ಪ್ರಕರಣ ರದ್ದುಕೋರಿ ಯುವಕ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ನೀಡಿದೆ. ಬಸ್ನಲ್ಲಿ ದೂರ ಪ್ರಯಾಣ ಮಾಡುವಾಗ ಶೌಚಾಲಯಕ್ಕೆ ಹೋಗಲು ಬಸ್ನಿಂದ ಇಳಿದಿದ್ದಾನೆ. ಆದರೆ, ಎಲ್ಲಿಯೂ ಶೌಚಾಲಯ ಸಿಗದ ಕಾರಣ ಅನಿವಾರ್ಯವಾಗಿ ಹಳಿಯಲ್ಲಿಯೇ ಮೂತ್ರ ವಿಸರ್ಜನೆ ಮಾಡಿದ್ದಾನೆ. ಆ ಸಮಯದಲ್ಲಿ ಯುವತಿ ಅಲ್ಲಿಗೆ ಬಂದಿದ್ದಾಳೆ. ಮಹಿಳೆಯ ನತೆಗೆ ಧಕ್ಕೆ ತರುವ ದುರುದ್ದೇಶ ಯುವಕನಿಗಿರಲಿಲ್ಲ. ಆಕಸ್ಮಿಕವಾಗಿ ಯುವತಿಗೆ ಕಾಣಿಸಿಕೊಂಡಿದ್ದಾನೆ. ಇದು ಲೈಂಗಿಕ ಕಿರುಕುಳ ಅಪರಾಧದ ವ್ಯಾಪ್ತಿಗೆ ಬರುವುದಿಲ್ಲ ಎಂದು ನ್ಯಾಯಪೀಠ ಹೇಳಿದೆ.