

ಬೆಂಗಳೂರು: ಕರಾವಳಿಸಂಸ್ಕೃತಿ, ಭಾಷೆಹಾಗೂ ಜನಪದ ಪರಂಪರೆಯನ್ನು ನಗರದಲ್ಲೂಜೀವಂತವಾಗಿಡುವ ಉದ್ದೇಶದಿಂದಅಭರಣ ಜುವೆಲ್ಲರ್ಸ್ ವತಿಯಿಂದಆಟಿಡೊಂಜಿ ದಿನವನ್ನು ಸಂಭ್ರಮದಿಂದಆಚರಿಸಲಾಯಿತು.ಆಭರಣ ಜುವೆಲ್ಲರ್ಸ್ಶೋರೂಂ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿಕಾರ್ಯಕ್ರಮ ಆಯೋಜಿಸಲಾಗಿತ್ತು.
ದಿಒರಿಜನಲ್ ಆಭರಣ ವತಿಯಿಂದ ಆಭರಣಜುವೆಲ್ಲರ್ಸ್ ಶೋರೂಂನ ವಾರ್ಷಿಕೋತ್ಸವಪ್ರಯುಕ್ತ ಪೂರ್ಣಿಮಾ ಕನ್ವೆನ್ಷನ್ಹಾಲ್‌ನಲ್ಲಿ ತುಳುನಾಡಿನಸಂಪ್ರದಾಯವಾದ ಆಟಿಡೊಂಜಿ (ಆಷಾಢಮಾಸದ ಒಂದು ದಿನ)ಆಚರಿಸಲಾಯಿತು.
ಆಭರಣಜುವೆಲ್ಲರ್ಸ್ ಸಂಸ್ಥೆಯ ಮುಖ್ಯಸ್ಥರಾದಸುಭಾಷ್ ಎಂ.ಕಾಮತ್,ಮಹೇಶ್ ಎಂ.ಕಾಮತ್,ಸಂಧ್ಯಾ ಎಸ್.ಕಾಮತ್,ಆಕರ್ಷ್ ಕಾಮತ್,ಅದಿತ್ರಿ ಕಾಮತ್ಅವರು ದೀಪ ಬೆಳಗಿಸಿ ಕಾರ್ಯಕ್ರಮಉದ್ಘಾಟಿಸಿದರು.
ಆಷಾಢಮಾಸದಲ್ಲಿ ಕರಾವಳಿಯಲ್ಲಿ ಆಚರಿಸಲಾಗುವಈ ಸಾಂಸ್ಕೃತಿಕ ದಿನವನ್ನುಬೆಂಗಳೂರಿಗರಿಗೆ ಪರಿಚಯಿಸುವಉದ್ದೇಶದಿಂದ ಆಭರಣ ಜುವೆಲ್ಲರ್ಸ್ಇದೇ ಮೊದಲ ಬಾರಿಗೆ ಗ್ರಾಹಕರುಹಾಗೂ ಸಾರ್ವಜನಿಕರನ್ನು ಈ ವಿಶೇಷಕಾರ್ಯಕ್ರಮಕ್ಕೆ ಆಹ್ವಾನಿಸಿತ್ತು.ಕಾರ್ಯಕ್ರಮದವೇದಿಕೆಯಲ್ಲಿ ಕರಾವಳಿ ಶೈಲಿಯಬಾವಿಯಿಂದ ನೀರು ಸೇದುವುದು,ಬೆಂಕಿ ಒಲೆಯಲ್ಲಿಹಂಡೆಯನ್ನಿಟ್ಟು ನೀರು ಕಾಯಿಸುವುದು,ಅಡಿಕೆ ಹಾಳೆಯಟೊಪ್ಪಿ ತೊಟ್ಟು ಬತ್ತದ ನಾಟಿಮಾಡುವುದು ಮುಂತಾದ ಆಚರಣೆಗಳನ್ನುತೋರ್ಪಡಿಸಲಾಯಿತು.ಅಲ್ಲದೆ,ಆಷಾಢ ಮಾಸದಲ್ಲಿಪ್ರಾಚೀನ ಸಂಪ್ರದಾಯದಂತೆ ಆಟಿಕಳಂಜ(ಮನೆಗೆ,ಗ್ರಾಮಕ್ಕೆಬಂದಿರುವ ರೋಗರುಜಿನವನ್ನುಹೋಗಲಾಡಿಸುವ ದೈವಿಕ ಶಕ್ತಿಯವೇಷಧಾರಿ) ನನ್ನುಕರೆಯಿಸಿ ಕಾಮತ್ ಕುಟುಂಬಸ್ಥರುಉಡುಗೊರೆ ನೀಡಿ ಗೌರವಿಸಿದರು.
ಕಾರ್ಯಕ್ರಮದಲ್ಲಿಕರಾವಳಿಯ ಮನೆಮನೆಗಳಲ್ಲಿ ಹಿಂದೆಪ್ರತಿನಿತ್ಯ ಉಪಯೋಗಿಸುತ್ತಿದ್ದಪುರಾತನ ವಸ್ತುಗಳ ಪ್ರದರ್ಶನವನ್ನುಏರ್ಪಡಿಸಲಾಗಿತ್ತು.ಅಡುಗೆಮನೆ,ಕೃಷಿ ಕಾಯಕ ಹಾಗೂಪೂಜಾ ಸಾಮಾಗ್ರಿ ಸೇರಿದಂತೆ ಇತರೆಅಪರೂಪದ ಸಾಂಪ್ರದಾಯಿಕ ವಸ್ತುಗಳುಪ್ರದರ್ಶನದಲ್ಲಿ ಗಮನ ಸೆಳೆದವು.
‘ಆಭರಣಜುವೆಲ್ಲರ್ಸ್’ನಿಂದ ಆಗಮಿಸಿದಗ್ರಾಹಕರಿಗೆ ಒಡವೆಗಳ ದರ ಊಹಿಸುವಸ್ಪರ್ಧೆ ಆಯೋಜಿಸಲಾಗಿತ್ತು.ಪ್ರದರ್ಶಿಸಲಾಗಿದ್ದಚಿನ್ನಾಭರಣದ ನಿಖರ ಬೆಲೆ ಅಥವಾಸಮೀಪದ ಬೆಲೆಯನ್ನು ಅಂದಾಜುಮಾಡಿದವರಿಗೆ ಉಡುಗೊರೆ ನೀಡಲಾಯಿತು.
ಕಾರ್ಯಕ್ರಮದಲ್ಲಿಹಲಸಿನ ಪದಾರ್ಥಗಳಾದ ಹಲಸಿನ ಕಡುಬು,ಪಾಯಸ,ತಂಜಕ್ ಪಲ್ಯ,ಪತ್ರೋಡೆ,ಶಂಖಪುಷ್ಪದಅನ್ನ, ಕಾಯಿಹೋಳಿಗೆ, ಗುಳ್ಳಸೇರಿದಂತೆ ತರಹೇವಾರಿ ಖಾದ್ಯಗಳವಿಶೇಷ ಭೋಜನ ಏರ್ಪಡಿಸಲಾಗಿತ್ತು.