ಐಐಎಚ್‌ಎಂಆರ್ ನಿರ್ದೇಶಕಿ ಡಾ. ಉಷಾ ಮಂಜುನಾಥ್ ಮಾತನಾಡಿ, ಔಷಧ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆಯಾಗುತ್ತಿದೆ. ಕಾಲಕ್ಕೆ ತಕ್ಕಂತೆ ತಂತ್ರಜ್ಞಾನ ಮತ್ತು ಕೌಶಲ ಅಳವಡಿಸಿಕೊಳ್ಳುವುದು ಮುಖ್ಯ. ಐಐಎಚ್‌ಎಂಆರ್‌ನಿಂದ ಾರ್ಮಾಸ್ಯೂಟಿಕಲ್ ಮ್ಯಾನೇಜ್‌ಮೆಂಟ್ ಕೋರ್ಸ್‌ಗಳನ್ನು ಜಾರಿಗೆ ತರಲಾಗುತ್ತಿದೆ. ಔಷಧ ಸಂಬಂಧಿಸಿದ ವಿಚಾರಗಳ ಬಗ್ಗೆ ವಿದ್ಯಾರ್ಥಿಗಳಿಗೆ ಹೇಳಿಕೊಡಲಾಗುವುದು. ಕೋರ್ಸ್ ಮುಗಿದ ತಕ್ಷಣ ಪ್ರಮುಖ ಔಷಧ ಕಂಪನಿಗಳಿಗೆ ಉದ್ಯೋಗ ಸಿಗಲಿದೆ. ಎಐ ತಂತ್ರಜ್ಞಾನ ಆಧಾರಿತ ಹೆಲ್ತ್ ಪ್ರಾಜೆಕ್ಟ್‌ಗಳನ್ನು ರೂಪಿಸಲಾಗುತ್ತಿದೆ. ಈ ಕುರಿತು ಔಷಧ ಕಂಪನಿಗಳ ಜತೆ ಕೈಜೋಡಿಸಿದ್ದೇವೆ. ರಾಜ್ಯ ಮತ್ತು ಕೇಂದ್ರ ಸರ್ಕಾರದ ಸಹಯೋಗದಲ್ಲಿ ಹಲವು ಪ್ರಾಜೆಕ್ಟ್‌ಗಳಿಗೆ ಪಾಲುದಾರಿಕೆ ಹೊಂದಿದ್ದೇವೆ ಎಂದರು.