ಗುಡಿವಂಡೆ ಪೊಲೀಸ್ ಠಾಣೆ ಆವರಣದಲ್ಲಿ ಆಯೋಜಿಸಿದ್ದ ಶಾಂತಿ ಸಭೆಯಲ್ಲಿ ಆರಕ್ಷಕ ವೃತ್ತ ನಿರೀಕ್ಷಕ ಮುನಿಕೃಷ್ಣ ಮಾತನಾಡಿದರು.
Published on:
Copied
Follow Us
ಗುಡಿಬಂಡೆ: ತಾಲೂಕಿನಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಅನುಮತಿ ಪಡೆದು ಶಾಂತಿ ಹಾಗೂ ಸೌಹಾರ್ದತೆ ಕಾಪಾಡಬೇಕು. ಸರ್ಕಾರದ ನಿಯಮಗಳಿಗೆ ಬದ್ಧರಾಗದೇ ನಿಯಮ ಮೀರಿದರೆ ಕ್ರಮ ಕೈಗೊಳ್ಳಲಾಗುವುದು ಎಂದು ಆರಕ್ಷಕ ವೃತ್ತ ನಿರೀಕ್ಷಕ ಮುನಿಕೃಷ್ಣ ತಿಳಿಸಿದರು.
ಪಟ್ಟಣದ ಠಾಣೆ ಆವರಣದಲ್ಲಿ ಸೋಮವಾರ ಆಯೋಜಿಸಿದ್ದ ಗೌರಿ&-ಗಣೇಶ ಹಬ್ಬದ ಶಾಂತಿ ಸಭೆಯಲ್ಲಿ ಮಾತನಾಡಿ, ಸಾರ್ವಜನಿಕ ಸ್ಥಳಗಳಲ್ಲಿ ಮೂರ್ತಿ ಪ್ರತಿಷ್ಠಾಪನೆ ಮಾಡುವವರು ವಾಹನ ಓಡಾಡುವ ಸ್ಥಳದಲ್ಲಿ ಶಾಮಿಯಾನ ಹಾಕುವಂತಿಲ್ಲ.
ಬೆಸ್ಕಾಂ, ಅಗ್ನಿಶಾಮಕ, ತಹಸೀಲ್ದಾರ್ ಕಚೇರಿ, ಸ್ಥಳಿಯ ಪಪಂ ಹಾಗೂ ಗ್ರಾಪಂ, ಪೊಲೀಸ್ ಇಲಾಖೆಯಿಂದ ಪರವಾನಿಗೆ ಪಡೆಯಬೇಕು. ಸಂಘಟಿಕರು ಗಣೇಶ ವಿಸರ್ಜನೆಗೆ ಕೋರಿದ ಮಾರ್ಗ ಸ್ಥಳಿಯ ಪೊಲೀಸರು ಪರಿಶೀಲಿಸಿ ತೊಂದರೆ ಉಂಟಾಗುವ ಸಂಭವ ಇಲ್ಲವೆಂದು ಖಚಿತವಾದ ಮೇಲೆ ಆ ಮಾರ್ಗದಲ್ಲಿ ವಿಸರ್ಜನೆಗೆ ಅನುಮತಿ ನೀಡಲಾಗುವುದು.
ಧ್ವನಿವರ್ಧಕ ಬಳಸುವವರು ಕಡ್ಡಾಯವಾಗಿ ಠಾಣೆ ಅನುಮತಿ ಹಾಗೂ ಹಣ ಸಂದಾಯ ಮಾಡಬೇಕು. ಮದ್ಯಪಾನ ಮಾಡಿ ಗಲಾಟೆ ಮಾಡಿಕೊಂಡರೇ ಕ್ರಮ ಕೈಗೊಳ್ಳಲಾಗುವುದು ಎಂದರು.
ಗ್ರೇಡ್- 2 ತಹಸೀಲ್ದಾರ್ ತುಳಸಿ, ಪಪಂ, ತಾಪಂ ಇಲಾಖೆ ಅಧಿಕಾರಿಗಳು ಇದ್ದರು.