ಜಮಖಂಡಿಯಲ್ಲಿ ದಸರಾ ದರ್ಬಾರ್‌ಗೆ ಸರ್ವ ಸಿದ್ಧತೆ

ಜಮಖಂಡಿಯಲ್ಲಿ ಶಾಸಕ ಜಗದೀಶ ಗುಡಗುಂಟಿ ಅವರ ನಿವಾಸದಲ್ಲಿ ಶರಣ ನವರಾತ್ರಿ ದಸರಾ ದರ್ಬಾರ ಮಹೋತ್ಸವ ಧರ್ಮ ಸಮ್ಮೇಳನದ ಪೂರ್ವಭಾವಿ ಸಭೆ ನಡೆಯಿತು.  ಬಾಳೆಹೊನ್ನೂರು ರಂಭಾಪುರಿಯ ಡಾ. ವೀರ ಸೋಮೇಶ್ವರ ಜಗದ್ಗುರುಗಳು, ಕಲ್ಯಾಣ ಮಠದ ಗೌರಿಶಂಕರ ಶಿವಾಚಾರ್ಯ ಶ್ರೀಗಳು, ಶರಣಬಸವ ಶಿವಾಚಾರ್ಯ ಶ್ರೀಗಳು, ಹಿರೇಪಡಸಲಗಿಯ ಸಿದ್ಧಲಿಂಗ ಶಿವಾಚಾರ್ಯ ಶ್ರೀಗಳು ಇತರರಿದ್ದರು.
ಜಮಖಂಡಿಯಲ್ಲಿ ಶಾಸಕ ಜಗದೀಶ ಗುಡಗುಂಟಿ ಅವರ ನಿವಾಸದಲ್ಲಿ ಶರಣ ನವರಾತ್ರಿ ದಸರಾ ದರ್ಬಾರ ಮಹೋತ್ಸವ ಧರ್ಮ ಸಮ್ಮೇಳನದ ಪೂರ್ವಭಾವಿ ಸಭೆ ನಡೆಯಿತು. ಬಾಳೆಹೊನ್ನೂರು ರಂಭಾಪುರಿಯ ಡಾ. ವೀರ ಸೋಮೇಶ್ವರ ಜಗದ್ಗುರುಗಳು, ಕಲ್ಯಾಣ ಮಠದ ಗೌರಿಶಂಕರ ಶಿವಾಚಾರ್ಯ ಶ್ರೀಗಳು, ಶರಣಬಸವ ಶಿವಾಚಾರ್ಯ ಶ್ರೀಗಳು, ಹಿರೇಪಡಸಲಗಿಯ ಸಿದ್ಧಲಿಂಗ ಶಿವಾಚಾರ್ಯ ಶ್ರೀಗಳು ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಡಾ. ವೀರಸೋಮೇಶ್ವರ ಜಗದ್ಗುರು ಮಾಹಿತಿ
  • ಐವರು ಗಣ್ಯರಿಗೆ ಪ್ರಶಸ್ತಿ ಪ್ರದಾನ
ಜಮಖಂಡಿ: ಕಳೆದ ಬಾರಿ ಬಸವಕಲ್ಯಾಣದಲ್ಲಿ ಹಮ್ಮಿಕೊಂಡಿದ್ದ ದಸರಾ ದರ್ಬಾರ್ ಮಹೋತ್ಸವವನ್ನು ಈ ಬಾರಿ ಜಮಖಂಡಿಯಲ್ಲಿ ಅದ್ದೂರಿಯಾಗಿ ಆಯೋಜಿಸಲು ನಿರ್ಧರಿಸಲಾಗಿದೆ ಎಂದು ಬಾಳೆಹೊನ್ನೂರು ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರು ಅವರು ಹೇಳಿದರು.
ಅಕ್ಟೋಬರ್‌ನಲ್ಲಿ ಆಯೋಜಿಸಲಾಗಿರುವ 35ನೇ ಐತಿಹಾಸಿಕ ದಸರಾ ಉತ್ಸವದ ಸ್ಥಳ ಪರಿಶೀಲನೆ ನಡೆಸಿ, ಶಾಸಕ ನಾಡೋಜ ಜಗದೀಶ ಗುಡಗುಂಟಿ ಅವರ ನಿವಾಸದಲ್ಲಿ ಶುಕ್ರವಾರ ಆಯೋಜಿಸಿದ ಪೂರ್ವಭಾವಿ ಸಭೆಯಲ್ಲಿ ಶ್ರೀಗಳು ಮಾಹಿತಿ ನೀಡಿದರು.
ಶಾಸಕರ ಮನವಿ ಮೇರೆಗೆ ನವರಾತ್ರಿ ದಸರಾ ದರ್ಬಾರ್ ಮಹೋತ್ಸವ ಹಾಗೂ ಧರ್ಮ ಸಮ್ಮೇಳನ ಕಾರ್ಯಕ್ರಮ ಹತ್ತು ದಿನ ವೈಭವದಿಂದ ನಡೆಯಲಿದ್ದು, ಶಕ್ತಿ ದೇವಿಯ ಆರಾಧನೆ, ಧರ್ಮ ಸಮ್ಮೇಳನ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದರು.
ರಂಭಾಪುರಿ ಪೀಠವು ಜಾತಿ, ಮತ ಭೇದವಿಲ್ಲದೆ ಎಲ್ಲರನ್ನೂ ಒಗ್ಗೂಡಿಸುವ ಪರಂಪರೆ ಹೊಂದಿದ್ದು, ರಾಜಕೀಯ ನೆಪದಲ್ಲಿ ಭೇದಭಾವ ತರುವ ಹುನ್ನಾರಗಳಿಗೆ ಅವಕಾಶ ನೀಡಬಾರದು ಎಂದ ಶ್ರೀಗಳು, ಇದೇ ಸಂದರ್ಭದಲ್ಲಿ ನಾಡಿನ ಐವರು ಗಣ್ಯರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಹೇಳಿದರು.
ಶಾಸಕ ನಾಡೋಜ ಜಗದೀಶ ಗುಡಗುಂಟಿ ಮಾತನಾಡಿದರು. ಕಲ್ಯಾಣ ಮಠದ ಗೌರಿಶಂಕರ ಶಿವಾಚಾರ್ಯ, ಬನಹಟ್ಟಿ ಹಿರೇಮಠದ ಶರಣ ಬಸವ ಶಿವಾಚಾರ್ಯ, ಸಿದ್ಧಲಿಂಗ ಶಿವಾಚಾರ್ಯ, ಮುತ್ತಿನಕಂತಿ ಹಿರೇಮಠದ ಶಿವಲಿಂಗ ಪಂಡಿತಾರಾಧ್ಯ ಶಿವಾಚಾರ್ಯ, ಡಾ. ವಿಶ್ವಪ್ರಭು ಶಿವಾಚಾರ್ಯ, ಮುರುಗಯ್ಯ ಶಾಸಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
"

