ಆಡಳಿತ ವ್ಯವಸ್ಥೆಗೆ ಎಐ ತಂತ್ರಜ್ಞಾನ ಅತ್ಯವಶ್ಯ AI technology

ಆಡಳಿತ ವ್ಯವಸ್ಥೆಗೆ ಎಐ ತಂತ್ರಜ್ಞಾನ ಅತ್ಯವಶ್ಯ AI technology
ಆಡಳಿತ ವ್ಯವಸ್ಥೆಗೆ ಎಐ ತಂತ್ರಜ್ಞಾನ ಅತ್ಯವಶ್ಯ AI technology
Published on

ಪ್ರಮುಖ ಮುಖ್ಯಾಂಶಗಳು

  • ಧಾರವಾಡ ಐಐಟಿ ಮುಖ್ಯಸ್ಥ ಡಾ. ಪ್ರವೀಣ್ ಕುವಾರ್ ಅನಿಸಿಕೆ
  • ತಂತ್ರಜ್ಞಾನ ಕುರಿತ ಎರಡು ದಿನಗಳ ಮೇಳಕ್ಕೆ ಚಾಲನೆ
ಕೆಜಿಎಫ್: ಭಾರತೀಯ ಸಂಸ್ಥೆಗಳು ವಾಹಿತಿ ತಂತ್ರಜ್ಞಾನ ಮತ್ತು ವ್ಯವಹಾರ ಕ್ಷೇತ್ರಗಳಲ್ಲಿ ಈಗಾಗಲೇ ಕೃತಕ ಬುದ್ಧಿಮತ್ತೆಯನ್ನು ಅಳವಡಿಸಿದ್ದು, ವಾಹಿತಿ ಸಿದ್ದತೆ, ಆಡಳಿತ ವ್ಯವಸ್ಥೆ ಮತ್ತು ಅಪಾಯ ನಿರ್ವಹಣೆಗಳನ್ನು ಬಲಪಡಿಸುವುದಕ್ಕೆ ಎಐ ತಂತ್ರಜ್ಞಾನ ಅತ್ಯವಶ್ಯ ಎಂದು ಧಾರವಾಡ ಐಐಟಿ ಮುಖ್ಯಸ್ಥ ಡಾ. ಪ್ರವೀಣ್ ಕುವಾರ್ ತಿಳಿಸಿದರು.AI technology
ನಗರದ ಡಾ.ತಿಮ್ಮಯ್ಯ ತಾಂತ್ರಿಕ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮತ್ತು ಅಜಿತ ಬುದ್ಧಿಮತ್ತೆ (ಅನ್‌ಬೀಟೆಬಲ್ ಇಂಟೆಲಿಜೆನ್ಸ್) ತಂತ್ರಜ್ಞಾನ ಕುರಿತ ಎರಡು ದಿನಗಳ ಮೇಳ ಉದ್ಘಾಟಿಸಿ ವಾತನಾಡಿದರು. ಆಧುನಿಕ ತಂತ್ರಜ್ಞಾನ ಮತ್ತು ವೇಗದ ಯುಗದಲ್ಲಿ ಕೆಲಸಗಳನ್ನು ಸುಲಭವಾಗಿಸುವ ಮತ್ತು ವೇಗವಾಗಿಸುತ್ತಿರುವ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಅಥವಾ ಅಜಿತ ಬುದ್ಧಿಮತ್ತೆ ತಂತ್ರಜ್ಞಾನವನ್ನು ನಮಗರಿವಿಲ್ಲದಂತೆಯೇ ನಾವು ಆನಂದಿಸುತ್ತಿದ್ದೇವೆ ಎಂದರು.
ತಂತ್ರಜ್ಞಾನಕ್ಕೆ ನಾವು ಕೊಡುಗೆ ನೀಡುತ್ತಿದ್ದು, ನಾವು ಇಂದು ಅದರ ಭಾಗವಾಗಿ ಬಿಟ್ಟಿದ್ದೇವೆ. ಪರಿಣಾಮ ನಮ್ಮ ಯೋಚನಾ ಶಕ್ತಿಗೆ ಕೆಲಸ ಕಡಿಮೆಯಾಗಿ ಯಂತ್ರಗಳ ಆಲೋಚನಾ ಶಕ್ತಿ ವಿಸ್ತಾರಗೊಳ್ಳುತ್ತಿದೆ, ವ್ಯಾಪಕವೂ ಆಗುತ್ತಿರುವುದಾಗಿ ತಿಳಿಸಿದರು.
