ದೇವರ ಮುಂದೆ ಎಲ್ಲರು ಸಮಾನರು ; ಮಂತ್ರಾಲಯ ಸ್ವಾಮೀಜಿ ಅಭಿಮತ

ಜಯನಗರದ ಚಂದ್ರಗುಪ್ತಮೌರ್ಯ  ಆಟದ ಮೈದಾನದಲ್ಲಿ ರಕ್ಷಾ ಫೌಂಡೇಷನ್ ವತಿಯಿಂದ ಹಮ್ಮಿಕೊಂಡಿದ್ದ ಲಲಿತಾ ಸಹಸ್ರನಾಮ ಧಾರ್ಮಿಕ ಕಾರ್ಯಕ್ರಮದಲ್ಲಿ ಮಂತ್ರಾಲಯ ಮಠದ ಶ್ರೀಸುಭುದೇಂದ್ರ ತೀರ್ಥ ಸ್ವಾಮೀಜಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯಯೇಂದ್ರ ಶಾಸಕ ಸಿ.ಕೆ.ರಾಮಮೂರ್ತಿ ಮತ್ತಿತರರು ಪಾಲ್ಗೊಂಡಿದ್ದರು.
ಜಯನಗರದ ಚಂದ್ರಗುಪ್ತಮೌರ್ಯ ಆಟದ ಮೈದಾನದಲ್ಲಿ ರಕ್ಷಾ ಫೌಂಡೇಷನ್ ವತಿಯಿಂದ ಹಮ್ಮಿಕೊಂಡಿದ್ದ ಲಲಿತಾ ಸಹಸ್ರನಾಮ ಧಾರ್ಮಿಕ ಕಾರ್ಯಕ್ರಮದಲ್ಲಿ ಮಂತ್ರಾಲಯ ಮಠದ ಶ್ರೀಸುಭುದೇಂದ್ರ ತೀರ್ಥ ಸ್ವಾಮೀಜಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯಯೇಂದ್ರ ಶಾಸಕ ಸಿ.ಕೆ.ರಾಮಮೂರ್ತಿ ಮತ್ತಿತರರು ಪಾಲ್ಗೊಂಡಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ದೇವರ ಮುಂದೆ ಎಲ್ಲರೂ ಸಮಾನರು
  • ಮಂತ್ರಾಲಯ ಶ್ರೀಸುಭುದೇಂದ್ರ ತೀರ್ಥ ಸ್ವಾಮೀಜಿ ಅಭಿಮತ
  • ಭೇದವಿಲ್ಲದೇ ಎಲ್ಲರು ಒಂದೆಡೆ ಸೇರುವುದು ದೇವರ ಆರಾಧನೆಯಲ್ಲಿ

ಬೆಂಗಳೂರು: ಜಾತಿಮತ ಪಂಥ ಭೇದವಿಲ್ಲದೇ ಎಲ್ಲರುಒಂದೆಡೆ ಸೇರುವುದು ದೇವರ ಆರಾಧನೆಯಲ್ಲಿಮಾತ್ರ. ಆದ್ದರಿಂದದೇವರ ಮುಂದೆ ಎಲ್ಲರು ಸಮಾನರುಎಂದು ಮಂತ್ರಾಲಯ ಮಠದ ಶ್ರೀಸುಭುದೇಂದ್ರ ತೀರ್ಥ ಸ್ವಾಮೀಜಿಹೇಳಿದರು.

ಜಯನಗರದಚಂದ್ರಗುಪ್ತಮೌರ್ಯ ಆಟದ ಮೈದಾನದಲ್ಲಿರಕ್ಷಾ ಫೌಂಡೇಷನ್ ವತಿಯಿಂದಹಮ್ಮಿಕೊಂಡಿದ್ದ 4ನೇವರ್ಷದ ಲಲಿತಾ ಸಹಸ್ರನಾಮ ಪಠಣಮತ್ತು ಪೂಜಾ ಸಮಾರಂಭದ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದರು.

