ಥಳಿ ಕ್ಷೇತ್ರದಲ್ಲಿ ಮೈತ್ರಿ ಅಬ್ಬರದ ಪ್ರಚಾರ / ANEKAL

ತಮಿಳುನಾಡಿನ ಥಳಿ ವಿಧಾನಸಭಾ ೇತ್ರದ ಡಿಎಂಕೆ&ಕಾಂಗ್ರೆಸ್​ ಮೈತ್ರಿ ಅಭ್ಯರ್ಥಿ ಸಿಪಿಐ ಪದ ಟಿ.ರಾಮಚಂದ್ರನ್​ ಪರವಾಗಿ ಕರ್ನಾಟಕ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್​ ಮತ್ತು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅಬ್ಬರದ ಪ್ರಚಾರ ನಡೆಸಿದರು. ಶಾಸಕ ಬಿ.ಶಿವಣ್ಣ, ಹೊಸೂರು ಶಾಸಕ ವೈ.ಪ್ರಕಾಶ್​, ಕೆಪಿಸಿಸಿ ಕಾರ್ಯದರ್ಶಿ ಎಂ.ಬಾಬುರೆಡ್ಡಿ, ಬಮೂಲ್​ ನಿರ್ದೇಶಕ ಆರ್​.ಕೆ.ರಮೇಶ್​ ಇದ್ದರು.
ತಮಿಳುನಾಡಿನ ಥಳಿ ವಿಧಾನಸಭಾ ೇತ್ರದ ಡಿಎಂಕೆ&ಕಾಂಗ್ರೆಸ್​ ಮೈತ್ರಿ ಅಭ್ಯರ್ಥಿ ಸಿಪಿಐ ಪದ ಟಿ.ರಾಮಚಂದ್ರನ್​ ಪರವಾಗಿ ಕರ್ನಾಟಕ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್​ ಮತ್ತು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅಬ್ಬರದ ಪ್ರಚಾರ ನಡೆಸಿದರು. ಶಾಸಕ ಬಿ.ಶಿವಣ್ಣ, ಹೊಸೂರು ಶಾಸಕ ವೈ.ಪ್ರಕಾಶ್​, ಕೆಪಿಸಿಸಿ ಕಾರ್ಯದರ್ಶಿ ಎಂ.ಬಾಬುರೆಡ್ಡಿ, ಬಮೂಲ್​ ನಿರ್ದೇಶಕ ಆರ್​.ಕೆ.ರಮೇಶ್​ ಇದ್ದರು.
Published on
ಆನೇಕಲ್​ : ತಮಿಳುನಾಡು ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಥಳಿ ವಿಧಾನಸಭಾ ೇತ್ರದ ಡಿಎಂಕೆ&ಕಾಂಗ್ರೆಸ್​ ಮೈತ್ರಿ ಅಭ್ಯರ್ಥಿ ಸಿಪಿಐ ಪದ ಟಿ.ರಾಮಚಂದ್ರನ್​ ಪರವಾಗಿ ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್​ ಮತ್ತು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮತಯಾಚನೆ ಮಾಡಿದರು.
ಪ್ರಚಾರದ ಹಿನ್ನೆಲೆಯಲ್ಲಿ ಹೆಚ್ಚಿನ ಕಾರ್ಯಕರ್ತರು ಕೆಲಮಂಗಲದಲ್ಲಿ ಜಮಾವಣೆಗೊಂಡಿದ್ದರು. ಕೆಲಮಂಗಲದಲ್ಲಿ ಕಾಂಗ್ರೆಸ್​ ಡಿಎಂಕೆ, ಸಿಪಿಐ ಮೈತ್ರಿಕೂಟದ ಅಭ್ಯರ್ಥಿ ಟಿ.ರಾಮಚಂದ್ರ ಪರವಾಗಿ 3000ಕ್ಕೂ ಹೆಚ್ಚು ಕಾರ್ಯಕರ್ತರು ಬೃಹತ್​ ರ್ಯಾಲಿ ಮತ್ತು ಪ್ರಚಾರ ಸಭೆಯಲ್ಲಿ ಭಾಗವಹಿಸಿದ್ದರು.
ಡಿ.ಕೆ.ಶಿವಕುಮಾರ್​ ಮಾತನಾಡಿ, ಸಂವಿಧಾನ ರಣೆಗಾಗಿ ಇಂಡಿಯಾ ಒಕ್ಕೂಟದ ಅವಶ್ಯಕತೆಯಿದೆ. ಈ ನಿಟ್ಟಿನಲ್ಲಿ ಇಂಡಿಯಾ ಒಕ್ಕೂಟದ ಮೈತ್ರಿ ಅಭ್ಯರ್ಥಿ ಟಿ.ರಾಮಚಂದ್ರನ್​ ಅವರನ್ನು ಗೆಲ್ಲಿಸಬೇಕು. ಪ್ರಧಾನಿ ಮೋದಿ ಅವರು ಚುನಾವಣೆ ಪೂರ್ವದಲ್ಲಿ ಅಚ್ಛೆ ದಿನ್​ ತರುತ್ತೇವೆ ಎಂದು ಹೇಳಿದ್ದರು. ಗೆದ್ದರೆ 15 ಲ ರೂಪಾಯಿ ಪ್ರತಿಯೊಬ್ಬರ ಖಾತೆಗೆ ಹಾಕಲಾಗುವುದು ಎಂದು ಹೇಳಿದ್ದರು. ಆದರೆ ಮಾತಿನಂತೆ ನಡೆದುಕೊಂಡಿಲ್ಲ. ಆದರೆ ಕಾಂಗ್ರೆಸ್​ ಸರ್ಕಾರವು ನುಡಿದಂತೆ ನಡೆದಿದೆ. ಐದು ಗ್ಯಾರಂಟಿಗಳನ್ನು ಜಾರಿಗೊಳಿಸಿ ಬಡವರ ಅಭಿವೃದ್ಧಿಗೆ ಸಹಕರಿಸಲಾಗಿದೆ ಎಂದರು.
