ಲಿಂಕ್ ಕೆನಾಲ್ಗೆ ತಡೆಯದಿದ್ದರೆ 50 ಕೋಟಿ ರೂ.: ಜಿಲ್ಲೆಯಲ್ಲಿ ಎತ್ತಿನಹೊಳೆ ಯೋಜನೆ ಚಾಲನೆಯಲ್ಲಿದೆ. ತಿಪಟೂರು, ಗುಬ್ಬಿ ತಾಲೂಕಿನಲ್ಲಿ ಕಾಮಗಾರಿ ಮಾಡಲು ತಲಾ 50 ಕೋಟಿ ರೂ. ನೀಡಲಾಗಿದೆ. ಆದರೆ ತುರುವೇಕೆರೆಗೆ ಕೇವಲ 30 ಕೋಟಿ ರೂ. ನೀಡಲಾಗಿದೆ. ಈ ಬಗ್ಗೆ ಉಪ ಮುಖ್ಯಮಂತ್ರಿಗಳನ್ನು ಕೇಳಿದರೆ, ಲಿಂಕ್ ಕೆನಾಲ್ಗೆ ತಡೆ ಒಡ್ಡದಿದ್ದರೆ 50 ಕೋಟಿ ರೂ. ಕೊಡ್ತೇನೆ ಎಂದು ಆಮಿಷ ಒಡ್ಡುತ್ತಾರೆ. ನಮಗೆ ಜಿಲ್ಲೆಯ ರೈತ ಹಿತ ಮುಖ್ಯವೇ ಹೊರೆತು ಅವರು ನೀಡುವ ಆಮಿಷವಲ್ಲ ಎಂದು ಎಂ.ಟಿ.ಕೃಷ್ಣಪ್ಪ ಕಿಡಿಕಾರಿದರು.