30ರಂದು ಆನೇಕಲ್​ ಹಸಿಕರಗ / ANEKAL

 ಆನೇಕಲ್​ ಕರಗ ಉತ್ಸವ
ಆನೇಕಲ್​ ಕರಗ ಉತ್ಸವ
Published on
ಆನೇಕಲ್​: ಆನೇಕಲ್​ ಕರಗ ಉತ್ಸವದಲ್ಲಿ ಕರಗ ಹೊರಲು ಹೆಸರುವಾಸಿಯಾಗಿರುವ ಚಂದ್ರಪ್ಪ ಮತ್ತೆ ತಾಲೂಕಿನ ಜನರಿಗೆ ಉತ್ಸವದ ಮೆರವು ನೀಡಲು ಸಿದ್ಧವಾಗಿದ್ದಾರೆ.
ವಹ್ನಿಕುಲ ಸೇವಾ ಸಂದ ವತಿಯಿಂದ ಆನೇಕಲ್​ ಕರಗ ಧಾರ್ಮಿಕ ಉತ್ಸವ ನಡೆಸಲು ತೀರ್ಮಾನ ಮಾಡಿದ್ದು, ಏ.22ರಂದು ಧ್ವಜಾರೋಹಣದ ಮೂಲಕ ಕರಗ ಉತ್ಸವಕ್ಕೆ ಚಾಲನೆ ನೀಡಲಾಗಿದೆ. ಏ.30ರಂದು ಹಸಿಕರಗ ಹಾಗೂ ಮೂರನೇ ದಿನ ಒಣ ಕರಗ ನಡೆಯಲಿದೆ. ಪಾರ್ಥಸಾರಥಿ ಭಜನೆ ಮಂದಿರ ತಿಗಳರ ಬೀದಿಯಲ್ಲಿ ಕರಗ ಉತ್ಸವ ಆಚರಣೆ ಮಾಡಲು ವಹ್ನಿ ಕುಲ ಸೇವಾ ಸಂದವರು ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ.
23ರಂದು ಶ್ರೀಕೃಷ್ಣದೇವರ ಪ್ರಕಾರೋತ್ಸವ, 24ರಂದು ಉತ್ಸವ, 25ಕ್ಕೆ ಪ್ರಾಕಾರೋತ್ಸವ, 26ಕ್ಕೆ ರಾಜಬೀದಿಗಳಲ್ಲಿ ಉತ್ಸವ, 27ರಂದು ಅರ್ಜುನ ಸುಭದ್ರ ದೇವರುಗಳ ಪ್ರಕಾರೋತ್ಸವ, 28ಕ್ಕೆ ಧರ್ಮರಾಯ ಸ್ವಾಮಿ ದ್ರೌಪತಮ್ಮ ದೇವಿಯವರ ಕಲ್ಯಾಣೋತ್ಸವ, ಆರತಿ ದೀಪಗಳು, 29ಕ್ಕೆ ಉತ್ಸವ, 30ರಂದು ಇರಾವತನ ಪ್ರತಿಷ್ಠಾಪನೆ ಹಾಗೂ ರಾತ್ರಿ ಪಲ್ಲಕ್ಕಿ ಉತ್ಸವ ಮತ್ತು ಹಸಿಕರಗ ಮಹೋತ್ಸವ ನಡೆಯಲಿದೆ.
ಮೇ 1ರಂದು ಧರ್ಮರಾಯಸ್ವಾಮಿ ದ್ರೌಪತಮ್ಮ ಬ್ರಹ್ಮರಥೋತ್ಸವ, ಮೇ 2ರಂದು ಕೋಟೆ ಜಗಳ ಅಭಿಮನ್ಯು ಪದ್ಮವ್ಯೂಹ ಭೇದಿಸುವುದು, 3ಕ್ಕೆ ಒಣ ಕರಗ ಅಗ್ನಿಕುಂಡ ಪ್ರವೇಶ ಹಾಗೂ ಇರಾವತನ ಶಿರಶ್ಚೇಧನ ಮತ್ತು ವಾದ್ಯಗೋಷ್ಠಿ ಇರಲಿದೆ. 4ರಂದು ದಸಂತೋತ್ಸವ ಹಾಗೂ 5ಕ್ಕೆ ಧ್ವಜ ಅವರೋಹಣ ನಡೆಯಲಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net