ಇದೇ ವರ್ಷ ಎಜಿಎಂ ಇಂಜಿನಿಯರಿಂಗ್ ಕಾಲೇಜು ಪ್ರಾರಂಭ

ಶಮನೇವಾಡಿಯಲ್ಲಿ ಎಜಿಎಂ ಇಂಜಿನಿಯರಿಂಗ್ ಕಾಲೇಜು ಆರಂಭ
ಶಮನೇವಾಡಿಯಲ್ಲಿ ಎಜಿಎಂ ಇಂಜಿನಿಯರಿಂಗ್ ಕಾಲೇಜು ಆರಂಭ
Published on

ಪ್ರಮುಖ ಮುಖ್ಯಾಂಶಗಳು

  • ಶಮನೇವಾಡಿಯಲ್ಲಿ ಎಜಿಎಂ ಕಾಲೇಜು ಪ್ರಾರಂಭ
  • ಸುದ್ದಿಗೋಷ್ಠಿಯಲ್ಲಿ ಗುಣಧರನಂದಿ ಮಹಾರಾಜ್ ಮಾಹಿತಿ
  • ಬಡ ಬಕ್ಕಳಿಗೆ ಕಡಿಮೆ ಶುಲ್ಕದಲ್ಲಿ ಶಿಕ್ಷಣ
ಶಮನೆವಾಡಿಯಲ್ಲಿ ಎಜಿಎಂ ಇಂಜಿನಿಯರಿಂಗ್ ಕಾಲೇಜು ಪ್ರಾರಂಭ
ಚಿಕ್ಕೋಡಿ: ಗಡಿಭಾಗದ ಬಡ ಹಾಗೂ ಮಧ್ಯಮ ವರ್ಗದವರೆಗೆ ಕಡಿಮೆ ಶುಲ್ಕದಲ್ಲಿ ಗುಣಮಟ್ಟದ ತಾಂತ್ರಿಕ ಶಿಕ್ಷಣ ದೊರೆಯಬೇಕು ಉದ್ದೇಶದಿಂದ ಈ ಶೈಕ್ಷಣಿಕ ವರ್ಷದಿಂದ ಶಮನೇವಾಡಿಯಲ್ಲಿ ಎಜಿಎಂ ಇಂಜಿನಿಯರಿಂಗ್ ಕಾಲೇಜು ಆರಂಭಿಸಲಾಗಿದೆ ಎಂದು ರಾಷ್ಟ್ರಸಂತ ಶ್ರೀ 108 ಗುಣಧರನಂದಿ ಮಹಾರಾಜರು ತಿಳಿಸಿದರು.
ತಾಲೂಕಿನ ಶಮನೇವಾಡಿ ಹೊರ ವಲಯದಲ್ಲಿ ನಿರ್ಮಾಣಗೊಂಡಿರುವ ಕಾಲೇಜು ಸಭಾಂಗಣದಲ್ಲಿ ಈಚೆಗೆ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ-ಮಹಾರಾಷ್ಟ್ರ ಗಡಿಭಾಗದ ಶಮನೇವಾಡಿ ಗ್ರಾಮದ ಬಡ ಕುಟುಂಬದಲ್ಲಿ ಜನಿಸಿದರು ತಾವು ಬಾಲ್ಯದಲ್ಲಿ ಶಿಕ್ಷಣದಿಂದ ವಂಚಿತ ಅನುಭವವನ್ನು ಪಡೆದಿದ್ದಾರೆ ಹಂಚಿಕೊಂಡರು. 'ನನಗೆ ಎದುರಾದ ಪರಿಸ್ಥಿತಿ ಬೇರೆ ಯಾವುದೇ ಮಗುವಿಗೆ ಬರಬಾರದು ಎಂಬ ಸಂಕಲ್ಪದಿಂದ 2007ರಲ್ಲಿ ಎಸ್.ಡಿ.ಎಂ. ಟ್ರಸ್ಟ್ ಮೂಲಕ ಶಿಕ್ಷಣ ಸಂಸ್ಥೆಗಳನ್ನು ಪ್ರಾರಂಭಿಸಲಾಯಿತು' ಎಂದು ಹೇಳಿದರು.
ಹುಬ್ಬಳ್ಳಿ, ವರೂರದಲ್ಲಿ ಪ್ರಸ್ತುತ ಎಸ್‌.ಡಿ.ಎಂ. ಟ್ರಸ್ಟ್ ಅಡಿಯಲ್ಲಿ ಜಮಖಂಡಿ, ಶಮನೇವಾಡಿ ಹಾಗೂ ಬಸ್ತವಾಡ ಸೇರಿದಂತೆ ವಿವಿಧೆಡೆ ಎಜಿಎಂನ 15 ಶಿಕ್ಷಣ ಸಂಸ್ಥೆಗಳ ಕಾರ್ಯ ನಿರ್ವಹಣೆ ಕಳೆದ ಎರಡು ಸಿಕ್ಕಲ್ಲಿ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಪಡೆದಿದ್ದಾರೆ. ಪ್ರಸ್ತುತ ಸುಮಾರು 8,000 ವಿದ್ಯಾರ್ಥಿಗಳು ವಿವಿಧ ಸಂಸ್ಥೆಗಳಲ್ಲಿ ಕಲಿಯುತ್ತಿದ್ದಾರೆಂದು ಮಾಹಿತಿ ಲಭ್ಯವಾಗಿದೆ.
