ಬದುಕಿನಲ್ಲಿ ನಿಷ್ಕಲ್ಮಷ ಭಕ್ತಿ ಅಳವಡಿಸಿಕೊಳ್ಳಿ

ಬಾದಾಮಿ ಪಟ್ಟಣದ ಹೇಮರಡ್ಡಿ ಮಲ್ಲಮ್ಮ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ ಮಹಾಸಾಧ್ವಿ ಶಿವಶರಣೆ ಹೇಮರಡ್ಡಿ ಮಲ್ಲಮ್ಮನ 604ನೇ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಗಣ್ಯರು ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ಜಿ.ಜಿ. ಗೌಡಪ್ಪಗೋಳ, ಡಿ.ಎಂ. ಪೈಲ್, ಎಸ್.ಎ. ಭರಮಗೌಡರ, ಎಸ್.ಆರ್. ಮೆಳ್ಳಿ ಇತರರಿದ್ದರು.
ಬಾದಾಮಿ ಪಟ್ಟಣದ ಹೇಮರಡ್ಡಿ ಮಲ್ಲಮ್ಮ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ ಮಹಾಸಾಧ್ವಿ ಶಿವಶರಣೆ ಹೇಮರಡ್ಡಿ ಮಲ್ಲಮ್ಮನ 604ನೇ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಗಣ್ಯರು ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ಜಿ.ಜಿ. ಗೌಡಪ್ಪಗೋಳ, ಡಿ.ಎಂ. ಪೈಲ್, ಎಸ್.ಎ. ಭರಮಗೌಡರ, ಎಸ್.ಆರ್. ಮೆಳ್ಳಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ವಿಶ್ರಾಂತ ಉಪ ಆಯುಕ್ತ ಜಿ.ಜಿ. ಗೌಡಪ್ಪಗೋಳ ಅಭಿಮತ
  • ಹೇಮರಡ್ಡಿ ಮಲ್ಲಮ್ಮ ಜಯಂತ್ಯುತ್ಸವ
ಬಾದಾಮಿ: ಹೇಮರಡ್ಡಿ ಮಲ್ಲಮ್ಮ ಅವರ ಆದರ್ಶಗಳು ಎಂದೆಂದಿಗೂ ಪ್ರಸ್ತುತ. ಅವರ ಆದರ್ಶಗಳನ್ನು ಎಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹುಬ್ಬಳ್ಳಿ ವಾಣಿಜ್ಯ ತೆರಿಗೆ ಇಲಾಖೆಯ ವಿಶ್ರಾಂತ ಉಪ ಆಯುಕ್ತ ಜಿ.ಜಿ. ಗೌಡಪ್ಪಗೋಳ ಹೇಳಿದರು.
ಪಟ್ಟಣದ ಹೇಮರಡ್ಡಿ ಮಲ್ಲಮ್ಮ ಸಮುದಾಯ ಭವನದಲ್ಲಿ ವಿದ್ಯಾನಗರದ ಹೇಮ-ವೇಮ ಚಾರಿಟೇಬಲ್ ಸಂಸ್ಥೆ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಮಹಾಸಾಧ್ವಿ ಶಿವಶರಣೆ ಹೇಮರಡ್ಡಿ ಮಲ್ಲಮ್ಮನ 604ನೇ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ತಾಳ್ಮೆ, ಸಹನೆ, ಸದಾಚಾರ, ಸಂತೃಪ್ತಿ, ದಾನ, ನಿಷ್ಕಲ್ಮಷ ಭಕ್ತಿ ಇವುಗಳನ್ನು ಅಳವಡಿಸಿಕೊಂಡು ಮಲ್ಲಮ್ಮ ಜೀವನದಲ್ಲಿ ಬಹಳ ಕಷ್ಟ ಅನುಭವಿಸಿ ಶಿವಶರಣೆಯಾದಳು. ಇವರ ಆದರ್ಶ ಎಲ್ಲರಿಗೂ ಮಾದರಿ ಎಂದು ಹೇಳಿದರು.
ಸಂಸ್ಥೆಯ ಅಧ್ಯಕ್ಷ ಡಿ.ಎಂ. ಪೈಲ್ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಎಸ್.ಎ. ಭರಮಗೌಡರ ಪ್ರಾಸ್ಥಾವಿಕ ಮಾತನಾಡಿದರು. ಅತಿ ಹೆಚ್ಚು ಅಂಕ ಪಡೆದ ರಡ್ಡಿ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಮತ್ತು ಸೇವೆಯಿಂದ ನಿವೃತ್ತರಾದ ನೌಕರರನ್ನು ಗೌರವಿಸಲಾಯಿತು.
ರಾಜ್ಯ ಮಾರಾಟ ಮಂಡಳಿ ನಿರ್ದೇಶಕ ಎಸ್.ಆರ್. ಮೆಳ್ಳಿ, ಹೇಮ-ವೇಮ ಚಾರಿಟೇಬಲ್ ಸಂಸ್ಥೆ ಉಪಾಧ್ಯಕ್ಷ ಡಿ.ಪಿ. ಅಮಲಝರಿ, ಶ್ರೀಶೈಲ ಮಲ್ಲಿಕಾರ್ಜುನ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ವಿ.ಎಸ್. ದೇಸಾಯಿ, ಹೇಮರಡ್ಡಿ ಮಲ್ಲಮ್ಮ ಮಹಿಳಾ ವೇದಿಕೆ ಅಧ್ಯಕ್ಷೆ ಲಕ್ಷ್ಮೀ ಕಟ್ಟಿ, ಉಪಾಧ್ಯಕ್ಷೆ ಪ್ರೇಮಾ ಪಾಟೀಲ, ಸಿ.ವಿ. ಚನವೀರಗೌಡರ, ಎಸ್.ಎಂ. ಪಾಟೀಲ, ವಿ.ಆರ್.ಪಾಟೀಲ, ಎಸ್.ಎಂ.ಸುಂಕದ, ವಿ.ಎಸ್. ಪಾಟೀಲ, ಸಿ.ಎಸ್. ಹೊಸಗೌಡರ, ಡಾ.ಎಸ್.ಆರ್. ಉಗಲವಾಟ ಇತರರಿದ್ದರು.
ಮಧುಮಾಲಾ ನಾಲತನಾಡ ನಿರೂಪಿಸಿದರು. ಪ್ರತಿಭಾ ಚನ್ನಪ್ಪಗೌಡರ ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net