ಬೇಸಿಗೆಗೆ ವರದಾನವಾದ ಕೃಷಿ ಹೊಂಡ

ಬೇಸಿಗೆಗೆ ವರದಾನವಾದ ಕೃಷಿ ಹೊಂಡ
ಬೇಸಿಗೆಗೆ ವರದಾನವಾದ ಕೃಷಿ ಹೊಂಡ
Published on
ಬಂಗಾರಪೇಟೆ : ಜಲಮೂಲಗಳಿಲ್ಲದ ಜಿಲ್ಲೆಗೆ ಕೆಸಿ ವ್ಯಾಲಿ ನೀರು ಸೇರಿ ಅನೇಕ ಕೆರೆ&ಕಟ್ಟೆಗಳು ಇದ್ದರೂ ಸಹ ಬೇಸಿಗೆ ಬಂದರೆ ನೀರಿನ ಅಭಾವ ಎದುರಾಗುತ್ತದೆ. ಕೃಷಿ ಪ್ರಧಾನ ಕೋಲಾರವು ಟೊಮ್ಯಾಟೊ, ಮಾವು ಬೆಳೆಗೆ ಖ್ಯಾತಿ ಪಡೆದಿದ್ದು, ಬೇಸಿಗೆ ವೇಳೆ ಸೊಪು$್ಪ&ತರಕಾರಿ ಬೆಳೆಗಳಿಗೆ ನೀರಿನ ಅಭಾವವಾಗದಂತೆ ಚಾಣಾಕ್ಷತೆ ಮೆರೆದೆ ರೈತರು ತಮ್ಮ ಕೃಷಿ ಹೊಂಡಗಳಲ್ಲಿ ನೀರು ಸಂಗ್ರಹಿಸಿದ್ದು, ಬೇಸಿಗೆಗೆ ವರದಾನವಾಗಿವೆ. summer
ಕೃಷಿ ಚಟುವಟಿಕೆ ಸುಧಾರಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಲವು ಯೋಜನೆ ಜಾರಿಗೆ ತಂದಿದ್ದು, ಅದರಲ್ಲಿ ಕೃಷಿ ಇಲಾಖೆಯ ಮೂಲಕ ನಿಮಾರ್ಣ ಮಾಡಿದ ಕೃಷಿ ಹೊಂಡಗಳು ರೈತರ ಕೈ ಹಿಡಿದಿದ್ದು, ಬಂಗಾರಪೇಟೆ ತಾಲೂಕಿನಲ್ಲಿ ಹೆಚ್ಚಾಗಿ ಕೃಷಿ ಹೊಂಡಗಳು ನೀರಿನ ಸಮಸ್ಯೆ ಸರಿದೂಗಿಸಿವೆ.
ಬಂಗಾರಪೇಟೆಯಲ್ಲೂ ಯಾವುದೇ ಜೀವ ನದಿಗಳು ಇಲ್ಲ. ಮಳೆ ಬಂದು ಕೆರೆಗಳು ತುಂಬಿದಾಗ ಮಾತ್ರ ಅಂತರ್ಜಲ ಮಟ್ಟ ಸುಧಾರಣೆ ಆಗುತ್ತದೆ. ಇಲ್ಲದಿದ್ದರೆ ಕೊಳವೆಬಾವಿಗಳಲ್ಲಿ ನೀರೇ ಗತಿ. ಬೇಸಿಗೆಯಲ್ಲಿ ಕೊಳವೆಬಾವಿಗಳಲ್ಲೂ ನೀರು ಪಾತಾಳ ಸೇರಿದ್ದು, ಈ ಪ್ರದೇಶದ ಬಹುಪಾಲು ಮಳೆ ಆಧಾರಿತ ಕೃಷಿ ಹೊಂದಿದೆ. ಮಳೆ ಸರಿಯಾಗಿ ಬಂದರೆ ರೈತರಿಗೆ ಲಾಭ ಸಿಗುತ್ತದೆ. ಮಳೆ ಕೊರತೆ ಅಥವಾ ಅನಿಯಮಿತ ಮಳೆಯಾದರೆ ರೈತರ ಬಾಳು ಅಯೋಮಯವಾಗುತ್ತದೆ. ಈ ಸಮಸ್ಯೆ ನಿಯಂತ್ರಣಕ್ಕೆ ಕೃಷಿ ಇಲಾಖೆ ಜಮೀನುಗಳಲ್ಲಿ ಕೃಷಿ ಹೊಂಡ ನಿರ್ಮಿಸಲು ಈಗಲೂ ಪ್ರೋತ್ಸಾಹ ಧನ ನೀಡುತ್ತಿದೆ. ಈ ಹೊಂಡಗಳಲ್ಲಿ ಮಳೆ ನೀರನ್ನು ಸಂಗ್ರಹಿಸಿ ಬೇಸಿಗೆ ಕಾಲದಲ್ಲಿ ಅಥವಾ ಮಳೆ ಕಡಿಮೆಯಾದ ಸಮಯದಲ್ಲಿ ಬೆಳೆಗಳಿಗೆ ನೀರು ಹಾಯಿಸುವ ಮೂಲಕ ಬೆಳೆಗಳ ಜೀವ ಉಳಿಸುತ್ತದೆ.