ನೂತನ ಎಜಿಎಂ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸಿವಿಲ್ ಇಂಜಿನಿಯರಿಂಗ್
ಮಾರಾಟ ಮತ್ತು ಕಮ್ಯೂನಿಕೇಶನ್ ಇಂಜಿನಿಯರಿಂಗ್, ಕಂಪ್ಯೂಟರ್‌ಸೈನ್ಸ್ ಇಂಜಿನಿಯರಿಂಗ್ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಮತ್ತು ಮಶಿನ್ ಲರ್ನಿಂಗ್ ಸೇರಿದಂತೆ ನಾಲ್ಕು ವಿಭಾಗಗಳಲ್ಲಿ ಬಿ.ಐ. ಪದವಿ ಶಿಕ್ಷಣವನ್ನು ಪ್ರಾರಂಭಿಸಲಾಗಿದೆ.
ಡಾಕ್ಟರೇಟ್ ಪದವೀಧರ ಪ್ರಾಧ್ಯಾಪಕರು ಸೇರಿದಂತೆ ಅನುಭವಿ ಬೋಧಕರಾಗಿ ಕಾರ್ಯನಿರ್ವಹಿಸುತ್ತಾರೆ, ಬಡವರು ಕಡಿಮೆ ಶಿಷ್ಯವೇತನ, ಉಚಿತ ಬಸ್ ಸೌಲಭ್ಯ ಹಾಗೂ ಪ್ರಥಮ ವರ್ಷದಿಂದಲೇ ತರಬೇತಿ ಮತ್ತು ನೇಮಕಾತಿ (ಪ್ಲೇಸ್ಮೆಂಟ್) ತರಬೇತಿ ನೀಡಲಾಗುವುದು ಎಂದು ವಿವರಿಸಿದರು.
ಐಐಟಿ ಪ್ರಾಧ್ಯಾಪಕರಿಂದ ಆನ್ ಲೈನ್ ತರಬೇತಿ, ತಿಂಗಳ ಮೌಲ್ಯಾಧಾರಿತ ವಿಶೇಷ ಉಪನ್ಯಾಸ, ಪ್ರತಿ ಶನಿವಾರ ಐಐಟಿಯಿಂದ ಮಾರ್ಗದರ್ಶನ ಕಾರ್ಯಕ್ರಮ, ವಿದ್ಯಾರ್ಥಿಗಳನ್ನು ವ್ಯಸನಮುಕ್ತ ನಾಗಿಸಲು ಆರೋಗ್ಯ ಜಾಗೃತಿ ಶಿಬಿರ ಹಾಗೂ ಶೀಘ್ರದಲ್ಲಿ ವಿಜ್ಞಾನ ಮೇಳ ನಡೆಯುತ್ತಿದೆ ಎಂದು ತಿಳಿಸಿದರು.
ಸಂಚಾಲಕಿ ಭಾಗ್ಯಶ್ರೀ ಅಲಗೂರೆ, ಪ್ರಾಚಾರ್ಯ ಡಾ. ಆರ್.ಪಿ. ಪಾಟೀಲ, ಉಪಪ್ರಾಚಾರ್ಯ ಡಾ.ಬಿ.ಜೆ. ಪಾಟೀಲ, ಡಾ. ಸಂಜಯ ಅಂಕಲಿ, ಡಾ. ಸಚೀನ ಮೆಕ್ಕಳಕಿ, ಡಾ. ಶಾಂತಭೂಷಣ ಬಿ.ಎಂ., ಡಾ.ಶಶಿಕಾಂತ ವಾಳಕೆ, ಕೆ.ಆರ್. ಪಾಟೀಲ, ಅಭಿಜಿತ ಅಕೀವಾಟೆ, ಅಶ್ವಿನಿ ಫರಲಾದ, ಸ್ನೇಹಾ ವಾಳಕಿ, ಅಶ್ವಿನಿ ಮೋನಾಚಾರ್ಯ, ವೈಶ್ಯವ ಶೆಗಳೆ, ರಾಣಿಸುಟುರೆ ಹಾಗೂ ರವಿ ವಾಳಕೆ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net