ಮಲ್ಲಮ್ಮನ ಬೆಳವಡಿ: ಸಮೀಪದ ಲಿಂಗದಳ್ಳಿ ಗ್ರಾಮದ ಶ್ರೀ ಅಂಬಾದೇವಿ ಜಾತ್ರೋತ್ಸವ ಜ.5 ರಿಂದ 9ರವರೆಗೆ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ನೇತೃತ್ವದಲ್ಲಿ ನೆರವೇರಲಿದೆ. ಜ.5ರಂದು ಬೆಳಗ್ಗೆ ಗಂಗಾಪೂಜೆ, ಗೋಪೂಜೆ, 9ಕ್ಕೆ ಅಂಬಾದೇವಿ ಪಲ್ಲಕ್ಕಿ ಉತ್ಸವ, ಕುಂಭ ಮೆರವಣಿಗೆ ಹಾಗೂ ಸುೇತ್ರ ಇಂಚಲದ ಡಾ.ಶಿವಾನಂದ ಭಾರತಿ ಶ್ರೀಗಳ ಸಾರೋಟ ಮೆರವಣಿಗೆ, ಸಂಜೆ 7ಕ್ಕೆ ಪ್ರವಚನ ಜರುಗಲಿದೆ. ಜ.6 ರಂದು ದುರ್ಗಾ ಸಪ್ತಶತಿ ಪಾರಾಯಣ, ದೇವಿ ಪುರಾಣ, ಸಂಜೆ 4ಕ್ಕೆ ಹರಿಕೀರ್ತನೆ ನಡೆಯಲಿದೆ. ಜ.7ರಂದು ಬೆಳಗ್ಗೆ ದೇವಿ ಪಾರಾಯಣ ನಡೆಯಲಿದೆ. ಜ.8 ರಂದು ಬೆಳಗ್ಗೆ ಬಸವ ಉತ್ಸವ ಹಾಗೂ ಬಾಗಲಕೋಟೆ ನವನಗರದ ಬೃಂದಾವನ ಯೋಗಿನಿ ಯೋಗ ಬಳಗದವರಿಂದ ಕಾರ್ಯಕ್ರಮ ಜರುಗಲಿವೆ. ಜ.9ರಂದು ಬೆಳಗ್ಗೆ 9 ಗಂಟೆಗೆ ಗ್ರಾಮಸ್ಥರಿಂದ ಸಾಮೂಹಿಕವಾಗಿ ಶ್ರೀ ಅಂಬಾದೇವಿಗೆ ಉಡಿತುಂಬುವ ಕಾರ್ಯಕ್ರಮ ಜರಗಲಿದೆ ಎಂದು ಅಂಬಾದೇವಿ ಸೇವಾ ಅಭಿವೃದ್ಧಿ ಸಂದ ಪದಾಧಿಕಾರಿಗಳು ತಿಳಿಸಿದ್ದಾರೆ.