ಬಸವನಬಾಗೇವಾಡಿ ತಾಲೂಕಿನ ಮನಗೂಳಿ ಪಟ್ಟಣದ ಬಿ.ಎಸ್. ಪಾಟೀಲ ಪಪೂ ಮಹಾವಿದ್ಯಾಲಯದಲ್ಲಿ 2025-26 ನೇ ಸಾಲಿನ 12 ಜನರು ಅಗ್ನಿವೀರರಾಗಿ ಆಯ್ಕೆಗೊಂಡ ಸೇನಾನಿಗಳಿಗೆ ಸನ್ಮಾನ ಕಾರ್ಯಕ್ರಮ ಸಮಾರಂಭದಲ್ಲಿ ಭಾಗವಹಿಸಿ ಅಪ್ಪಗೌಡ ಪಾಟೀಲ ಮಾತನಾಡಿದರು. ರವಿಗೌಡ ಪಾಟೀಲ, ಪರಶುರಾಮ ರಾಠೋಡ, ಆರ್.ಕೆ. ಹನಗಂಡಿಮ ಮತ್ತಿತರರಿದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಜೆಡಿಎಸ್ ರಾಜ್ಯ ಹಿರಿಯ ಉಪಾಧ್ಯಕ್ಷ ಅಪ್ಪಗೌಡ ಪಾಟೀಲ ಮನಗೂಳಿ ಹೇಳಿಕೆ
ಸನ್ಮಾನ ಕಾರ್ಯಕ್ರಮ
ಬಸವನಬಾಗೇವಾಡಿ : ಅಗ್ನಿವೀರ ಯೋಜನೆ ಕೇವಲ ಉದ್ಯೋಗ ಕಲ್ಪಿಸುವ ಯೋಜನೆಯಲ್ಲ, ಯುವಕರಲ್ಲಿ ದೇಶಭಕ್ತಿ, ಶಿಸ್ತು, ನಾಯಕತ್ವ ಮತ್ತು ಯುವಕರಲ್ಲಿ ಸೇವಾ ಮನೋಭಾವ ಬೆಳೆಸುವ ಮಹತ್ವಾಕಾಂಕ್ಷಿ ರಾಷ್ಟ್ರೀಯ ಕಾರ್ಯಕ್ರಮವಾಗಿ ಎಂದು ಜೆಡಿಎಸ್ ರಾಜ್ಯ ಹಿರಿಯ ಉಪಾಧ್ಯಕ್ಷ ಅಪ್ಪಗೌಡ ಪಾಟೀಲ ಮನಗೂಳಿ ಹೇಳಿದರು.
ತಾಲೂಕಿನ ಮನಗೂಳಿ ಪಟ್ಟಣದ ಬಿ.ಎಸ್. ಪಾಟೀಲ ಪಪೂ ಮಹಾವಿದ್ಯಾಲಯದಲ್ಲಿ 2025-26ನೇ ಸಾಲಿನ 12 ಜನರು ಅಗ್ನಿವೀರರಾಗಿ ಆಯ್ಕೆಗೊಂಡ ಸೇನಾನಿಗಳಿಗೆ ಬುಧವಾರ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿ, ಮನಗೂಳಿ ಪಟ್ಟಣದಿಂದ ಅನೇಕ ಯುವಕರು ಅಗ್ನಿವೀರರಾಗಿ ಆಯ್ಕೆಗೊಂಡ ವಿಷಯ ಇಡೀ ಬಸವನಬಾಗೇವಾಡಿ ತಾಲೂಕಿಗೆ ಹೆಮ್ಮೆಯ ವಿಷಯವಾಗಿದೆ ಎಂದು ಹೇಳಿದರು.
17ರಿಂದ 21ವರ್ಷದ ಯುವಕರಿಗೆ ವಿಶೇಷ ತರಬೇತಿ ನೀಡಿ ರಾಷ್ಟ್ರ ಸೇವೆಗೆ ಸಜ್ಜುಗೊಳಿಸಲಾಗುತ್ತದೆ. ಮಕ್ಕಳನ್ನು ದೇಶ ಸೇವೆಗೆ ಕಳುಹಿಸುತ್ತಿರುವ ಪೋಷಕರ ತ್ಯಾಗ ಶ್ಲಾಘನೀಯ. ಯುವಕರಿಗೆ ಮಾರ್ಗದರ್ಶನ ನೀಡಿ ಸಾವಿರಾರು ಜನರ ಬದುಕಿನಲ್ಲಿ ಸಮಾಜದ ಅಭಿವೃದ್ಧಿಗೆ ಕೊಡುಗೆ ನೀಡಬೇಕು ಎಂದರು.
