

ದೇವನಹಳ್ಳಿ :
ಹಿಂದುಳಿದ ವರ್ಗಗಳ ನಾಯಕ, ರಾಜ್ಯದ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ರವರ 111ನೇ ಜನ್ಮ ದಿನಾಚರಣೆಯನ್ನು ಆ.20 ರಂದು ಬೆಳಗ್ಗೆ 10 ಕ್ಕೆಪಟ್ಟಣದ ಡಿ.ದೇವರಾಜ ಅರಸು ಭವನದಲ್ಲಿ ಹಿಂದುಳಿದ ವರ್ಗಗಳ ಒಕ್ಕೂಟ ಹಾಗೂ ಜಿಲ್ಲಾಡಳಿತರ ಸಹಕಾರದಲ್ಲಿ ಅದ್ದೂರಿಯಾಗಿ ಆಚರಿಸಲಾಗುವುದು ತಾಲೂಕು ಹಿಂದುಳಿದ ವರ್ಗಗಳ ಒಕ್ಕೂಟದ ಅಧ್ಯಕ್ಷ ಸಿ.ಮುನಿರಾಜು ತಿಳಿದರು.
ಅರಸುರವರ ಜಯಂತಿ ಆಚರಣೆಗೆ ಸಂಬಂಧಿಸಿದಂತೆ ನಡೆದ ಪೂರ್ವಭಾವಿ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಅಂದಿನ ಸಮಾರಂಭವನ್ನು ಸಮಾಜಕಲ್ಯಾಣ ಸಚಿವ ಕೆ.ಎಚ್. ಮುನಿಯಪ್ಪ ಉದ್ಘಾಟಿಸಲಿದ್ದು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ್ ಎಸ್.ತಂಗಡಗಿ, ವಿದ್ಯುನ್ಮಾನ ಅಭಿವೃದ್ಧಿನಿಗಮದ ಅಧ್ಯಕ್ಷ ಶರತ್ ಬಚ್ಚೇಗೌಡ, ಶಾಸಕರಾದ ಶ್ರೀನಿವಾಸಮೂರ್ತಿ, ಧೀರಜ್ ಮುನಿರಾಜು, ಸಂಸದ ಡಾ.ಕೆ ಸುಧಾಕರ್, ಜಿಲ್ಲಾಧಿಕಾರಿ ಕೆ.ಎನ್. ಅನುರಾಧ , ಸಿಇಓ ವಾಸಂತಿ ಅಮರ್. ತಹಸೀಲ್ದಾರ್ ಅನಿಲ್ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಲಿದ್ದಾರೆ. ಡಿ.ದೇವರಾಜ ಅಲೆಮಾರಿ ಸಂದ ಅಧ್ಯಕ್ಷ ಬಿ.ಕೆ.ನಾರಾಯಣಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡುವರು.
ಉಪಾಧ್ಯಕ್ಷ ಎಸ್.ಆರ್. ವಿಜಯಕುಮಾರ್ ಮಾತನಾಡಿ, ಅಂದು ಬೆಳಗ್ಗೆ 9 ಕ್ಕೆ ದೇವರಾಜ ಅರಸುರವರ ಭಾವಚಿತ್ರವನ್ನು ಬೆಳ್ಳಿ ರಥದಲ್ಲಿ ಅಲಂಕರಿಸಿ ವಿವಿಧ ಕಲಾತಂಡಗಳೊಂದಿಗೆ ದೇವನಹಳ್ಳಿಯ ಪ್ರವಾಸಿ ಮಂದಿರದಿಂದ ದೇವರಾಜ ಅರಸು ಭವನದವರೆಗೂ ಮೆರವಣಿಗೆ ಮಾಡಲಾಗುವುದು. 10ಕ್ಕೆ ವೇದಿಕೆ ಕಾರ್ಯಕ್ರಮ ಆರಂಭಗೊಳ್ಳಲಿದೆ ಎಂದರು. ಹಿಂದುಳಿದ ವರ್ಗಗಳ ಸಾಧಕ ಸಮಾಜಸೇವಕರು ಮತ್ತು ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಗುವುದು. ಈ ಸಮಯದಲ್ಲಿ ಹಿಂದುಳಿದ ವರ್ಗಗಳ ಒಕ್ಕೂಟದ ಕಾರ್ಯಾಧ್ಯಕ್ಷ ಸತ್ಯನಾರಾಯಣಾಚಾರ್, ಉಪಾಧ್ಯಕ್ಷ ಎಸ್.ಆರ್. ವಿಜಯಕುಮಾರ್, ಪ್ರಧಾನಕಾರ್ಯದರ್ಶಿ ದಾಸಪ್ಪ, ಪದಾಧಿಕಾರಿಗಳಾದ ಬಿ.ಕೆ. ನಾರಾಯಣಸ್ವಾಮಿ, ಗೋಪಾಲಪ್ಪ, ಇತರರು ಇದ್ದರು.