ಅಂಬೇಡ್ಕರ್​ ಒಂದು ಧರ್ಮಕ್ಕೆ ಸೀಮಿತವಲ್ಲ Ambedkar

ಅಂಬೇಡ್ಕರ್​ ಒಂದು ಧರ್ಮಕ್ಕೆ ಸೀಮಿತವಲ್ಲ Ambedkar
ಅಂಬೇಡ್ಕರ್​ ಒಂದು ಧರ್ಮಕ್ಕೆ ಸೀಮಿತವಲ್ಲ Ambedkar
Published on
ಮಡಿವಾಳ: ಡಾ. ಬಿ.ಆರ್​.ಅಂಬೇಡ್ಕರ್​ ಯಾವುದೇ ಒಂದು ಧರ್ಮಕ್ಕೆ ಹಾಗೂ ಜಾತಿಗೆ ಸೀಮಿತರಲ್ಲ. ಅವರು ಸಂವಿಧಾನದಲ್ಲಿ ಎಲ್ಲರಿಗೂ ಸ್ವ ಇಚ್ಛೆಯಂತೆಯೇ ಬದುಕಲು ಅವಕಾಶ ಮಾಡಿಕೊಟ್ಟಿರುವ ಹಿನ್ನೆಲೆಯಲ್ಲಿ ದೇವರ ಸಮಾನರು ಎಂದು ಶಾಸಕ ಕೆ.ವೈ.ನಂಜೇಗೌಡ ಹೇಳಿದರು. Ambedkar
ಮಾಲೂರು ತಾಲೂಕು ಮಡಿವಾಳ ಜೈ ಭೀಮ್​ ಕ್ಷೇಮಾಭಿವೃದ್ಧಿ ಸಂಘದಿಂದ ಹಮ್ಮಿಕೊಂಡಿದ್ದ ಡಾ.ಬಿ.ಆರ್​.ಅಂಬೇಡ್ಕರ್​ ಜಯಂತಿಯಲ್ಲಿ ಮಾತನಾಡಿ, ಸಂವಿಧಾನದಲ್ಲಿ ಎಲ್ಲ ವರ್ಗದವರಿಗೂ ಸಾಮಾಜಿಕ ನ್ಯಾಯ, ಸಮಾನತೆ ಕೊಡಿಸುವಲ್ಲಿ ಅವರ ಪಾತ್ರ ಮಹತ್ತರವಾದದ್ದು ಎಂದು ಹೇಳಿದರು.
ಮಾಜಿ ಅಧ್ಯಕ್ಷ ಜಯರಾಮೇಗೌಡ, ವೆಂಕಟೇಶ್​, ಮಂಜುನಾಥ್​. ಕೆ.ಚನ್ನಚಾರಿ ಬಾಬು, ಪಾಪಣ್ಣ, ನಟರಾಜ್​, ಅಶ್ವತ್ಥ್​, ಸುರೇಶ್​, ಭರತ್​, ವಿಜಿ, ಮುನಿರಾಜ್​, ಆನಂದ್​, ಅರುಣ್​ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net