್‌ಗಳಿಗೆ ಸಂಪರ್ಕಿಸಿ : ಆನ್‌ಲೈನ್ ಬುಕಿಂಗ್ : ಬುಕ್ ಮೈ ಶೋ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net