ಸೇಡಂನಲ್ಲಿ ಅಂಬೇಡ್ಕರ್​ ಹಬ್ಬ ನಾಳೆ

ಸೇಡಂನಲ್ಲಿ ಡಾ.ಬಿ.ಆರ್​.ಅಂಬೇಡ್ಕರ್​ ಅವರ 135ನೇ ಜಯಂತ್ಯುತ್ಸವದ ಕರಪತ್ರವನ್ನು  ಬಿಡುಗಡೆಗೊಳಸಲಾಯಿತು. ಮಹಾಂತಪ್ಪ ಸಂಗಾವಿ, ಶಿವಕುಮಾರ ತೊಟ್ನಳ್ಳಿ, ಗೌತಮ ಹಳ್ಳಿ, ವಿಲಾಸಗೌತಂ ನಿಡಗುಂದಾ, ಅರುಣ ಮುಡಬೂಳಕರ್​, ಮಹಾವೀರ ಅಳ್ಳೊಳ್ಳಿ ಇದ್ದರು.
ಸೇಡಂನಲ್ಲಿ ಡಾ.ಬಿ.ಆರ್​.ಅಂಬೇಡ್ಕರ್​ ಅವರ 135ನೇ ಜಯಂತ್ಯುತ್ಸವದ ಕರಪತ್ರವನ್ನು ಬಿಡುಗಡೆಗೊಳಸಲಾಯಿತು. ಮಹಾಂತಪ್ಪ ಸಂಗಾವಿ, ಶಿವಕುಮಾರ ತೊಟ್ನಳ್ಳಿ, ಗೌತಮ ಹಳ್ಳಿ, ವಿಲಾಸಗೌತಂ ನಿಡಗುಂದಾ, ಅರುಣ ಮುಡಬೂಳಕರ್​, ಮಹಾವೀರ ಅಳ್ಳೊಳ್ಳಿ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಉತ್ಸವ ಸಮಿತಿ ತಾಲೂಕು ಅಧ್ಯಕ್ಷ ಗೌತಮ ಹಳ್ಳಿ ಮಾಹಿತಿ
  • ಬೆಳಗ್ಗೆ ಬೃಹತ್​ ಬೈಕ್​, ಕಾರು ರ‍್ಯಾಲಿ
ಸೇಡಂ: ದೇಶಕ್ಕೆ ಸಂವಿಧಾನವನ್ನು ನೀಡುವ ಮೂಲಕ ಸರ್ವರಿಗೂ ಸಮಾನತೆ ಬದುಕು ಕಟ್ಟಿಕೊಟ್ಟಿರುವ ಮಹಾನ್​ ಚೇತನ ಡಾ.ಬಿ.ಆರ್​.ಅಂಬೇಡ್ಕರ್​ ಅವರ 135ನೇ ಜಯಂತಿಯನ್ನು ಈ ಬಾರಿ ಹಬ್ಬವಾಗಿ ಆಚರಣೆ ಮಾಡಲು ನಿರ್ಧರಿಸಲಾಗಿದೆ ಎಂದು ಜಯಂತ್ಯುತ್ಸವ ಸಮಿತಿ ಅಧ್ಯಕ್ಷ ಗೌತಮ್​ ಹಳ್ಳಿ ಹೇಳಿದರು.
