ಮತ್ತೆ ನವಿಲುಗಳ ಸರಣಿ ಸಾವು

Another series of peacock deaths
Another series of peacock deaths
Published on
ತುಮಕೂರು: ತಾಲೂಕಿನ ಊರ್ಡಿಗೆರೆ ಭಾಗದಲ್ಲಿ ನವಿಲುಗಳ ಸಾವಿನ ಸರಣಿ ಮುಂದುವರಿದಿದೆ. ಜಿಲ್ಲೆಯೆಲ್ಲೆಡೆ ಹೆಚ್ಚಿರುವ ನವಿಲುಗಳಲ್ಲಿ ಎಚ್​5ಎನ್​1 ವೈರಸ್​ ದೃಢವಾಗಿದ್ದರೂ ಗ್ರಾಮಗಳಲ್ಲಿ ಕೋಳಿಗಳಲ್ಲಿ ವೈರಸ್​ ತಡೆಯಲು ಮುಂಜಾಗ್ರತೆ ಕಾಣಿಸುತ್ತಿಲ್ಲ.
ಜಿಲ್ಲಾಡಳಿತ ವೈರಸ್​ ಇರುವುದನ್ನು ದೃಢಪಡಿಸಿ ಬಳಿಕ ಮೌನವಾಗಿದ್ದು, ಕೆಲವು ಗ್ರಾಮಗಳಲ್ಲಿ ಕೋಳಿಗಳು ತೂಕಡಿಸಲಾರಂಭಿಸಿರುವುದು ಜನರಲ್ಲಿ ಆತಂಕ ಹೆಚ್ಚಿಸಿದೆ. 20 ದಿನಗಳಲ್ಲಿ 54 ನವಿಲುಗಳ ಏಕಾಏಕಿ ಮೃತಪಟ್ಟಿರುವ ದಾಖಲೆ ಅರಣ್ಯ ಇಲಾಖೆಗೆ ಲಭ್ಯವಾಗಿದೆ. ಆದರೆ, ವಾಸ್ತವದಲ್ಲಿ ನೂರಾರು ನವಿಲುಗಳು ಮೃತಪಟ್ಟಿರುವ ಶಂಕೆಯಿದೆ.
ಮಂಗಳವಾರ ಹಿರೇಹಳ್ಳಿ ಕೃಷಿ ವಿಜ್ಞಾನ ಕೇಂದ್ರದ ಹಿಂಭಾಗ ಹಾಗೂ ದೇವರಾಯನದುರ್ಗ ಅರಣ್ಯ ಪ್ರದೇಶದಲ್ಲಿ 2 ಹಾಗೂ ಬುಧವಾರ ಕೋಳಿಹಳ್ಳಿ ವ್ಯಾಪ್ತಿಯಲ್ಲಿ ನವಿಲು ಮೃತಪಟ್ಟಿವೆ. ಮೂರು ದಿನದಲ್ಲಿ 9 ನವಿಲುಗಳು ಕೊನೆಯುಸಿರೆಳೆದಿವೆ. ಊರ್ಡಿಗೆರೆ ಹೋಬಳಿ ಕೋಳಿಹಳ್ಳಿ ಸುತ್ತಮುತ್ತಲಿನ 10 ಕಿಮೀ ವ್ಯಾಪ್ತಿಯ 38 ಹಳ್ಳಿಗಳ ಜನರ ಆರೋಗ್ಯ ತಪಾಸಣೆ ನಡೆಸಲಾಗುತ್ತಿದೆ. ಆರೋಗ್ಯ ಇಲಾಖೆ ಅಧಿಕಾರಿಗಳ ತಂಡ, ಆಶಾ, ಅಂಗನವಾಡಿ ಕಾರ್ಯಕರ್ತೆಯರು ಆರು ದಿನಗಳಿಂದ ಪ್ರತಿ ಮನೆಗೆ ಭೇಟಿ ನೀಡುತ್ತಿದ್ದಾರೆ. ಈಗಾಗಲೇ 15 ಗ್ರಾಮಗಳಲ್ಲಿ ಪರೀಾ ಕಾರ್ಯ ಮುಗಿದಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net