

ಪ್ರಮುಖ ಮುಖ್ಯಾಂಶಗಳು
ಬೆಂಗಳೂರು:ಚನ್ನಪಟ್ಟಣದಲ್ಲಿನಡೆದ ಇತ್ತೀಚೆಗೆ ನಡೆದ ರಾಷ್ಟ್ರೀಯಮಟ್ಟದ ಓಪನ್ಕರಾಟೆ ಚಾಂಪಿಯನ್‌ಶಿಪ್–2026ರಲ್ಲಿಬೆಂಗಳೂರಿನ ಆ್ಯಂಪಲ್ ಪಬ್ಲಿಕ್ಶಾಲೆಯ ವಿದ್ಯಾರ್ಥಿಗಳು ಅತ್ಯುತ್ತಮಪ್ರದರ್ಶನ ನೀಡಿ ಪ್ರಥಮ ಸ್ಥಾನಗಳಿಸುವ ಮೂಲಕ ಶಾಲೆಗೆ ಕೀರ್ತಿತಂದಿದ್ದಾರೆ.
ಇಂಡಿಯನ್ ಅಕಾಡೆಮಿಆಫ್ ಮಾರ್ಷಿಯಲ್ ಆರ್ಟ್ಸ್ ವತಿಯಿಂದಆಯೋಜಿಸಿದ್ದ ಈ ರಾಷ್ಟ್ರೀಯ ಮಟ್ಟದಮುಕ್ತ ಕರಾಟೆ ಪಂದ್ಯಾವಳಿಯಲ್ಲಿದೇಶದ ವಿವಿಧ ಭಾಗಗಳಿಂದ ಸ್ಪರ್ಧಿಗಳುಭಾಗವಹಿಸಿದ್ದರು.ಈ ಸ್ಪರ್ಧೆಯಲ್ಲಿಆ್ಯಂಪಲ್ ಪಬ್ಲಿಕ್ ಶಾಲೆಯಿಂದಒಟ್ಟು 9 ಮಂದಿವಿದ್ಯಾರ್ಥಿಗಳು,ಅದರಲ್ಲಿ 6ವಿದ್ಯಾರ್ಥಿನಿಯರುಹಾಗೂ 3 ವಿದ್ಯಾರ್ಥಿಗಳುಪಾಲ್ಗೊಂಡು ತಮ್ಮ ಪ್ರತಿಭೆಯನ್ನುಪ್ರದರ್ಶಿಸಿ ಒಟ್ಟಾರೆ ಪ್ರಥಮಬಹುಮಾನವನ್ನು ತಮ್ಮದಾಗಿಸಿಕೊಂಡರು.
ವಿದ್ಯಾರ್ಥಿಗಳಈ ಸಾಧನೆಗೆ ಶಾಲೆಯ ಆಡಳಿತ ಮಂಡಳಿ,ಶಿಕ್ಷಕ ವೃಂದಹಾಗೂ ಪೋಷಕರು ಹರ್ಷ ವ್ಯಕ್ತಪಡಿಸಿದ್ದಾರೆ.ವಿದ್ಯಾರ್ಥಿಗಳನಿರಂತರ ಪರಿಶ್ರಮ,ತರಬೇತುದಾರರಮಾರ್ಗದರ್ಶನ ಮತ್ತು ಶಾಲೆಯಪ್ರೋತ್ಸಾಹದಿಂದ ಈ ಯಶಸ್ಸುಸಾಧ್ಯವಾಗಿದೆ ಎಂದು ಶಾಲೆಯ ಆಡಳಿತಮಂಡಳಿ ತಿಳಿಸಿದೆ.
ವಿದ್ಯಾರ್ಥಿಗಳಸಾಧನೆಯನ್ನು ಶ್ಲಾಘಿಸಿರುವಶಾಲೆಯ ಅಧ್ಯಕ್ಷೆ ಜ್ಯೋತಿ ಮಲ್ಲಿನಾಥ್ಗೋವಿನ್ ಹಾಗೂ ಕಾರ್ಯದರ್ಶಿಮಲ್ಲಿನಾಥ್ ಗೋವಿನ್ ವಿಜೇತವಿದ್ಯಾರ್ಥಿಗಳನ್ನು ಅಭಿನಂದಿಸಿ,ಮುಂದಿನ ದಿನಗಳಲ್ಲಿಯೂರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿಇನ್ನಷ್ಟು ಸಾಧನೆ ಮಾಡುವಂತೆ ಶುಭಹಾರೈಸಿದರು.
ಶಾಲೆಯ ಶಿಕ್ಷಕರುಮತ್ತು ಸಿಬ್ಬಂದಿಯೂ ವಿಜೇತವಿದ್ಯಾರ್ಥಿಗಳಿಗೆ ಅಭಿನಂದನೆಸಲ್ಲಿಸಿ, ಕ್ರೀಡೆಮತ್ತು ಶಿಕ್ಷಣ ಎರಡರಲ್ಲೂ ಸಮಾನಸಾಧನೆ ಮಾಡುವಂತೆ ಪ್ರೋತ್ಸಾಹಿಸಿದರು.ರಾಷ್ಟ್ರೀಯಮಟ್ಟದಲ್ಲಿ ಶಾಲೆಯ ಹೆಸರುಬೆಳಗಿಸಿರುವ ವಿದ್ಯಾರ್ಥಿಗಳಸಾಧನೆ ಇತರ ವಿದ್ಯಾರ್ಥಿಗಳಿಗೂಸ್ಫೂರ್ತಿಯಾಗಿದೆ ಎಂದು ಅವರುಅಭಿಪ್ರಾಯಪಟ್ಟರು.