ಜಿ.ಪಂ. ಮಾಜಿ ಅಧ್ಯಕ್ಷ ಡಿಸಿಸಿ ಬ್ಯಾಂಕ್ ನಿರ್ದೇಶಕ ಚಂದ್ರಶೇಖರಗೌಡ ಪಾಟೀಲ ಮಾತನಾಡಿ, ಯೋಧರು ಮತ್ತು ರೈತರು ಎರಡು ಪ್ರಮುಖ ಶಕ್ತಿಗಳಾಗಿದ್ದು, ದೇಶದ ಗಡಿ ಕಾಯುವ ಸೈನಿಕರು ಹಾಗೂ ದೇಶಕ್ಕೆ ಅನ್ನ ನೀಡುವ ರೈತರ ಕೊಡುಗೆ ಅಪಾರ. ದೇಶಸೇವೆ ಕೇವಲ ಉದ್ಯೋಗವಲ್ಲ. ಅದು ರಾಷ್ಟ್ರದ ಮೇಲಿನ ಬದ್ಧತೆ, ತ್ಯಾಗ ಮತ್ತು ಕರ್ತವ್ಯದ ಸಂಕೇತ. ಅಗ್ನಿವೀರರಾಗಿ ಆಯ್ಕೆಯಾದ ಯುವಕರು ತಮ್ಮ ಕುಟುಂಬ, ಪಟ್ಟಣದ, ಜಿಲ್ಲೆ-ರಾಜ್ಯದ ಕೀರ್ತಿ ಹೆಚ್ಚಿಸಿದ್ದು, ಇತರ ಯುವಕರಿಗೂ ಮಾದರಿಯಾಗಿದ್ದಾರೆ ಎಂದು ಹೇಳಿದರು.
ವಿಜಯಪುರ ಜಿಲ್ಲಾ ಸಹಕಾರಿ ಯುನಿಯನ್ ನಿರ್ದೇಶಕ ವಿಶ್ವನಾಥಗೌಡ ಪಾಟೀಲ ಮಾತನಾಡಿದರು.
ಸೇನೆಗೆ ಆಯ್ಕೆಯಾದ ಸುನೀಲ ಬಂಡಿವಡ್ಡರ, ಸಂತೋಷ ಹಚಡದ, ಜಗದೀಶ ತಳೇವಾಡ, ವಿಕಾಸ ಹೂಗಾರ, ಆಕಾಶ ಕ್ಯಾತನ್ನವರ, ಮಲ್ಲಿಕಾರ್ಜುನ ಬಿರಾದಾರ, ರಾಹುಲ್ ಗುಜ್ಜಣ್ಣವರ, ಮಲ್ಲಿಕಾರ್ಜುನ ಹುಣಶಿಕಟ್ಟಿ, ಸಾಗರ ಜಾಧವ, ಚಂದ್ರಕಾಂತ ಹೂಗಾರ, ಬೀರೇಶ ಜ್ಯೋತಿ, ಸಂಗಮೇಶ ದೊಡಮನಿ ಅವರನ್ನು ಸನ್ಮಾನಿಸಲಾಯಿತು.
ಜನತಾ ಎಜುಕೇಷನ್ ಸೊಸೈಟಿ ಅಧ್ಯಕ್ಷ ರವಿಗೌಡ ಪಾಟೀಲ ಪ್ರಾಚಾರ್ಯ ಪರಶುರಾಮ ರಾಠೋಡಮ, ಆರ್.ಕೆ. ಹನಗಂಡಿಮ, ಸಾಹಿತಿ ಶಿವಾಜಿ ಮೋರೆ, ರೇವಣಸಿದ್ಧ ಮಣೂರ ಮತ್ತಿತರರಿದ್ದರು.