ಪ್ರಾಂಶುಪಾಲ ಸೈಯದ್ ಆರಿಫ್ ವಾತನಾಡಿ, ಆವಿಷ್ಕಾರಗಳಿಗೆ ಹೆಚ್ಚಿನ ಆದ್ಯತೆ ನೀಡುವುದು ಇಂದಿನ ಅಗತ್ಯ ಎಂದು ಭಾವಿಸಬೇಕು. ಸರ್ಕಾರಗಳು ಕೃತಕ ಬುದ್ಧಿಮತ್ತೆ ವಲಯದಲ್ಲಿನ ಆವಿಷ್ಕಾರಗಳ ಮೇಲೆ ಗಮನ ನೀಡುತ್ತಿದೆ. ಎಐ ಮೂಲಕ ದೇಶದ ಜನರಿಗೆ ಅತ್ಯಂತ ಹೆಚ್ಚಿನ ಲಾಭ ತಂದುಕೊಡಲು ಸರ್ಕಾರ ಬಯಸುತ್ತಿದೆ ಎಂದು ತಿಳಿಸಿದರು.
ಶಿಬಿರದಲ್ಲಿ ಭಾಗವಹಿಸಿ ಎಐನಲ್ಲಿ ಉತ್ತಮ ಸಾಧನೆ ತೋರಿದ ಬೆಂಗಳೂರಿನ ಜೆಎಸ್‌ಎಸ್ ತಾಂತ್ರಿಕ ಕಾಲೇಜಿನ ವಿದ್ಯಾರ್ಥಿಗಳಿಗೆ ಮೊದಲನೆ ಬಹುವಾನವಾಗಿ 25 ಸಾವಿರ ರೂ. ನಗದು, ಎರಡನೇ ಬಹುವಾನವಾಗಿ ಗೋಪಾಲನ್ ತಾಂತ್ರಿಕ ಕಾಲೇಜಿಗೆ 15 ಸಾವಿರ ರೂ., ಮೂರನೇ ಬಹುವಾನವಾಗಿ ಡಾ.ತಿಮ್ಮಯ್ಯ ಕಾಲೇಜಿನ ವಿದ್ಯಾರ್ಥಿಗಳಿಗೆ 10 ಸಾವಿರ ರೂ. ನಗದು ವಿತರಿಸಲಾಯಿತು.
ತಿಮ್ಮಯ್ಯ ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್ ಮತ್ತು ಅಜಿತ ಬುದ್ಧಿಮತ್ತೆ ತಂತ್ರಜ್ಞಾನದ ಮೇಳವನ್ನು ಎರಡು ದಿನಗಳ ಕಾಲ ಹಮ್ಮಿಕೊಂಡಿದ್ದು, ಈ ಮೇಳದಲ್ಲಿ ಆಂಧ್ರಪ್ರದೇಶ ಮತ್ತು ರಾಜ್ಯದ 30 ತಾಂತ್ರಿಕ ಕಾಲೇಜುಗಳಿಂದ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಇದರಲ್ಲಿ 18 ತಂಡಗಳು ವಿವಿಧ ಕಾಲೇಜುಗಳಿಂದ ಬಂದಿದ್ದು, ಇದರಲ್ಲಿ ಡಾ.ತಿಮ್ಮಯ್ಯ ತಾಂತ್ರಿಕ ಕಾಲೇಜುಗಳಿಂದ 12 ತಂಡಗಳು ಭಾಗವಹಿಸಿದ್ದವು.
ಅರ್ಟಿಫಿಷಿಯಲ್ ಇಂಟೆಲಿಜೆನ್ಸ್ ಮತ್ತು ಅಜಿತ ಬುದ್ದಿಮತ್ತೆ ತಂತ್ರಜ್ಞಾನದ ಮೇಳದಲ್ಲಿ 78 ವಿದ್ಯಾರ್ಥಿಗಳು, 38 ವಿದ್ಯಾರ್ಥಿನಿಯರು ವಿವಿಧ ಯಾಂತ್ರಿಕ ಶಿಬಿರದಲ್ಲಿ ಭಾಗವಹಿಸಿ ತಮ್ಮ ಕೌಶಲವನ್ನು ಅನಾವರಣಗೊಳಿಸಿದರು. ತೀರ್ಪುಗಾರರಾಗಿ ಡಾ.ಸಪ್ತಗಿರೀಶ್ ಹಾಗೂ ಡಾ.ಜಮುನಾ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net