ತಾಲೂಕು ಬಯಲು ಸೀಮೆ, ಅರೆ ಮಲೆನಾಡು, ಮಲೆನಾಡು ಪ್ರದೇಶ ಹೊಂದಿದೆ. ಈ ಬಗ್ಗೆ ಸಮಗ್ರ ಮಾಹಿತಿ ಪಡೆದು ಪಟ್ಟಿಮಾಡಿ ಮುಖ್ಯಮಂತ್ರಿ, ಕಂದಾಯ ಸಚಿವರನ್ನು ಭೇಟಿ ಮಾಡುತ್ತೇನೆ. ಅಲ್ಲದೆ ತಾಲೂಕಿನ ಕೆರೆಗಳಿಗೆ ನೀರು ಹರಿಸಬೇಕಾದರೆ ಏತ ನೀರಾವರಿ, ರಣಘಟ್ಟ, ಹೆಬ್ಬಾಳು ಏತ ನೀರಾವರಿ ಯೋಜನೆಗಳ ಕಾಮಗಾರಿಗಳನ್ನು ತ್ವರಿತವಾಗಿ ಮಾಡಿಸಿ ಕೆರೆಗೆ ನೀರು ಹರಿಸಿದರೆ ಅಂತರ್ಜಲ ವೃದ್ಧಿಯಾಗುತ್ತದೆ. ತಾಲೂಕಿನಲ್ಲಿ 700 ಕ್ಕೂ ಅಧಿಕ ಕೊಳವೆ ಬಾವಿಗಳು ಸ್ಥಗಿತವಾಗಿವೆ. ಶೇ. 80 ಬಾವಿಗಳು ಬತ್ತಿವೆ. ಇಷ್ಟೆಲ್ಲ ಮಾಹಿತಿ ಇರುವ ದಾಖಲೆಯನ್ನು ಸಂಬಂಧಿಸಿದ ಸಚಿವರಿಗೆ ನೀಡಿದರೆ ಬರ ಪೀಡಿತ ಪಟ್ಟಿಗೆ ಸೇರಿಸಲು ಸಾಧ್ಯ ಎಂದರು.