ಮಂಗಳವಾರ ಬೆಳಗ್ಗೆ 11ಕ್ಕೆ ಬಸವೇಶ್ವರ ವೃತದಿಂದ ಡಾ.ಬಿ.ಆರ್​.ಅಂಬೇಡ್ಕರ್​ ಪುತ್ಥಳಿವರೆಗೆ ಬೈಕ್​ ಮತ್ತು ಕಾರುಗಳ ರ‍್ಯಾಲಿ ನಡೆಯಲಿದೆ. ಮಧ್ಯಾಹ್ನ 2ಕ್ಕೆ ಶ್ರೀ ಕೊತ್ತಲ ಬಸವೇಶ್ವರ ದೇವಾಲಯದಿಂದ ಕಾರ್ಯಕ್ರಮ ನಡೆಯುವ ಪುತ್ಥಳಿ ಆವರಣದವರೆಗೆ ನಾಡಿನ ಕಲಾ ತಂಡಗಳೊಂದಿಗೆ ಬಾಬಾ ಸಾಹೇಬರ ಭಾವಚಿತ್ರದ ಭವ್ಯ ಮೆರವಣಿಗೆ ಜರುಗಲಿದೆ. ಸಂಜೆ 5ಕ್ಕೆ ಪುತ್ಥಳಿ ಮುಂಭಾಗದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಬೀದರ್​ನ ಭಂತೆ ವರಜ್ಯೋತಿ, ಕೋಡ್ಲಾದ ಶ್ರೀ ಜ್ಞಾನಪ್ರಕಾಶ ಸ್ವಾಮೀಜಿ, ಚಿತ್ರದುರ್ಗದ ಶ್ರೀ ಬಸವನಾಗಿದೇವ ಸ್ವಾಮೀಜಿ ಸಾನ್ನಿಧ್ಯವಹಿಸುವರು ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಸಚಿವರಾದ ಡಾ.ಶರಣಪ್ರಕಾಶ ಪಾಟೀಲ್​, ಪ್ರಿಯಾಂಕ್​ ಖರ್ಗೆ ಉದ್ಘಾಟಿಸುವರು. ಮಾಜಿ ಸಚಿವ ಎನ್​.ಮಹೇಶ, ಮಾಜಿ ಶಾಸಕ ರಾಜಕುಮಾರ ಪಾಟೀಲ್​ ತೆಲ್ಕೂರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವರು. ಉತ್ಸವ ಸಮಿತಿ ಅಧ್ಯಕ್ಷ ಗೌತಮ ಹಳ್ಳಿ ಅಧ್ಯಕ್ಷತೆವಹಿಸುರು. ಹಿರಿಯ ಪತ್ರಕರ್ತೆ ರಾಧಾ ಹಿರೇಗೌಡರ ವಿಶೇಷ ಉಪನ್ಯಾಸ ನೀಡುವರು. ಕೃಷಿಕ ಸಮಾಜದ ರಾಜ್ಯ ಪ್ರತಿನಿಧಿ ಬಸವರಾಜ ಪಾಟೀಲ್​ ಊಡಗಿ, ಬಿಜೆಪಿ ಮುಖಂಡ ಶಿವಕುಮಾರ ಪಾಟೀಲ್​ ತೆಲ್ಕೂರ ಸೇರಿ ಇತರರು ಮುಖ್ಯಅತಿಥಿಗಳಾಗಿ ಭಾಗವಹಿಸುವರು. ವಿವಿಧ ಕ್ಷೇತ್ರದ ಸಾಧಕರಾದ ಮಹಾದೇವಪ್ಪ ದಿಡ್ಡಿಮನಿ, ಮಲ್ಲಿಕಾರ್ಜುನ ಗಿರಿ, ಮದನಿಕಾಂತ ಶೃಂಗೇರಿ, ಶರಣಯ್ಯಸ್ವಾಮಿ, ಗುರುರಾಜ ಕುಲಕರ್ಣಿ, ಶರಣು ಮಹಾಗಾಂವ್​ ಅವರನ್ನು ವಿಶೇಷವಾಗಿ ಸತ್ಕರಿಸಲಾಗುವುದು ಎಂದು ತಿಳಿಸಿದರು.
ಮಹಾಂತಪ್ಪ ಸಂಗಾವಿ, ಶಿವಕುಮಾರ ತೊಟ್ನಳ್ಳಿ, ವಿಲಾಸಗೌತಂ ನಿಡಗುಂದಾ, ಅರುಣ ಮುಡಬೂಳಕರ್​, ಸಾಗರ ಕಲಕಂಭ, ಮಹಾವೀರ ಅಳ್ಳೊಳ್ಳಿ, ಸಂತೋಷ ಬೆನಕನಹಳ್ಳಿ, ಜೈಭೀಮ ಬೆನಕನಹಳ್ಳಿ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net