ದಾರ್ಶನಿಕರ ಸಂದೇಶ ಪಾಲಿಸಿದರೆ ಸಮ ಸಮಾಜ

 ಕೆ.ಆರ್.ನಗರದ ಕೆಎಸ್‌ಆರ್‌ಟಿಸಿ ಘಟಕದಲ್ಲಿ ಆಯೋಜಿಸಿದ್ದ ಕನಕದಾಸರ ಜಯಂತ್ಯುತ್ಸವನ್ನು ಬಿ.ಶ್ರೀನಿವಾಸ್ ಉದ್ಘಾಟಿಸಿದರು.  ಬ್ಯಾಡರಹಳ್ಳಿ ಭಾಸ್ಕರ್, ಎ.ಡಿ.ಕುಮಾರ್, ಪಿ.ಮಹೇಶ್, ಎಂ.ಪಿ.ರಘು, ಎಂ.ಸುರೇಶ್, ಟಿ.ಯೋಗೇಶ್ ಇತರರು ಇದ್ದರು.
ಕೆ.ಆರ್.ನಗರದ ಕೆಎಸ್‌ಆರ್‌ಟಿಸಿ ಘಟಕದಲ್ಲಿ ಆಯೋಜಿಸಿದ್ದ ಕನಕದಾಸರ ಜಯಂತ್ಯುತ್ಸವನ್ನು ಬಿ.ಶ್ರೀನಿವಾಸ್ ಉದ್ಘಾಟಿಸಿದರು. ಬ್ಯಾಡರಹಳ್ಳಿ ಭಾಸ್ಕರ್, ಎ.ಡಿ.ಕುಮಾರ್, ಪಿ.ಮಹೇಶ್, ಎಂ.ಪಿ.ರಘು, ಎಂ.ಸುರೇಶ್, ಟಿ.ಯೋಗೇಶ್ ಇತರರು ಇದ್ದರು.
Published on
ಕೆ.ಆರ್.ನಗರ: ಸಂತಕವಿ ಭಕ್ತ ಕನಕದಾಸರು ಸೇರಿದಂತೆ ಇತರ ದಾರ್ಶನಿಕರು ಹೇಳಿರುವ ಸಂದೇಶಗಳನ್ನು ಎಲ್ಲರೂ ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಅನುಸರಿಸಿದಾಗ ಮಾತ್ರ ಸಮಾನತೆಯ ಸಮಾಜ ನಿರ್ಮಾಣ ಸಾಧ್ಯ ಎಂದು ಕೆಎಸ್‌ಆರ್‌ಟಿಸಿ ಮೈಸೂರು ಗ್ರಾಮಾಂತರ ವಿಭಾಗೀಯ ನಿಯಂತ್ರಣಾಧಿಕಾರಿ ಬಿ.ಶ್ರೀನಿವಾಸ್ ಹೇಳಿದರು.

ಪಟ್ಟಣದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಘಟಕದಲ್ಲಿ ಶನಿವಾರ ರಾಜ್ಯ ರಸ್ತೆ ಸಾರಿಗೆ ನಿಗಮದ ಕನಕ ನೌಕರರ ಬಳಗ ಹಾಗೂ ಕಾರ್ಮಿಕರು ಆಯೋಜಿಸಿದ್ದ ಕನಕದಾಸರ ಜಯಂತ್ಯುತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಮಹರ್ಷಿ ವಾಲ್ಮೀಕಿ, ಬಸವಣ್ಣ, ಡಾ.ಅಂಬೇಡ್ಕರ್, ಕುವೆಂಪು, ಕೆಂಪೇಗೌಡ ಸೇರಿದಂತೆ ಇತರ ಮಹಾತ್ಮರ ಸಾರಿದ ತತ್ವ ಮತ್ತು ಆದರ್ಶಗಳನ್ನು ನಾವುಗಳು ಜೀವನದಲ್ಲಿ ಅಳವಡಿಸಿಕೊಳ್ಳಬೇಕಿದೆ ಎಂದರು.