ಮಳೆ ಬಂದಾಗ ಹೊಲದ ನೀರು ಈ ಹೊಂಡಗಳಲ್ಲಿ ಸೇರುತ್ತದೆ. ಸಂಗ್ರಹ ನೀರನ್ನು ಪಂಪ್​ ಮೂಲಕ ಅಥವಾ ಇತರ ವಿಧಾನಗಳಿಂದ ಬೆಳೆಗಳಿಗೆ ಬಳಸಲಾಗುತ್ತದೆ. ಇದರಿಂದ ನೀರಿನ ಕೊರತೆಯ ಸಮಯದಲ್ಲಿ ಬೆಳೆಗಳು ಒಣಗುವ ಸಾಧ್ಯತೆ ಕಡಿಮೆಯಾಗುತ್ತದೆ. ಜತೆಗೆ ನೀರನ್ನು ಸಮರ್ಪಕವಾಗಿ ಬಳಸುವ ಮೂಲಕ ಉತ್ಪಾದನೆಯೂ ಹೆಚ್ಚುತ್ತದೆ.
ಕೃಷಿ ಹೊಂಡಗಳ ಮತ್ತೊಂದು ಮಹತ್ವದ ಪ್ರಯೋಜನವೆಂದರೆ ಜಲಮಟ್ಟ ಹೆಚ್ಚಿಸುತ್ತದೆ.
ತಾಲೂಕಿನ ರೈತರು ತರಕಾರಿ ಬೆಳೆಗಳು, ಹೂವು ಹಾಗೂ ಇತರೆ ಬೆಳೆಗಳನ್ನು ಬೆಳೆಯಲು ಈ ಕೃಷಿ ಹೊಂಡಗಳನ್ನು ಬಳಕೆ ಮಾಡುತ್ತಿದ್ದಾರೆ. ನೀರಿನ ಲಭ್ಯತೆ ಹೆಚ್ಚಾದ ಕಾರಣ ರೈತರ ಆದಾಯದಲ್ಲಿಯೂ ಏರಿಕೆ ಕಂಡುಬರುತ್ತಿದೆ.
ಕೃಷಿ ಹೊಂಡಗಳ ಬಳಕೆ ಮೀನುಗಾರಿಕೆಗೂ ಸಹಾಯವಾಗಿದೆ. ಕೆಲ ರೈತರು ಹೊಂಡಗಳಲ್ಲಿ ಮೀನು ಸಾಕುವುದರ ಮೂಲಕವೂ ಹೆಚ್ಚುವರಿ ಆದಾಯ ಪಡೆಯುತ್ತಿದ್ದಾರೆ.
ಕೃಷಿ ನಿರ್ದೇಶಕರ ವ್ಯಾಪ್ತಿಗೆ ಬರುವ ಕೆಜಿಎಫ್​ ಮತ್ತು ಬಂಗಾರಪೇಟೆ ತಾಲೂಕುಗಳಲ್ಲಿ 2025&26ನೇ ಸಾಲಿನಲ್ಲಿ 111 ಕೃಷಿ ಹೊಂಡ ನಿಮಾರ್ಣ ಮಾಡಲಾಗಿದೆ. ಸರ್ಕಾರದ ಮಾನದಂಡಗಳಂತೆ ನಿಮಾರ್ಣ ಮಾಡುವ ಹೊಂಡಗಳಿಗೆ ಸಹಾಯಧನ ನೀಡಲಾಗುವುದು.
ನಾರಾಯಣರೆಡ್ಡಿ, ತಾಲೂಕು ಸಹಾಯಕ ಕೃಷಿ ಅಧಿಕಾರಿ, ಬಂಗಾರಪೇಟೆ
ಕೃಷಿ ಹೊಂಡಗಳು ರೈತರಿಗೆ ಬಹಳ ಉಪಯುಕ್ತ. ವಿದ್ಯುತ್​ ಕೈಕೊಟ್ಟಾಗ ಕೃಷಿ ಹೊಂಡದಿಂದ ನೀರು ಪಂಪ್​ ಮಾಡಿ ಬೆಳೆ ರಕ್ಷಿಸಿಕೊಳ್ಳಬಹುದು. ನೀರಿಗೆ ಸಮಸ್ಯೆ ಆದಾಗ ಕೃಷಿ ಹೊಂಡದಲ್ಲಿ ನೀರನ್ನು ಶೇಖರಣೆ ಮಾಡಿ ಬೆಳೆಗಳಿಗೆ ಉಪಯೋಗಿಸಬಹುದು. ಕೃಷಿ ಹೊಂಡ ರೈತರ ಬೆಳೆಗಳಿಗೆ ಜೀವಜಲವಾಗಿದೆ.
ಚಿನ್ನಪ್ಪ ಕಣಿಂಬೆಲೆ, ಬಂಗಾರಪೇಟೆ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net