ಮುಳಬಾಗಿಲು: ತಂದೆ-&ತಾಯಿ ಕಳೆದುಕೊಂಡ ವೈ.ಕೋಗಿಲೆರು ಗ್ರಾಮದ ಇಬ್ಬರು ಮಕ್ಕಳ ಶಿಕ್ಷಣ, ಆರೋಗ್ಯ, ಪೋಷಣೆಯ ಸಂಪೂರ್ಣ ಜವಾಬ್ದಾರಿ ಹೊತ್ತುಕೊಳ್ಳುವುದಾಗಿ ಆವಣಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಆದಿನಾರಾಯಣ ಭರವಸೆ ನೀಡಿದರು.
ಆಲಂಗೂರು ಗ್ರಾಪಂ ವ್ಯಾಪ್ತಿಯ ವೈ.ಕೋಗಿಲೆರು ಗ್ರಾಮದ ಸುಬ್ಬಲಕ್ಷ$್ಮಮ್ಮ ಹಾಗೂ ಸುಬ್ರಮಣಿ ದಂಪತಿ ಕೌಟುಂಬಿಕ ಸಮಸ್ಯೆಯಿಂದ ಮೃತಪಟ್ಟ ಹಿನ್ನೆಲೆಯಲ್ಲಿ ಅವರ ಮಕ್ಕಳು ಅನಾಥರಾಗಿದ್ದು, ಅವರ ನಿವಾಸಕ್ಕೆ ಭೇಟಿ ನೀಡಿ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿ ಮಾತಮಾಡಿದ ಅವರು, ಇಬ್ಬರು ಮಕ್ಕಳ ವಿದ್ಯಾಭ್ಯಾಸ, ಆರೋಗ್ಯ ಹಾಗೂ ಪೋಷಣೆಯ ಸಂಪೂರ್ಣ ವೆಚ್ಚವನ್ನು ಕಾಂಗ್ರೆಸ್ನಿಂದ ಭರಿಸಲಾಗುವುದು. ಜತೆಗೆ ಮನೆ ದುರಸ್ತಿಗೊಳಿಸಿ, ಮುಂದಿನ ದಿನಗಳಲ್ಲಿಯೂ ಅಗತ್ಯ ಸಹಾಯ- ನೀಡಲಾಗುವುದು ಎಂದರು.
ಪಿಎಲ್ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ರಾಜೇಂದ್ರ, ಮುಖಂಡರಾದ ರಾಮಲಿಂಗರೆಡ್ಡಿ, ಮಂಜುನಾಥ್, ಆಂಜನೇಯರೆಡ್ಡಿ, ಸುಬ್ರಹ್ಮಣಿ, ವೇಣುಗೋಪಾಲ್, ಶ್ರೀನಿವಾಸ್, ಕೃಷ್ಣಪ್ಪ, ಸತೀಶ್, ಅಮರ್ ಇದ್ದರು.