ಒತ್ತಾಯ: -ವಿಜಯಪುರ ಪಟ್ಟಣದಿಂದ ಹೊಸಕೋಟೆ, ವೈಟ್ ಫೀಲ್ಡ್, ವರ್ತೂರು ಕೋಡಿ, ಮಾರತಳ್ಳಿ ಮುಖಾಂತರ ಮಾರ್ಕೇಟ್ಗೆ ಈ ಹಿಂದೆ ಹಲವು ಸಿವಿಲ್ ಬಸ್ಗಳು ಓಡಾಡುತ್ತಿದ್ದು, ನಂತರದ ದಿನಗಳಲ್ಲಿ ಆ ಬಸ್ಗಳ ಓಡಾಟ ನಿಂತು ಹೋಗಿದೆ. ಈಗಲೂ ಆ ಭಾಗಕ್ಕೆ ಓಡಾಡಬೇಕೆಂದರೆ ಹೊಸಕೋಟೆಗೆ ಹೋಗಿ, ಅಲ್ಲಿಂದ ಬೇರೆ ಬಸ್ ಹಿಡಿಯಬೇಕಾಗಿದೆ. ಹೊಸಕೋಟೆಯಲ್ಲಿ ಬಸ್ ನಿಲ್ದಾಣದಿಂದ ಹೊಸ ಬಸ್ ನಿಲ್ದಾಣಕ್ಕೆ ತೆರಳಲು ಹಾಗೂ ವಾಪಸ್ ಬರಲು ಸಹ ಯಾವುದೇ ವ್ಯವಸ್ಥೆಗಳಿಲ್ಲದೆ ಆ ಭಾಗದಲ್ಲಿ ಓಡಾಡುವವರು ತೊಂದರೆಪಡುತ್ತಿರುವುದರಿಂದ ವಿಜಯಪುರದಿಂದ- ಹೊಸಕೋಟೆ, ವೈಟ್ ಫೀಲ್ಡ್, ವರ್ತೂರು ಕೋಡಿ, ಮಾರತಹಳ್ಳಿ, ಕೃಷ್ಣರಾಜೇಂದ್ರ ಮಾರುಕಟ್ಟೆಗೆ, ಬಸ್ ವ್ಯವಸ್ಥೆ ಕಲ್ಪಿಸಬೇಕೆಂದು ಸಾರ್ವಜನಿಕಕು ಒತ್ತಾಯಸಿದ್ದಾರೆ.