ಹಿಂದುಳಿದ ತಾಲೂಕಿಗೆ ವಿಶೇಷ ಪ್ಯಾಕೇಜ್ ಘೋಷಿಸಿ

ದೇವರಹಿಪ್ಪರಗಿ ತಾಲೂಕಿನಲ್ಲಿ ತೀವ್ರ ಬರಗಾಲ ಎದುರಾಗಿದ್ದು, ವಿಶೇಷ ಪ್ಯಾಕೇಜ್ ಘೋಷಿಸಬೇಕೆಂದು ಆಗ್ರಹಿಸಿ ಕರವೇ ವತಿಯಿಂದ ಉಪ ತಹಸೀಲ್ದಾರ್ ಸುರೇಶ ಮ್ಯಾಗೇರಿ ಅವರಿಗೆ ಮನವಿ ಸಲ್ಲಿಸಲಾಯಿತು. ವಿಜಯಕುಮಾರ ಎಂಬತ್ನಾಳ, ರಾಜು ಭಾವಿಮನಿ, ಶಿವರಾಜ ತಳವಾರ, ಚಂದ್ರಶೇಖರ ದಾನಗೊಂಡ, ಚನ್ನಪ್ಪ ಮಾವಿನಗಿಡದ ಇತರರಿದ್ದರು.
ದೇವರಹಿಪ್ಪರಗಿ ತಾಲೂಕಿನಲ್ಲಿ ತೀವ್ರ ಬರಗಾಲ ಎದುರಾಗಿದ್ದು, ವಿಶೇಷ ಪ್ಯಾಕೇಜ್ ಘೋಷಿಸಬೇಕೆಂದು ಆಗ್ರಹಿಸಿ ಕರವೇ ವತಿಯಿಂದ ಉಪ ತಹಸೀಲ್ದಾರ್ ಸುರೇಶ ಮ್ಯಾಗೇರಿ ಅವರಿಗೆ ಮನವಿ ಸಲ್ಲಿಸಲಾಯಿತು. ವಿಜಯಕುಮಾರ ಎಂಬತ್ನಾಳ, ರಾಜು ಭಾವಿಮನಿ, ಶಿವರಾಜ ತಳವಾರ, ಚಂದ್ರಶೇಖರ ದಾನಗೊಂಡ, ಚನ್ನಪ್ಪ ಮಾವಿನಗಿಡದ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ವಿಜಯಕುಮಾರ ಎಂಬತ್ನಾಳ ಆಗ್ರಹ
  • ಉಪ ತಹಸೀಲ್ದಾರ್ ಸುರೇಶ ಮ್ಯಾಗೇರಿಗೆ ಮನವಿ
ದೇವರಹಿಪ್ಪರಗಿ: ಡಾ. ಡಿ.ಎಂ. ನಂಜುಂಡಪ್ಪ ವರದಿ ಪ್ರಕಾರ ದೇವರಹಿಪ್ಪರಗಿ ಅತಿ ಹಿಂದುಳಿದ ತಾಲೂಕಾಗಿರುವುದರಿಂದ ವಿಶೇಷ ಅಭಿವೃದ್ಧಿ ಹಾಗೂ ಬರ ಪರಿಹಾರ ಪ್ಯಾಕೇಜ್ ಘೋಷಿಸಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಪದಾಧಿಕಾರಿಗಳು ತಹಸೀಲ್ದಾರ್‌ರಿಗೆ ಮನವಿಯನ್ನು ಉಪತಹಸೀಲ್ದಾರ್ ಸುರೇಶ ಮ್ಯಾಗೇರಿಗೆ ಸಲ್ಲಿಸಿದರು.
ನಂತರ ಮಾತನಾಡಿದ ಕರವೇ ತಾಲೂಕು ಅಧ್ಯಕ್ಷ ವಿಜಯಕುಮಾರ ಎಂಬತ್ನಾಳ ಅವರು, ಈ ವರ್ಷದ ಮುಂಗಾರು ಮಳೆಯ ತೀವ್ರ ಕೊರತೆಯಿಂದ ಬರ ಪರಿಸ್ಥಿತಿ ಉಂಟಾಗಿದೆ. ತಾಲೂಕಿನ ರೈತರು ಬಿತ್ತನೆ ಮಾಡಿ, ಬೀಜ, ರಸಗೊಬ್ಬರ ಖರೀದಿ, ಹೊಲ ಉಳುಮೆ ಹಾಗೂ ಇತರ ಕೃಷಿ ಕಾರ್ಯಗಳಿಗೆ ಲಕ್ಷಾಂತರ ರೂಪಾಯಿ ವೆಚ್ಚ ಮಾಡಿದ್ದು, ಮಳೆಯ ಅಭಾವದಿಂದ ಬೆಳೆಗಳು ಸಂಪೂರ್ಣವಾಗಿ ಹಾನಿಗೊಳಗಾಗಿವೆ. 
ಇದರಿಂದ ರೈತರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ದೇವರಹಿಪ್ಪರಗಿ ತಾಲೂಕು ಡಾ. ಡಿ.ಎಂ. ನಂಜುಂಡಪ್ಪ ವರದಿ ಪ್ರಕಾರ ಅತಿ ಹಿಂದುಳಿದ ತಾಲೂಕಾಗಿರುವುದರಿಂದ, ವಿಶೇಷ ಅಭಿವೃದ್ಧಿ ಹಾಗೂ ಬರ ಪರಿಹಾರ ಪ್ಯಾಕೇಜ್ ಘೋಷಿಸಬೇಕು. ಪಟ್ಟಣ ಸೇರಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಈ ವರ್ಷ ಅತ್ಯಂತ ಕಡಿಮೆ ಮಳೆಯಾಗಿರುವುದರಿಂದ ಬೆಳೆಗಳು ಸಂಪೂರ್ಣ ಹಾನಿಗೊಳಗಾಗಿವೆ. ಬೆಳೆ ಹಾನಿಗೆ ಸೂಕ್ತ ಪರಿಹಾರ ಶೀಘ್ರವಾಗಿ ವಿತರಿಸಬೇಕು. 
ಮಹಾರಾಷ್ಟ್ರದಿಂದ ನೀರು ಹರಿಸಿ ಹಾಗೂ ಮುಖ್ಯ ಕಾಲುವೆ ಮುಖಾಂತರ ತಾಲೂಕಿಗೆ ನೀರು ಪೂರೈಸಬೇಕು. ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು. ಜಾನುವಾರುಗಳಿಗಾಗಿ ಗೋಶಾಲೆಗಳನ್ನು ತೆರೆಯಬೇಕು ಹಾಗೂ ಮೇವು ಬ್ಯಾಂಕ್‌ಗಳನ್ನು ಸ್ಥಾಪಿಸಬೇಕು ಎಂದು ಆಗ್ರಹಿಸಿದರು.
ಕರವೇ ಪದಾಧಿಕಾರಿಗಳಾದ ರಾಘು ಗಂಜ್ಯಾಳ, ವಿಜು ಪಾಟೀಲ, ಅನೀಲ ಬಿರಾದಾರ, ಪ್ರಕಾಶ ಡೋಣೂರ, ಬಸವರಾಜ ಅವಟಿ, ಬಸವರಾಜ ಮಸಬಿನಾಳ, ಸಿದ್ದು ಪೂಜಾರಿ, ರಾಕೇಶ ದಾನಗೊಂಡ, ಸಿದ್ದು ಅಂಗಡಿ, ಅಂಬರೀಶ ಮಶಾನವರ, ಈಶ್ವರ ಬಾಗೇವಾಡಿ, ಅನೀಲ ಜಲಕತ್ತಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net