ಇನ್ನು ಜಿ¯್ಲÁ ಕೇಂದ್ರಕ್ಕೆ ೧೫ರ ಪ್ರಾಯ. ನಾಲ್ಕು ವಿಧಾನಸಭಾ ಕ್ಷೇತ್ರ, ಕಲಬುರಗಿ ಮತ್ತು ರಾಯಚೂರು ಲೋಕಾಸಭಾ ಸದಸ್ಯರನ್ನು ಪಡೆದಿದೆ. ದಶಕದ ಹಿಂದೆಯೇ ಗುರುಮಠಕಲï, ಹುಣಸಗಿ ಮತ್ತು ವಡಗೇರಾ ಹೀಗೆ ಮೂರು ಹೊಸ ತಾಲೂಕುಗಳ ರಚನೆಯಾಗಿದೆ. ತೆಲಂಗಾಣ ಗಡಿಗೆ ಹೊಂದಿಕೊAಡಿರುವ ಜಿ¯್ಲÉಯಲ್ಲಿ ಕೃಷ್ಣಾ ಮತ್ತು ಭೀಮಾ ಹೆಸರಿನ ಎರಡು ದೊಡ್ಡ ನದಿಗಳು ಹರಿಯುತ್ತವೆ. ನಾರಾಯಣಪುರದಲ್ಲಿ ಬಸವಸಾಗರ ಜಲಾಶಯವಿದೆ. ಮುಖ್ಯವಾಗಿ ಭತ್ತ, ಹತ್ತಿ ಜತೆ ತೊಗರಿ, ಜೋಳ, ಶೇಂಗಾ ಹೀಗೆ ವಿವಿಧ ಬೆಳೆಗಳ ಮೂಲಕ ಶ್ರೀಮಂತಿಕೆಯ ವ್ಯವಸಾಯ ಇಲ್ಲಿದೆ.