ಕಾಗ್ನಿಟಿವ್ ಅನಾಲಿಸಿಸ್ ಕುರಿತು ಹಮ್ಮಿಕೊಂಡಿದ್ದ ಕಾರ್ಯಾಗಾರ
ಚಿಕ್ಕೋಡಿ ತಾಲೂಕಿನ ಶಮನೇವಾಡಿಯಲ್ಲಿ ಎಜಿಎಂ ಇಂಜಿನಿಯರಿಂಗ್ ಕಾಲೇಜು
ವಿದ್ಯಾರ್ಥಿಗಳಲ್ಲಿ ಸೃಜನಾತ್ಮಕತೆ ಬೆಳೆಸಬೇಕು
| ಫಾರ್ಮರ್ ಡಿನ್ ಡಾ.ಡಿ.ಎಚ್.ರಾವ್ ಅಭಿಪ್ರಾಯ| ಕಾರ್ಯಾಗಾರ
ವಿಜಯವಾಣಿ ಸುದ್ದಿಜಾಲ ಚಿಕ್ಕೋಡಿ:
ವಿದ್ಯಾರ್ಥಿಗಳಲ್ಲಿ ಅಂಕಿಅಂಶಗಳ
ಮತ್ತು ಮೌಲ್ಯಮಾಪನ ಮಾಡುವಂತೆ ಹೊಸದನ್ನು ಸೃಷ್ಟಿಸುವಂತೆ ಮಾಡುವುದು ಪ್ರಾಧ್ಯಾಪಕರ ಜವಾಬ್ದಾರಿಯಾಗಿದೆ. ವಿದ್ಯಾರ್ಥಿಗಳು ಬುದ್ದಿಮಟ್ಟ ಅರಿತು
ಪಾಠ ಮಾಡುವುದು ಪರಿಣಾಮಕಾರಿ ಬೋಧನೆಯಾಗಿದೆ ಎಂದು ಬೆಳಗಾವಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಫಾರ್ಮರ್ ಡಿನ್ ಡಾ.ಡಿ.ಎಚ್.ರಾವ್ ಅಭಿಪ್ರಾಯಪಟ್ಟರು.
ತಾಲ್ಲೂಕಿನ ಶಮನೇವಾಡಿಯ ಎಜಿಎಂ ಇಂಜಿನಿಯರಿಂಗ್ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ಕಾಗ್ನಿಟಿವ್ ಅನಾಲಿಸಿಸ್ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಪ್ರಾಧ್ಯಾಪಕರು ತಮ್ಮ ವ್ಯಕ್ತಿತ್ವವನ್ನು ಅರ್ಥೈಸಿಕೊಳ್ಳುವುದರಿಂದ ಅವರ ಬೋಧನೆ ಪರಿಣಾಮಕಾರಿಯಾಗಿರುತ್ತದೆ. ವ್ಯಕ್ತಿತ್ವ ವಿಕಸನ ಎಂದರೇ ನಾವು ಶಿಸ್ತಿನ ಜೊತೆಗೆ ಸೃಜನಾತ್ಮಕತೆ ಬೆಳೆಸಿಕೊಳ್ಳಬೇಕು. ವಿದ್ಯಾರ್ಥಿಗಳ ಕಾಗ್ನಿಟಿವ್ ಪ್ರೊಸೆಸನ್ನು ಅರ್ಥ ಮಾಡಿಕೊಳ್ಳುವುದರಿಂದ ಪರಿಣಾಮಕಾರಿ ಬೋದನೆ ಮಾಡಲು ಸಹಕಾರಿಯಾಗುತ್ತದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಚಾರ್ಯ ಡಾ. ಸಂಜಯ ಅಂಕಲಿ ಮಾತನಾಡಿ ಕಾಗ್ನಿಟಿವ್ ಅನಾಲಿಸಿಸ್ ಪ್ರಮುಖ ಅಂಶವೆಂದರೆ ಪ್ರತಿಯೊಬ್ಬ ವಿದ್ಯಾರ್ಥಿಯು ವಿಭಿನ್ನ ಎಂಬುವುದನ್ನು ಅರ್ಥ ಮಾಡಿಕೊಳ್ಳುವುದು. ಆದ್ದರಿಂದ ವಿದ್ಯಾರ್ಥಿಗಳು ಹೊಸ ಪ್ರಯತ್ನಗಳನ್ನು ಮಾಡಲೂ ಮುಕ್ತವಾಗಿರುವಂತಹ ಉತ್ತಮ ಕಲಿಕೆಯ ವಾತಾವರಣ ನಿರ್ಮಿಸಬೇಕು.
ರಾಷ್ಟ್ರಸಂತ ಆಚಾರ್ಯ ೧೦೮ ಗುಣಧರನಂದಿ ಮಹಾರಾಜರು ಬಡ ಕುಟುಂಬದಲ್ಲಿ ಜನಿಸಿದ ಶಿಕ್ಷಣದಿಂದ ವಂಚಿತರಾಗಿದ್ದಾರೆ. ತಮಗೆ ಬಂದ ಸ್ಥಿತಿ ಬೇರೆ ಯಾರಿಗೂ ಬರದಿರಲೆಂದು ಸಾಕಷ್ಟು ಶಿಕ್ಷಣ ನೀಡಿ ಅವರ ಜೀವನ ರೂಪಿಸಿದ್ದಾರೆ . ಅವರ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಸಂಸ್ಥೆ ಶಿಕ್ಷಣದ ಜೊತೆಗೆ ಒಳ್ಳೆಯ ಸಂಸ್ಕಾರ, ವ್ಯಸನಮುಕ್ತ ಸಮಾಜ ನಿರ್ಮಿಸುವ ಗುರಿ ಹೊಂದಿದ್ದೇನೆ ಎಂದ.
ಡಾ.ಶಶಿಕಾಂತ ವಾಳಕಿ, ಕೆ.ಆರ್ ಪಾಟೀಲ, ಪ್ರಶಾಂತ ಶೇಡಬಾಳಕರ, ಸ್ನೇಹಾ ವಾಳಕಿ,ಅಶ್ವಿನಿ ಮೋನಾಚಾರ್ಯ,ರಾಣಿ ಸುಟುರೆ, ರವಿ ವಾಳಕೆ, ಡಾ. ಸಚೀನ ಮೆಕ್ಕಳಕಿ ಇತರರಿದ್ದರು.