ಮಹೋತ್ಸವದ ಹಿನ್ನೆಲೆ

ಧರ್ಮ ಸಂಸ್ಕೃತಿ ಪರಂಪರೆ ಉಳಿವಿಗೆ ಗುರುಪೀಠದಿಂದ ದಸರಾ ಮಹೋತ್ಸವ ನಡೆಸಬೇಕೆಂದು ಅಂದಿನ ನಾಲ್ವಡಿ ಕಷ್ಣರಾಜ ಒಡೆಯರ ಶಿವಾನಂದ ಮಹಾಸ್ವಾಮಿಗಳನ್ನು ಕೋರಿದ ಬೆನ್ನಲ್ಲೇ ವಿವಿಧ ಭಾಗಗಳಲ್ಲಿ ಈ ಮಹೋತ್ಸವ ಆಚರಿಸುತ್ತಾ ಬರಲಾಗುತ್ತಿದೆ. ವೀರಶೈವ ಲಿಂಗಾಯತ ಧರ್ಮ ಉಳಿವಿಗಾಗಿ 1982ರಲ್ಲಿ ಬಸವನಬಾಗೇವಾಡಿಯ ನಿಡಗುಂದಿಯಲ್ಲಿ ನೀಲಕಂಠ ಶಿವಾಚಾರ್ಯ ನೇತತ್ವದಲ್ಲಿ ಹಾಗೂ ರುದ್ರಮುನಿ ಶಿವಾಚಾರ್ಯ ಸಮ್ಮುಖದಲ್ಲಿ ಸಮ್ಮೇಳನವನ್ನು ಅದ್ದೂರಿಯಾಗಿ ಆಚರಿಸಲಾಯಿತು.

"

ನಾಡಿನ ಜನರ ಭವಿಷ್ಯ, ರಾಷ್ಟ್ರ ಪ್ರೇಮ, ಧರ್ಮ ಮತ್ತು ಸಂಸ್ಕೃತಿ ಉಳಿವಿಗಾಗಿ ರಂಭಾಪುರಿ ಪೀಠವು ಈ ಪರಂಪರೆಯನ್ನು ನಡೆಸಿಕೊಂಡು ಬರುತ್ತಿದೆ. ಅಜಂಪುರದಿಂದ ಪ್ರಾರಂಭಗೊಂಡ ಈ ಮಹೋತ್ಸವವು ನಾಡಿನಾದ್ಯಂತ ಸಾತ್ವಿಕ ಶಕ್ತಿಯನ್ನು ಬೆಳೆಸುವ ನಿಟ್ಟಿನಲ್ಲಿ ಶ್ರಮಿಸುತ್ತಿದೆ.

ಡಾ. ವೀರಸೋಮೇಶ್ವರ ಜಗದ್ಗುರುಗಳು, ರಂಭಾಪುರಿ ಪೀಠ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net