ಉದ್ಯಾನನಗರಿಎಂಬ ಪ್ರಸಿದ್ದಿ ಇರುವ ಬೆಂಗಳೂರಿನಲ್ಲಿಲಲಿತಾ ಸಹಸ್ರನಾಮ ಪೂಜೆ,ಪಠಣೆ ಕಾರ್ಯಕ್ರಮವನ್ನುಕಳೆದ ನಾಲ್ಕು ವರ್ಷಗಳಿಂದಹಮ್ಮಿಕೊಂಡು ಬರಲಾಗುತ್ತಿದೆ.ಹಾಗೂ 14ವರ್ಷದಿಂದವಿದ್ಯಾರ್ಥಿಗಳಿಗೆ ರಕ್ಷಾಫೌಂಡೇಷನ್ ನೋಟ್ ಪುಸ್ತಕವನ್ನುವಿತರಣೆ ಮಾಡುತ್ತಿರುವುದು ಉತ್ತಮಕಾರ್ಯ. ಲೋಕಕಂಠಕರನ್ನುನಾಶ ಮಾಡಿ ಶಿಷ್ಟರನ್ನು ರಕ್ಷಣೆಮಾಡಲು ಶ್ರೀ ಲಲಿತಾ ಪರಮೇಶ್ವರಿಅವತಾರಿಸಿದ್ದಾಳೆ.ಪ್ರತಿನಿತ್ಯಲಲಿತಾ ದೇವಿ ಉಪಾಸನೆ ಮಾಡಿದರೆ ಕಷ್ಟಗಳು ದೂರಾಗುತ್ತವೆ ಎಂದುಸ್ವಾಮೀಜಿ ಹೇಳಿದರು.

ಶಾಸಕಸಿ.ಕೆ.ರಾಮಮೂರ್ತಿಮಾತನಾಡಿ, ತಾಯಿ,ತಂಗಿ,ಅಕ್ಕ,ಪತ್ನಿಯಾಗಿಮತ್ತು ಕುಟುಂಬದ ಜೊತೆ ಸಮಾಜದಅಭಿವೃದ್ಧಿಗೆ ಶ್ರಮಿಸುವಮಹಿಳೆಯರದ್ದು ವಿಶಿಷ್ಟ ಸೇವೆ. ನಾನು ಎಂಬುದುಅಹಂಕಾರ, ನಾವೆಲ್ಲರುಎಂದು ಕೂಡಿ ಬಾಳುವುದು ನಿಜವಾದಜೀವನ. ಆದ್ದರಿಂದಜಯನಗರ ಕ್ಷೇತ್ರ ಮತ್ತು ನಾಡಿನಜನರ ಒಳಿತಿಗಾಗಿ ಪ್ರಾರ್ಥಿಸಿಸಾವಿರಾರು ಮಹಿಳೆಯರು ಲಲಿತಾಸಹಸ್ರನಾಮ ಪಠಣ ಮಾಡಿದ್ದಾರೆಎಂದರು. .

ಆರ್.ಎಸ್.ಎಸ್.ಕ್ಷೇತ್ರಿಯಕಾರ್ಯವಾಹ ನಾ.ತಿಪ್ಪೇಸ್ವಾಮಿ,ಚಲನಚಿತ್ರ ನಟಿಪ್ರಣೀತ ಸುಭಾಶ್,ನಿಕಟಪೂರ್ವಬಿಬಿಎಂಪಿ ಸದಸ್ಯೆ ನಾಗರತ್ನರಾಮಮೂರ್ತಿ,ಬಿ.ಸೋಮಶೇಖರ್,ಮುಖಂಡರಾದಚಂದ್ರಶೇಖರ್ ರಾಜು,ಗೋವಿಂದನಾಯ್ಡು,ಜೆಲ್ಲಿ ರಮೇಶ್,ಧನರಾಜ್,ದೀಪಿಕಾ ಮಂಜುನಾಥರೆಡ್ಡಿ,ಚನ್ನಗಿರಿಯಪ್ಪಮತ್ತಿತರರು ಕಾರ್ಯಕ್ರಮದಲ್ಲಿಪಾಲ್ಗೊಂಡಿದ್ದರು.

ರಕ್ಷಾ ಫೌಂಡೇಷನ್ ವತಿಯಿಂದ ಪುಣ್ಯದ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ. ದೇಶದ ಸಂಸ್ಕೃತಿ, ಸಂಪ್ರಾದಯ ಉಳಿಸುವಲ್ಲಿ ಮಹಿಳೆಯರ ಪಾತ್ರ ಪ್ರಮುಖವಾಗಿದೆ.

— ಬಿ.ವೈ.ವಿಜಯೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷರು
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net