ಮುಖಂಡರಾದ ಕಮ್ಮನಹಳ್ಳಿ ಮಂಜು, ಗಟ್ಟಹಳ್ಳಿ ಸೀನಪ್ಪ, ಪದ್ಮನಾಭ, ದೊಡ್ಡಹಾಗಡೆ ಹರೀಶ್​, ಲಿಂಗಣ್ಣ, ಮೋಹನ್, ರುಪತಿ, ಚೂಡಸಂದ್ರ ರು, ನೊಸೇನೂರು ರವಿ, ಪ್ರಶಾಂತ್​ ಇದ್ದರು.
ಪ್ರಚಾರಕ್ಕೆ ಬಂದ ಅಶೋಕ್​ರನ್ನು ಪ್ರಶ್ನಿಸಿ : ತಮಿಳುನಾಡಿನಲ್ಲಿ ನಗರ ಪ್ರದೇಶದಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಸೌಲಭ್ಯವಿದೆ. ಮುಂದಿನ ದಿನಗಳಲ್ಲಿ ತಮಿಳುನಾಡಿನ ಎಲ್ಲ ಕಡೆ ಸರ್ಕಾರಿ ಬಸ್​ಗಳಲ್ಲಿ ಉಚಿತ ಪ್ರಯಾಣ ಮಾಡಲು ಕ್ರಮ ವಹಿಸಲಾಗುವುದು. ತಮಿಳುನಾಡಿನಲ್ಲಿ ಇಂಡಿಯಾ ಒಕ್ಕೂಟ ಗೆದ್ದರೆ ಕುಟುಂಬದ ಮಹಿಳೆಯರಿಗೆ 2 ಸಾವಿರ ರೂ. ನೀಡಲು ಭರವಸೆ ನೀಡಿದ್ದಾರೆ. ತಮಿಳುನಾಡಿನ ಸ್ಟಾಲಿನ್​ ನೇತೃತ್ವದ ಸರ್ಕಾರ ಜನಪ್ರಿಯ ಸರ್ಕಾರವಾಗಿದೆ. ಕೇಂದ್ರದ ಕ್ರಮದಿಂದಾಗಿ ಗ್ಯಾಸ್​ ಹೋಗಿ ಒಲೆ ಬಳಸುವ ಪರಿಸ್ಥಿತಿ ಬಂದಿದೆ. ಒಲೆ ಬಂದಿರುವ ಬಗ್ಗೆ ಥಳಿ ೇತ್ರದಲ್ಲಿ ಪ್ರಚಾರ ಮಾಡುತ್ತಿರುವ ಆರ್​.ಅಶೋಕ್​ ಅವರನ್ನು ಪ್ರಶ್ನಿಸಬೇಕು ಎಂದು ಡಿಕೆಶಿ ಸಲಹೆ ನೀಡಿದರು.
ದಳಪತಿಗೆ ಟಾಂಗ್​ : ಐಪಿಎಸ್​ ಅಧಿಕಾರಿ ಅಣ್ಣಾಮಲೈಗೆ ಟಿಕೆಟ್​ ನೀಡಲಿಲ್ಲ. ಅಣ್ಣಾಮಲೈ ಅವರನ್ನು ಜತೆಯಲ್ಲಿಟ್ಟುಕೊಂಡರೆ ನಿಮ್ಮ ಜತೆ ಬರುವುದಿಲ್ಲ ಎಂದು ಅಣ್ಣಾ ಡಿಎಂಕೆ ಹೇಳಿತ್ತು. ಮತ್ತೊಬ್ಬ ವ್ಯಕ್ತಿ ಎಂಜಿಆರ್​ ಆಗಲು ಹೊರಟಿದ್ದಾರೆ. ಚಲನಚಿತ್ರಗಳಲ್ಲಿ ಕೈ ಬೀಸಿದರೆ ಜನರ ಹೊಟ್ಟೆ ತುಂಬುವುದಿಲ್ಲ ಎಂದು ನಟ ವಿಜಯ್​ಗೆ ಡಿಕೆಶಿ ಟಾಂಗ್​ ನೀಡಿದರು. ಬಿಜೆಪಿ ಕತ್ತರಿಯಿದ್ದಂತೆ, ಜನರನ್ನು ಬೇರ್ಪಡಿಸುವುದೇ ಕತ್ತರಿಯ ಕೆಲಸ. ಆದರೆ ಕಾಂಗ್ರೆಸ್​ ಸೂಜಿಯಂತೆ, ಇಬ್ಬರನ್ನು ಸೇರಿಸುತ್ತದೆ. ಹಾಗಾಗಿ ಕಾಂಗ್ರೆಸ್​ ಮೈತ್ರಿ ಕೂಟವನ್ನು ತಮಿಳುನಾಡಿನಲ್ಲಿ ಗೆಲ್ಲಿಸುವ ಮೂಲಕ ಒಕ್ಕೂಟ ವ್ಯವಸ್ಥೆಗೆ ಬಲ ನೀಡಬೇಕು ಎಂದು ಮನವಿ ಮಾಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net