ಕಾನಹೊಸಹಳ್ಳಿ: ಇಮಡಾಪುರ ಸಂಗಮೇಶ್ವರ ಗುಡ್ಡದ ಬಳಿ ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಗೆ ಒಂಬತ್ತು ಕೋಟಿ ರೂ.ವೆಚ್ಚದಲ್ಲಿ ಸ್ವಂತ ಕಟ್ಟಡ ನಿರ್ಮಿಸಲಾಗಿದೆ. ಆದರೆ, ಬಾಡಿಗೆ ಕಟ್ಟಡದಲ್ಲಿರುವ ವಿದ್ಯಾರ್ಥಿಗಳನ್ನು ಇನ್ನೂ ನೂತನ ಕಟ್ಟಡಕ್ಕೆ ಸ್ಥಳಾಂತರಗೊಳಿಸಿಲ್ಲ. ಶಿಕ್ಷಕರ ವಸತಿಗೃಹ, ಕಾಂಪೌಂಡ್, ಸಂಪರ್ಕ ರಸ್ತೆ ಕಾಮಗಾರಿ ಕೂಡ ನನೆಗುದಿಗೆ ಬಿದ್ದಿದೆ.