ಭಗೀರಥ ಮಹರ್ಷಿಗಳ ತತ್ವಾದರ್ಶ ಅಳವಡಿಸಿಕೊಳ್ಳಿ

ಕಲಬುರಗಿ ಡಾ.ಪಂಡಿತ್​ ರಂಗಮಂದಿರದಲ್ಲಿ ಗುರುವಾರ ಆಯೋಜಿಸಿದ್ದ ಭಗೀರಥ ಮಹರ್ಷಿ ಜಯಂತಿ ಕಾರ್ಯಕ್ರಮದಲ್ಲಿ ಗಣ್ಯರು ದೀಪ ಬೆಳಗಿದರು. ರಂಗನಾಥ ಜಡಿ, ಗೋವಿಂದ ಸಗರ, ಜಗದೀಶ್ವರಿ ನಾಸಿ, ಭಗವಂತ ಡೋಣೂರ, ನಾಗರಾಜ, ವೆಂಕಟೇಶ್​ ನೀರಡಗಿ, ಸತೀಶ್​ ಸಗರ, ಗೋಪಾಲ ದೊಡ್ಡಮನಿ, ಬಸವರಾಜ್​ ನಾಲ್ವಾರ್​, ಭೀಮರಾಯ, ಮೌನೇಶ್​ ಪೂಜಾರಿ, ಭೀಮರಾಯ ರಾಮಪುರಹಳ್ಳಿ, ನರಸಪ್ಪ ಜಡಿ, ರಾವೇಂದ್ರ ಶಾಂತಪುರ ಇತರರಿದ್ದರು
ಕಲಬುರಗಿ ಡಾ.ಪಂಡಿತ್​ ರಂಗಮಂದಿರದಲ್ಲಿ ಗುರುವಾರ ಆಯೋಜಿಸಿದ್ದ ಭಗೀರಥ ಮಹರ್ಷಿ ಜಯಂತಿ ಕಾರ್ಯಕ್ರಮದಲ್ಲಿ ಗಣ್ಯರು ದೀಪ ಬೆಳಗಿದರು. ರಂಗನಾಥ ಜಡಿ, ಗೋವಿಂದ ಸಗರ, ಜಗದೀಶ್ವರಿ ನಾಸಿ, ಭಗವಂತ ಡೋಣೂರ, ನಾಗರಾಜ, ವೆಂಕಟೇಶ್​ ನೀರಡಗಿ, ಸತೀಶ್​ ಸಗರ, ಗೋಪಾಲ ದೊಡ್ಡಮನಿ, ಬಸವರಾಜ್​ ನಾಲ್ವಾರ್​, ಭೀಮರಾಯ, ಮೌನೇಶ್​ ಪೂಜಾರಿ, ಭೀಮರಾಯ ರಾಮಪುರಹಳ್ಳಿ, ನರಸಪ್ಪ ಜಡಿ, ರಾವೇಂದ್ರ ಶಾಂತಪುರ ಇತರರಿದ್ದರು
Published on

