ಅಂಬೇಡ್ಕರ್ ಆಧುನಿಕ ಭಾರತದ ನಿರ್ಮಾತೃ

ಇಂಡಿ ನಗರದ ಅಂಬೇಡ್ಕರ್ ನಗರದಲ್ಲಿ ಡಾ. ಬಾಬಾಸಾಹೇಬ ಅಂಬೇಡ್ಕರ  ಜಯಂತಿ ಕಾರ್ಯಕ್ರಮದಲ್ಲಿ ಶಾಸಕ ಯಶವಂತರಾಯಗೌಡ ಪಾಟೀಲ ಮಾತನಾಡಿದರು. ಅಜಿತ್ ಧನಶೆಟ್ಟಿ, ಬಿ.ಡಿ. ಪಾಟೀಲ,  ಸದಾಶಿವ ಕಟ್ಟಿಮನಿ, ಸತ್ತಾರ ಬಾಗವಾನ, ಅಯೂಬ ನಾಟಿಕಾರ, ಶಿವು ಬಗಲಿ ಮತ್ತಿತರರಿದ್ದರು.
ಇಂಡಿ ನಗರದ ಅಂಬೇಡ್ಕರ್ ನಗರದಲ್ಲಿ ಡಾ. ಬಾಬಾಸಾಹೇಬ ಅಂಬೇಡ್ಕರ ಜಯಂತಿ ಕಾರ್ಯಕ್ರಮದಲ್ಲಿ ಶಾಸಕ ಯಶವಂತರಾಯಗೌಡ ಪಾಟೀಲ ಮಾತನಾಡಿದರು. ಅಜಿತ್ ಧನಶೆಟ್ಟಿ, ಬಿ.ಡಿ. ಪಾಟೀಲ, ಸದಾಶಿವ ಕಟ್ಟಿಮನಿ, ಸತ್ತಾರ ಬಾಗವಾನ, ಅಯೂಬ ನಾಟಿಕಾರ, ಶಿವು ಬಗಲಿ ಮತ್ತಿತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶಾಸಕ ಯಶವಂತರಾಯಗೌಡ ಪಾಟೀಲ ಅಭಿಮತ
  • ಸಮಸಮಾಜದ ನೇತಾರ
ಇಂಡಿ: ಸ್ವಾತಂತ್ರೃ, ಸಮಾನತೆ, ಭ್ರಾತೃತ್ವ ಹಾಗೂ ಸಾಮಾಜಿಕ ನ್ಯಾಯದ ತಳಹಾದಿ ಮೇಲೆ ಭಾರತ ಸಂವಿಧಾನ ರಚಿಸಿ ಆಧುನಿಕ ಪ್ರಜಾಪ್ರಭುತ್ವವನ್ನು ಭಾರತದಲ್ಲಿ ರೂಪಿಸಿದವರು ಡಾ. ಬಿ.ಆರ್. ಅಂಬೇಡ್ಕರ್ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.
ಅಂಬೇಡ್ಕರ್ ನಗರದಲ್ಲಿ ಇತ್ತೀಚೆಗೆ ಗೌತಮ ಬುದ್ಧರ 2570ನೇ ಬುದ್ಧ ಪೂರ್ಣಿಮೆ ಮತ್ತು ಡಾ. ಬಿ.ಆರ್. ಅಂಬೇಡ್ಕರ್ 135ನೇ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಡಾ. ಬಿ.ಆರ್.ಅಂಬೇಡ್ಕರ್ ಆಧುನಿಕ ಭಾರತದ ನಿರ್ಮಾತೃವಾಗಿದ್ದು, ಶೋಷಿತ ಸಮುದಾಯಗಳ ಬಿಡುಗಡೆಗಾಗಿ ಶ್ರಮಿಸಿದ್ದರು. ಮಹಿಳೆಯರ ಸ್ವಾವಲಂಬನೆ ಬದುಕಿಗಾಗಿ ಹೋರಾಡಿ, ಅವರ ನೇತತ್ವದಲ್ಲಿ ರಚನೆಯಾದ ಸಂವಿಧಾನದಿಂದ ಈಗ ಎಲ್ಲೆಡೆಯೂ ಸಮಾನತೆ, ಸಮಾಧಾನ ನೆಲೆಸಿದೆ ಎಂದರು.
