ನಾನು ಹೇಗೆ... ಬೆಂಗಳೂರಿನ ತ್ರಿವಳಿ ಕೊಲೆ ಆರೋಪಿ ಹಿಂದಿತ್ತು ಎಐ ಸಲಹೆಗಳು! ತನಿಖೆಯಲ್ಲಿ ಸ್ಫೋಟಕ ಸಂಗತಿ ಬಯಲು

ಬೆಂಗಳೂರಿನಲ್ಲಿ ನಡೆದ ತ್ರಿವಳಿ ಕೊಲೆ ಪ್ರಕರಣ
ಬೆಂಗಳೂರಿನಲ್ಲಿ ನಡೆದ ತ್ರಿವಳಿ ಕೊಲೆ ಪ್ರಕರಣ
Published on

ಪ್ರಮುಖ ಮುಖ್ಯಾಂಶಗಳು

  • ಜೂ.22ರಂದು ಬೆಂಗಳೂರಿನಲ್ಲಿ ಭೀಕರ ತ್ರಿವಳಿ ಕೊಲೆ
  • ತಂದೆ-ತಾಯಿ, ತಂಗಿಯನ್ನೇ ಕೊಂದ ಆರೋಪಿ ಶ್ವೇತಾ
  • ಪ್ರಿಯಕರನಿಗೋಸ್ಕರ ಕುಟುಂಬದವರನ್ನೇ ಬಲಿ ಕೊಟ್ಟ ಪಾಪಿ ಮತ್ತು ಆಕೆಯ ಪ್ರಿಯಕರ ಅರೆಸ್ಟ್​
  • ಪೊಲೀಸರ ತನಿಖೆಯಲ್ಲಿ ಶಾಕಿಂಗ್ ಸಂಗತಿಗಳು ಬಯಲಿಗೆ
Triple Murder: ಜೂ.22ರಂದು ಪ್ರಿಯಕರನ ಜೊತೆಗೂಡಿ ಬೆಂಗಳೂರಿನ ಕೆಆರ್​ ಪುರದ ನಿವಾಸದಲ್ಲಿ ತಂದೆ-ತಾಯಿ ಮತ್ತು ತಂಗಿಯನ್ನು ಚಾಕುವಿನಿಂದ ಚುಚ್ಚಿ ಚುಚ್ಚಿ ಕೊಂದ ಶ್ವೇತಾ, ಲಿವ್​-ಇನ್​ ಪ್ರೇಮಿಗೋಸ್ಕರ ತನ್ನ ಹೆತ್ತವರು ಮತ್ತು ಸಹೋದರಿಯನ್ನೇ ಭೀಕರವಾಗಿ ಕೊಂದ ಪ್ರಕರಣ ರಾಜ್ಯದ ಜನತೆಯನ್ನು ಅಕ್ಷರಶಃ ಬೆಚ್ಚಿಬೀಳಿಸಿತ್ತು. ಆರೋಪಿ ಶ್ವೇತಾ ಮತ್ತು ಕೆನೆತ್​ ಸದ್ಯ ಕಂಬಿ ಎಣಿಸುತ್ತಿದ್ದಾರೆ. ಈ ಮಧ್ಯೆ, ತನಿಖೆಯಲ್ಲಿ ಕೊಲೆಗೂ ಮುನ್ನ ಎಐ ಸಹಾಯ ಪಡೆದ ಬಗ್ಗೆ ಕೆನೆತ್ ಬಾಯ್ಬಿಟ್ಟಿದ್ದಾನೆ. ​ 

ಬಂಧನದಲ್ಲಿ ಆರೋಪಿ ಪ್ರೇಮಿಗಳು

ಕೊಲೆಗೈದ ತಕ್ಷಣ ಪ್ರೇಮಿಯ ಜೊತೆ ಬೈಕ್​ನಲ್ಲಿ ತಮಿಳುನಾಡಿಗೆ ತೆರಳಿದ್ದ ಶ್ವೇತಾ, ಗಾಡಿ ಮಧ್ಯೆದಲ್ಲೇ ಕೆಟ್ಟು ಹೋದ ಕಾರಣ, ಬಸ್​ನಲ್ಲಿ ಒಂದಷ್ಟು ದೂರ ಪ್ರಯಾಣಿಸಿದ್ದಳು. ಅಷ್ಟರೊಳಗೆ ಆರೋಪಿಯ ಸುಳಿವನ್ನು ಪತ್ತೆಹಚ್ಚಿದ ಖಾಕಿ ಪಡೆ, ಬುಧವಾರ (ಜೂ.24) ಬೆಳಗ್ಗೆ ಪುದುಚೇರಿ ರೈಲ್ವೆ ನಿಲ್ದಾಣದ ಬಳಿಯಿರುವ ಬೀಚ್ ರಸ್ತೆಯಲ್ಲಿ ಆಕೆಯನ್ನು ವಶಕ್ಕೆ ಪಡೆಯಿತು. ಅದಾದ ಕೆಲವು ದಿನಗಳ ನಂತರ ಖಾಕಿ ಕಣ್ಣಿನಿಂದ ತಲೆಮರಿಸಿಕೊಂಡಿದ್ದ ಪ್ರಿಯರಕ ಕೆನೆತ್​ನನ್ನು ಬಂಧಿಸಲಾಯಿತು.