ಭಾರತೀಯ ಸಂಗೀತಕ್ಕೆ ಕನಕದಾಸರ ಕೊಡುಗೆ ಅಪಾರ. ಅವರ ಕೀರ್ತನೆಗಳು ಇಡೀ ಸಮಾಜಕ್ಕೆ ಪ್ರೇರಣಾದಾಯಕ. ಕನಕದಾಸರು ಸಿರಿವಂತಿಕೆ ಜೀವನ ತ್ಯಜಿಸಿ ಸಮಾಜದ ಸುಧಾರಣೆಗಾಗಿ ಭಿಕ್ಷಾಟನೆ ಮಾಡುತ್ತಾ ತಮ್ಮ ಕೀರ್ತನೆಗಳ ಮೂಲಕ ಸಮಾಜದ ಅಂಕು ಡೊಂಕುಗಳನ್ನು ತಿದ್ದಿದರು. ಇವರ ಆದರ್ಶಗಳನ್ನು ನಮ್ಮ ಸಂಸ್ಥೆಯ ನೌಕರರು ಪಾಲನೆ ಮಾಡಬೇಕು ಎಂದು ಸಲಹೆ ನೀಡಿದರು.

ಶಕ್ತಿ ಯೋಜನೆ ಬಂದ ನಂತರ ನೌಕರರ ಮೇಲೆ ಒತ್ತಡ ಹೆಚ್ಚಾಗಿದ್ದು, ಇದನ್ನು ಅರಿತು ಎಲ್ಲರು ಸೇವಾ ಮನೋಭಾವದಿಂದ ಕರ್ತವ್ಯ ನಿರ್ವಹಿಸುವ ಮೂಲಕ ಸಂಸ್ಥೆಗೆ ಕೀರ್ತಿ ತರಬೇಕು ಎಂದು ಮನವಿ ಮಾಡಿದರು.

ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಬ್ಯಾಡರಹಳ್ಳಿ ಭಾಸ್ಕರ್ ಕನಕದಾಸರ ಕುರಿತು ವಿಶೇಷ ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ಕೆಎಸ್‌ಆರ್‌ಟಿಸಿ ಕೆ.ಆರ್.ನಗರ ಘಟಕದ ವ್ಯವಸ್ಥಾಪಕ ಎ.ಡಿ.ಕುಮಾರ್, ಮೈಸೂರು ಗ್ರಾಮಾಂತರ ವಿಭಾಗೀಯ ಯಾಂತ್ರಿಕ ಅಭಿಯಂತರ ಪಿ.ಮಹೇಶ್, ಸಹಾಯಕ ಭದ್ರತಾ ಮತ್ತು ಜಾಗೃತಾಧಿಕಾರಿ ಎಂ.ಪಿ.ರಘು, ಸಹಾಯಕ ಸಂಚಾರ ನಿರೀಕ್ಷಕ ಎಂ.ಸುರೇಶ್ ಮಾತನಾಡಿದರು.

ಕನಕ ನೌಕರರ ಬಳಗದ ಅಧ್ಯಕ್ಷ ಟಿ.ಯೋಗೇಶ್, ಉಪಾಧ್ಯಕ್ಷ ಮಂಜುನಾಥ್, ಶಿವಾನಂದ ಕುರಿ, ಖಜಾಂಚಿ ಆರ್.ಸತೀಶ್, ಸಮನ್ವಯ ಸಮಿತಿ ಅಧ್ಯಕ್ಷ ಜಿ.ಪಿ.ಶಿವಣ್ಣ, ಕಾರ್ಯದರ್ಶೀ ಎಲ್.ಕೆ.ಚಂದ್ರು, ಪದಾಧಿಕಾರಿಗಳಾದ ಅಣ್ಣೇಗೌಡ, ವೆಂಕಟೇಶ್, ಆಲಾಂಬಾಡಿ ಪ್ರಸನ್ನ, ಲಕ್ಷ್ಮಣೇಗೌಡ, ಅಶೋಕ್, ದೇವರಾಜು, ವೀರಭದ್ರಸ್ವಾಮಿ, ಶ್ರೀಕಾಂತ್, ಪಿ.ಅಶೋಕ್ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net