ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳಿ (KSCMF) ಮತ್ತು ಬೀಜ ನಿಗಮದ (KSSC) ಮೂಲಕ ಕಾಪು ದಾಸ್ತಾನನ್ನು ಬಲಪಡಿಸಲಾಗಿದೆ. ಪ್ರಸ್ತುತ 28,224 ಮೆಟ್ರಿಕ್ ಟನ್ ಗೊಬ್ಬರ ಲಭ್ಯವಿದ್ದು, ಯೂರಿಯಾ ಮತ್ತು ಡಿ.ಎ.ಪಿ ಗೊಬ್ಬರಗಳ ಒಟ್ಟು ಅಗತ್ಯದ 25% ರಷ್ಟನ್ನು ಕಡ್ಡಾಯವಾಗಿ ಸಂಗ್ರಹಿಸಲು ನಿರ್ದೇಶನ ನೀಡಲಾಗಿದೆ. ಕಳೆದ ಮೂರು ವರ್ಷಗಳ ಸರಾಸರಿ ಬಳಕೆಯನ್ನು ಆಧರಿಸಿ ಜಿಲ್ಲಾವಾರು ಹಂಚಿಕೆಯನ್ನು ಮರು ನಿರ್ಧಾರ ಮಾಡಲಾಗಿದ್ದು, ಹೋಬಳಿ ಮಟ್ಟದಲ್ಲಿ ಪೂರೈಕೆ ಸಮಾತೋಲನ ಕಾಯ್ದುಕೊಳ್ಳಲು ಸೂಕ್ಷ್ಮ ಯೋಜನೆ ರೂಪಿಸಲಾಗಿದೆ.