ಕೊಲೆಗೆ ಎಐ ಸಹಾಯ

ಪೊಲೀಸರ ಪ್ರಕಾರ, ಶ್ವೇತಾ ತನ್ನ ಕುಟುಂಬವನ್ನು ಕೊಲೆಗೈಯುವ ಮುನ್ನ ಮಾಸ್ಟರ್​ಪ್ಲ್ಯಾನ್​ ಹಾಕಿದ್ದ ಕೆನೆತ್, "ಹೌ ಟು ಮರ್ಡರ್​?, ದೇಹವನ್ನು ಯಾರಿಗೂ ಗೊತ್ತಾಗದಂತೆ ಮರೆ ಮಾಚುವುದು ಹೇಗೆ ಎಂದೆಲ್ಲ ನೇರವಾಗಿ ಎಐಗೆ ಪ್ರಶ್ನೆಗಳನ್ನು ಕೇಳಿಲ್ಲ. ಬದಲಿಗೆ ಮನೆಗೆ ಕಳ್ಳರು ಬಂದರೆ ದಾಳಿ ಮಾಡುವುದು ಹೇಗೆ?, ಅವರ ವಿರುದ್ಧ ಹೋರಾಡಲು ನಾನ್ಯಾವ ವಸ್ತುಗಳಿಂದ ಅವರ ಮೇಲೆ ಅಟ್ಯಾಕ್​ ಮಾಡಬೇಕು ಎಂದು ಪರೋಕ್ಷವಾಗಿ ಜೆಮಿನಿ ಎಐ ಬಳಿ ಮಾಹಿತಿ ಕಲೆಹಾಕಿದ್ದಾಗಿ ವಿವರಿಸಲಾಗಿದೆ. 
ತನಿಖೆಯ ಆಧಾರದ ಮೇರೆಗೆ ಇದೊಂದು ಪೂರ್ವನಿಯೋಜಿತ ಕೊಲೆ ಎಂಬುದನ್ನು ಪೊಲೀಸರು ಖಚಿತಪಡಿಸಿಕೊಂಡಿದ್ದಾರೆ. ಕೆನ್ನೆತ್ ಕೆಲವು ಸಮಯದಿಂದ ಈ ಪಾಪದ ಕೃತ್ಯಕ್ಕೆ ತಲೆಕೆಡಿಸಿಕೊಂಡಿದ್ದ ಎನ್ನಲಾಗಿದೆ. ಹಲವಾರು ಸಂದರ್ಭಗಳಲ್ಲಿ ಪ್ರೇಯಸಿ ಶ್ವೇತಾ ಜತೆ ಇದರ ಬಗ್ಗೆ ಮಾತನಾಡಿದ್ದ. ಆದ್ರೆ, ಶ್ವೇತಾ ಮಾತ್ರ ಕೋಪದಲ್ಲಿ ಈತ ಹೀಗೆಲ್ಲ ಹೇಳುತ್ತಿದ್ದಾನೆ ಎಂದು ಭಾವಿಸಿದ್ದಾಗಿ ತನಿಖಾಧಿಕಾರಿಗಳು ಹೇಳಿದ್ದಾರೆ.
ಪೊಲೀಸರ ಪ್ರಕಾರ, ಶ್ವೇತಾಳ ಕುಟುಂಬಸ್ಥರನ್ನು ಕೊಲೆ ಮಾಡುವುದು, ಅವರ ಹಣವನ್ನು ದೋಚಿಕೊಂಡು ತನ್ನ ಆರ್ಥಿಕ ಬಿಕ್ಕಟ್ಟುಗಳನ್ನು ಬಗೆಹರಿಸಿಕೊಂಡು ನೆಮ್ಮದಿಯಿಂದ ಬದುಕುವುದು ಕೆನ್ನೆತ್‌ನ ಮೂಲ ಉದ್ದೇಶವಾಗಿತ್ತು. ಪ್ರೇಯಸಿಯ ಪೋಷಕರು ಉಸಿರಾಡುವುದೇ ನಿಂತರೆ, ತನ್ನಿಂದ ಹಣಕ್ಕಾಗಿ ಬೇಡಿಕೆಯಿಡುವುದು ತಪ್ಪುತ್ತದೆ ಮತ್ತು ಶ್ವೇತಾ ಮನೆಯಲ್ಲಿ ಎದುರಿಸುತ್ತಿರುವ ದಿನನಿತ್ಯದ ಒತ್ತಡಕ್ಕೂ ಪುಲ್​ಸ್ಟಾಪ್​ ಬೀಳುತ್ತದೆ ಎಂಬುದು ಆರೋಪಿಯ ಕುತಂತ್ರವಾಗಿತ್ತು ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ,(ಏಜೆನ್ಸೀಸ್). 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net