ಹಟ್ಟಿಚಿನ್ನದಗಣಿ: ಗೆಜ್ಜಲಗಟ್ಟಾ ಗ್ರಾಪಂ ವ್ಯಾಪ್ತಿಯಲ್ಲಿ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ (ಎಸ್‌ಐಆರ್) ಅಭಿಯಾನ ಅಂಗವಾಗಿ ಮತದಾರರ ಮಾಹಿತಿ ಮತ್ತು ಜಾಗೃತಿ ಜಾಥಾ ಶುಕ್ರವಾರ ಹಮ್ಮಿಕೊಳ್ಳಲಾಗಿತ್ತು.
ಜಿಲ್ಲಾಡಳಿತ, ಜಿಪಂ, ಜಿಲ್ಲಾ ಮತ್ತು ತಾಲೂಕು ಸ್ವೀಪ್ ಸಮಿತಿ, ಲಿಂಗಸುಗೂರು ತಾಲೂಕು ಆಡಳಿತದಿಂದ ಹಮ್ಮಿಕೊಂಡಿದ್ದ ಜಾಥಾದಲ್ಲಿ ಸಾರ್ವಜನಿಕರಿಗೆ ಮತದಾನದ ಮಹತ್ವ ಮತ್ತು ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ, ತಿದ್ದುಪಡಿ ಹಾಗೂ ಮಾಹಿತಿಯ ನವೀಕರಣದ ಕುರಿತು ಅರಿವು ಮೂಡಿಸಲಾಯಿತು.
ನಮ್ಮ ಮತ ನಮ್ಮ ಹಕ್ಕು, ಒಂದು ಮತ ದೇಶಕ್ಕೆ ಹಿತ ಸೇರಿದಂತೆ ವಿವಿಧ ಘೋಷಣೆಗಳೊಂದಿಗೆ ಗ್ರಾಮದಲ್ಲಿ ಜಾಥಾ ನಡೆಸಿ ಸಾರ್ವಜನಿಕರಲ್ಲಿ ಮತದಾನದ ಬಗ್ಗೆ ಜಾಗೃತಿ ಮೂಡಿಸಲಾಯಿತು.
ಅರ್ಹ ಯುವಕ-ಯುವತಿಯರು ಮತದಾರರ ಪಟ್ಟಿಗೆ ತಮ್ಮ ಹೆಸರನ್ನು ಸೇರ್ಪಡೆಗೊಳಿಸಿಕೊಳ್ಳಬೇಕು. ಪಟ್ಟಿಯಲ್ಲಿರುವ ಲೋಪದೋಷಗಳನ್ನು ತಿದ್ದುಪಡಿ ಮಾಡಿಸಿಕೊಳ್ಳುವಂತೆ ಜನರಲ್ಲಿ ಅಧಿಕಾರಿಗಳು ಮನವಿ ಮಾಡಿದರು.
ಪಿಡಿಒ ಆರ್.ಸಿ.ಗೀತಾ, ಬಿಲ್ ಕಲೆಕ್ಟರ್ ವೆಂಕಪ್ಪ ಚಿಕ್ಕನಗನೂರು, ಸಿಬ್ಬಂದಿ ಮಂಜುಳಾ, ಗುಂಡಮ್ಮ ನಾಯಕ, ಬಿಎಲ್‌ಒ ಸುವರ್ಣ, ವೆಂಕಟೇಶ, ಬಿಎಫ್‌ಟಿ ಮಂಜುನಾಥ ದಾರಿಮನಿ, ಮೌನೇಸಾಬ್ ಕಾಲೇಘರ್, ಲಚಮಪ್ಪ, ಬಸವರಾಜ ನಾಯಕ ಇತರರಿದ್ದರು.