ಪ್ರಮುಖ ಮುಖ್ಯಾಂಶಗಳು

  • ಸಹಕಾರ ಸಂಗಳ ಲೆಕ್ಕಪರಿಶೋಧಕ ರಂಗನಾಥ ಜಡಿ ಹೇಳಿಕೆ
  • ಕಲಬುರಗಿಯಲ್ಲಿ ಜಯಂತ್ಯುತ್ಸವ
ಕಲಬುರಗಿ: ಜೀವನದಲ್ಲಿ ಎದುರಾಗುವ ಸವಾಲು ಕಂಡು ಬೆದರದೆ ದೃಢ ಸಂಕಲ್ಪದಿಂದ ಮುನ್ನುಗ್ಗಿದರೆ ಸಾಧನೆ ಸಾಧ್ಯ ಎಂಬುದಕ್ಕೆ ಶ್ರೀ ಭಗೀರಥ ಮಹರ್ಷಿಗಳೇ ಶ್ರೇಷ್ಠ ಉದಾಹರಣೆ. ಹೀಗಾಗಿ ಅವರು ಹಾಕಿಕೊಟ್ಟ ಮಾರ್ಗ ನಮಗೆಲ್ಲರಿಗೂ ಆದರ್ಶ. ಅವರ ತತ್ವಾದರ್ಶ ಅಳವಡಿಸಿಕೊಳ್ಳಬೇಕು ಎಂದು ಸಹಕಾರ ಸಂಗಳ ಹಿರಿಯ ಲೆಕ್ಕಪರಿಶೋಧಕ ರಂಗನಾಥ ಎಸ್​.ಜಡಿ ಹೇಳಿದರು.
ನಗರದಲ್ಲಿ ಡಾ.ಎಸ್​.ಎಂ.ಪಂಡಿತ್​ ರಂಗ ಮಂದಿರದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸತ ಇಲಾಖೆ, ಮಹನಗರ ಪಾಲಿಕೆ ಹಾಗೂ ಜಿಲ್ಲಾ ಪಂಚಾಯಿತಿ ಸಹಯೋಗದಲ್ಲಿ ಗುರುವಾರ ಆಯೋಜಿಸಿದ್ದ ಶ್ರೀ ಭಗೀರಥ ಜಯಂತಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಅವರು, ಸಗರ ಚಕ್ರವರ್ತಿಯ ಅರವತ್ತು ಸಾವಿರ ಪುತ್ರರು ಕಪಿಲ ಮುನಿಗಳ ಶಾಪಕ್ಕೆ ತುತ್ತಾಗಿ ಭಸ್ಮವಾದಾಗ ಅವರ ಆತ್ಮಕ್ಕೆ ಸದ್ಗತಿ ದೊರಕಿಸಲು ಭಗೀರಥನು ಪಟ್ಟ ಶ್ರಮ ಇತಿಹಾಸದಲ್ಲಿ ಅಚ್ಚಳಿಯದಂತಿದೆ ಎಂದರು.
ಇಂದಿನ ಯುವ ಪೀಳಿಗೆಯು ಅಲ್ಪ ಹಿನ್ನಡೆಗೂ ಅಧೀರರಾಗುತ್ತಿದ್ದಾರೆ. ಆದರೆ ಭಗೀರಥನ ಕಥೆಯು ನಮಗೆ ಸೋಲೊಪ್ಪದ ಛಲ ಕಲಿಸುತ್ತದೆ. ಭಗೀರಥ ಪ್ರಯತ್ನ ಎಂಬ ಪದವೇ ಇಂದು ಕಠಿಣ ಪರಿಶ್ರಮಕ್ಕೆ ಪರ್ಯಾಯವಾಗಿದೆ. ಗುರಿ ಮುಟ್ಟುವ ತನಕ ವಿರಮಿಸದ ಅಪ್ರತಿಮ ವ್ಯಕ್ತಿತ್ವ ಅವರದ್ದು ಎಂದು ಬಣ್ಣಿಸಿದರು.
ಉಪ್ಪಾರ ಸಂ ಜಿಲ್ಲಾ ಅಧ್ಯಕ್ಷ ಗೋವಿಂದ ಸಗರ ಮಾತನಾಡಿ, ನಗರದಲ್ಲಿ ಭಗೀರಥ ಮಹರ್ಷಿ ಜಯಂತಿ ಸರಳವಾಗಿ ಆಚರಿಸಲಾಗಿದ್ದು, ಮುಂದಿನ ದಿನಗಳಲ್ಲಿ ಸಮಾಜದ ಗುರುಗಳ ಸನ್ನಿಧಿಯಲ್ಲಿ ವಿಜೃಂಭಣೆಯಿಂದ ಆಚರಿಸೋಣ ಎಂದರು.
ಕನ್ನಡ ಮತ್ತು ಸಂಸತಿ ಇಲಾಖೆ ಉಪ ನಿರ್ದೇಶಕಿ ಜಗದೀಶ್ವರಿ ನಾಸಿ ಸ್ವಾಗತಿಸಿದರು. ಭಗವಂತ ಡೋಣೂರ ವಂದಿಸಿದರು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಕಚೇರಿಯ ಪ್ರಥಮ ದರ್ಜೆ ಸಹಾಯಕ ನಾಗರಾಜ, ಭಗೀರಥ ಸೌಹಾರ್ದ ಸಹಕಾರಿ ಬ್ಯಾಂಕ್​ ಅಧ್ಯಕ್ಷ ವೆಂಕಟೇಶ್​ ನೀರಡಗಿ, ಸತೀಶ್​ ಸಗರ, ಗೋಪಾಲ ದೊಡ್ಡಮನಿ, ಬಸವರಾಜ್​ ನಾಲ್ವಾರ್​, ಭೀಮರಾಯ ವಿ.ಪಿ, ಮೌನೇಶ್​ ಪೂಜಾರಿ, ಭೀಮರಾಯ ರಾಮಪುರಹಳ್ಳಿ, ನರಸಪ್ಪ ಜಡಿ, ರಾವೇಂದ್ರ ಶಾಂತಪುರ ಇತರರಿದ್ದರು.

ಭಗೀರಥ ಮಹರ್ಷಿಗಳು ತನ್ನ ಸುಖ&ಭೋಗ ತ್ಯಜಿಸಿ, ಘೋರ ತಪಸ್ಸನ್ನಾಚರಿಸಿ ಆಕಾಶಗಂಗೆಯನ್ನು ಧರೆಗೆ ತಂದ ಭಗೀರಥನ ಕಾರ್ಯ ಕೇವಲ ಒಂದು ವಂಶದ ಮುಕ್ತಿಯಲ್ಲ, ಅದು ಇಡೀ ಮನುಕುಲಕ್ಕೆ ದೊರೆತ ಮಹಾನ್​ ಕೊಡುಗೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net