ಕೈಗೆಟಕುವ ದರದಲ್ಲಿ ವಿದ್ಯುತ್​ ಚಿತಾಗಾರ

ಕೈಗೆಟಕುವ ದರದಲ್ಲಿ ವಿದ್ಯುತ್​ ಚಿತಾಗಾರ
ಕೈಗೆಟಕುವ ದರದಲ್ಲಿ ವಿದ್ಯುತ್​ ಚಿತಾಗಾರ
Published on
ಕೆಜಿಎಫ್: ನಗರ ಪ್ರದೇಶವು ದಿನದಿಂದ ದಿನಕ್ಕೆ ವಿಸ್ತಾರಗೊಳ್ಳುತ್ತಿದ್ದು, ಪಾರಂಡಹಳ್ಳಿ ರಸ್ತೆಯಲ್ಲಿರುವ ಖಾಸಗಿ ಚಿತಾಗಾರವು ಜನವಸತಿ ಪ್ರದೇಶದಲ್ಲಿರುವುದರಿಂದ ಜನರು ಭಯ ಬೀಳುವ ಸನ್ನಿವೇಶ ನಿರ್ಮಾಣವಾಗಿರುವುದರಿಂದ ಅಂದಾಜು 4 ಕೋಟಿ ರೂ. ಅನುದಾನದಲ್ಲಿ ಆಧುನಿಕವಾದ ವಿದ್ಯುತ್​ ಚಿತಾಗಾರ ನಿರ್ಮಿಸಲಾಗುತ್ತಿದೆ ಎಂದು ಶಾಸಕಿ ರೂಪಕಲಾ ಹೇಳಿದರು. crematorium
ನಗರದ ಗಾಂಧಿನಗರ ವಾರ್ಡ್​ನಲ್ಲಿರುವ ಸ್ಮಶಾನದಲ್ಲಿ ಭಾನುವಾರ ಆಧುನಿಕ ವಿದ್ಯುತ್​ ಚಿತಾಗಾರ ನಿರ್ಮಾಣಕ್ಕೆ ಚಾಲನೆ ನೀಡಿ ಮಾತನಾಡಿದರು.
ಎಲ್ಲ ಸಮುದಾಯಗಳ ಅನುಕೂಲಕ್ಕಾಗಿ ಎಲ್ಲರ ಕೈಗೆಟುಕುವ ದರದಲ್ಲಿ ವಿದ್ಯುತ್​ ಚಿತಾಗಾರ ನಿರ್ಮಾಣ ಮಾಡಲಾಗುತ್ತಿದ್ದು, ಮುಂದಿನ 12 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಲಾಗುವುದು. ಹಿಂದೆ ಇಲ್ಲಿನ ಜನಪ್ರತಿನಿಧಿಗಳು ಯಾವುದೇ ಅಭಿವೃದ್ಧಿ ಕೆಲಸಗಳನ್ನು ಮಾಡಿರಲಿಲ್ಲ ಈಗ ಜನರ ಅವಶ್ಯ ಆದ್ಯತೆ ಮೇರೆಗೆ ಪೂರ್ಣಗೊಳಿಸುವ ಕೆಲಸ ಮಾಡುತ್ತಿದ್ದೇನೆ ಎಂದರು.
ನಗರ ಪ್ರದೇಶದಲ್ಲಿ 30&40 ವರ್ಷಗಳಿಂದ ಮಾಡಲಾಗದ ಅಶೋಕ ನಗರ ರಸ್ತೆ ಸೇರಿ ಬೀದಿ ದೀಪಗಳ ಅಳವಡಿಕೆ, ವಾರ್ಡ್​ಗಳಲ್ಲಿನ ರಸ್ತೆಗಳ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ ಎಂದರು.
ಸನಾತನ ಧರ್ಮಸಭಾದ ಉಪಾಧ್ಯಕ್ಷ ಪ್ರಸನ್ನ ಕುಮಾರ್​ ದೀತ್​ ಮಾತನಾಡಿ, ಬ್ರಾಹ್ಮಣ ಸಮುದಾಯದವರಿಗೆ ನಗರದಲ್ಲಿ ಶವ ಸಂಸ್ಕಾರ ಮಾಡಲು ಚಿತಾಗಾರ ವ್ಯವಸ್ಥೆ ಇರಲಿಲ್ಲ. 11ನೇ ದಿನದ ಶ್ರಾದ್ಧ ಹಾಗೂ ಇತರೆ ಕಾರ್ಯ ನಡೆಸಲು ಜಾಗದ ಕೊರತೆಯಿರುವುದರಿಂದ ಪಾರಂಡಹಳ್ಳಿ ಹೊರ ಭಾಗದಲ್ಲಿರುವ ಕೆರೆಯ ಬಳಿ ಕೊಠಡಿ ನಿಮೀರ್ಸಿಕೊಡುವಂತೆ ಮನವಿ ಸಲ್ಲಿಸಿದರು. ಅಧಿಕಾರಿಗಳೊಂದಿಗೆ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಶಾಸಕಿ ರೂಪಕಲಾ ತಿಳಿಸಿದರು.
ನೀರಿನ ಕೊರತೆ ನೀಗಿಸಲು ಮುಂಜಾಗ್ರತಾ ಕ್ರಮ :
ಬೇಸಿಗೆ ಪ್ರಾರಂಭವಾಗಿದ್ದು ನಗರಸಭೆ ವ್ಯಾಪ್ತಿಯ 35 ವಾರ್ಡ್​ಗಳಲ್ಲಿ ನೀರಿನ ಸಮಸ್ಯೆ ತಲೆದೋರದಂತೆ ಮುಂಜಾಗ್ರತಾ ಕ್ರಮವಾಗಿ ಕೊಳವೆಬಾವಿ ಕೊರೆಯಿಸಲಾಗುತ್ತಿದೆ ಎಂದು ಶಾಸಕಿ ರೂಪಕಲಾ ಹೇಳಿದರು. ನಗರೋತ್ಥಾನ ಹಂತ 4 ಯೋಜನೆಯಡಿ ನಗರದ 21ನೇ ವಾರ್ಡ್​ನ ಉರಿಗಾಂಪೇಟೆಯ ಮಂಜುನಾಥ ನಗರ, ಓರಿಯಂಟಲ್​ ಲೈನ್​, 10ನೇ ವಾರ್ಡ್​, ಮಾರಿಕುಪ್ಪಂ 11ನೇ ವಾರ್ಡ್​ಗಳಲ್ಲಿ ನೂತನ ಕೊಳವೆಬಾವಿಗೆ ಚಾಲನೆ ನೀಡಿ ಮಾತನಾಡಿದರು. ಬೇಸಿಗೆಯಲ್ಲಿ ನಗರದಾದ್ಯಂತ ಕುಡಿಯುವ ನೀರಿನ ಸಮಸೆಯ ಉಂಟಾಗಬಾರದು ಎನ್ನುವ ಉದ್ದೇಶದಿಂದ ಮುಂಜಾಗ್ರತಾ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ನಗರಸಭೆ ಅಧಿಕಾರಿಗಳೊಂದಿಗೆ ಸುರ್ಧೀ ಚರ್ಚೆ ನಡೆಸಿರುವುದಾಗಿ ತಿಳಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net