ನಿಯಮಗಳ ಪ್ರಕಾರ ಸತ್ತವರು, ಬೇರೆಡೆಗೆ ವರ್ಗಾವಣೆಯಾದವರು, ವಿದೇಶದಲ್ಲಿ ನೆಲೆಸಿರುವವರು ಹಾಗೂ ಕಾನೂನುಬಾಹಿರ ವ್ಯಕ್ತಿಗಳ ಹೆಸರನ್ನು ಮತದಾರರ ಪಟ್ಟಿಯಿಂದ ತಕ್ಷಣವೇ ತೆಗೆದುಹಾಕಬೇಕು. ಆದರೆ, ಈ ಎಲ್ಲ ನಿಬಂಧನೆಗಳನ್ನು ಸಂಪೂರ್ಣವಾಗಿ ಗಾಳಿಗೆ ತೂರಿ ಎಸ್‌ಐಆರ್ ಮಾಡಲಾಗುತ್ತಿದೆ ಎಂದ ಆರ್ ಅಶೋಕ್, ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿ ಒಂದು ತಿಂಗಳಾಗುತ್ತಾ ಬಂದಿದ್ದರೂ, ಅವರು ಮುಖ್ಯಮಂತ್ರಿ ತರಹ ನಡೆದುಕೊಳ್ಳುತ್ತಿದ್ದಾರೆ ಎಂದು ನಮಗೆ ಅನಿಸುತ್ತಿಲ್ಲ. ಅದೇ ಹಳೆಯ ಬಾಡಿ ಲಾಂಗ್ವೇಜ್ ಇಟ್ಟುಕೊಂಡು ಅಧಿಕಾರಿಗಳಿಗೆ ಬೆದರಿಸುವ ಧಾಟಿಯಲ್ಲಿ ನಿರ್ದೇಶನಗಳನ್ನು ನೀಡುತ್ತಿದ್ದಾರೆ ಎಂದು ದೂರಿದರು.