ಕಲಬುರಗಿ ಕರ್ನಾಟಕ ಕೇಂದ್ರೀಯ ವಿ.ವಿಯ ಪಾಧ್ಯಾಪಕ ಡಾ. ಅಪ್ಪಗೆರೆ ಸೋಮಶೇಖರ ಉಪನ್ಯಾಸ ನೀಡಿ, ಬಾಬಾ ಸಾಹೇಬ ಅಂಬೇಡ್ಕರ್ ರಚಿಸಿದ ಭಾರತ ಸಂವಿಧಾನದಿಂದ ದೇಶದ ಎಲ್ಲಾ ಜಾತಿ, ಧರ್ಮ, ಮತ, ಪಂಥ ಸಮುದಾಯಗಳಿಗೂ ಶಿಕ್ಷಣ,  ಉದ್ಯೋಗ, ರಾಜಕೀಯ ಅಧಿಕಾರ, ಮತದಾನ ಹಕ್ಕು, ನ್ಯಾಯ ಮೂಲಭೂತ ಹಕ್ಕುಗಳನ್ನು  ಕಲ್ಪಿಸಿದ್ದಾರೆ ಎಂದರು.
ಅಂಬೇಡ್ಕರ್ ಕೇವಲ ದಲಿತರ ನಾಯಕ ಮಾತ್ರವಲ್ಲ. ದೇಶದ ಎಲ್ಲಾ ಜನರ ಹಿತಕ್ಕಾಗಿ ದುಡಿದವರು. ಕಾರ್ಮಿಕರು, ರೈತರು ಮಹಿಳೆಯರ ಪ್ರಗತಿಗಾಗಿ ಹೋರಾಡಿದವರು. ಕಾರ್ಮಿಕರ ದುಡಿಮೆ ಅವಧಿಯನ್ನು 8 ಗಂಟೆಗೆ ನಿಗದಿ ಮಾಡಿ ಕಾನೂನು ರೂಪಿಸಿದವರು  ಎಂದು ಹೇಳಿದರು.
ಬುದ್ಧ ವಿಹಾರ ಸಿಂದಗಿಯ ಸಂಘಪಾಲ ಬಂತೇಜಿ, ವಿಕಾಸ ಗುಡಿಮನಿ, ಪ್ರೊ. ಎಸ್.ಜೆ. ಮಾಡ್ಯಾಳ, ಗ್ಯಾರಂಟಿ ಯೋಜನಾ ಕಮಿಟಿ ತಾಲೂಕು ಅಧ್ಯಕ್ಷ ಪ್ರಶಾಂತ ಕಾಳೆ, ಸಾದ್ವಿ ಬಸವರಾಜ ಮಾಶ್ಯಾಳ ಮಾತನಾಡಿದರು.
ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಅಜಿತ್ ಧನಶೆಟ್ಟಿ, ಜೆಡಿಎಸ್ ಮುಖಂಡ ಬಿ.ಡಿ. ಪಾಟೀಲ, ಡಿವೈಎಸ್ಪಿ ಸದಾಶಿವ ಕಟ್ಟಿಮನಿ, ಸತ್ತಾರ ಬಾಗವಾನ, ಅಯೂಬ ನಾಟಿಕಾರ, ಶಿವು ಬಗಲಿ, ಮಲ್ಲಪ್ಪ ಕಾಲೆಭಾಗ, ಭೀಮಾಶಂಕರ ಮೂರಮನ ಮತ್ತಿತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net