ಹುಣಶ್ಯಾಳ ಪಿಬಿ ಗ್ರಾಮದ ಸದ್ಗುರು ಸಿದ್ಧಾರೂಢ ಸಭಾಭವನದಲ್ಲಿ ಹಮ್ಮಿಕೊಂಡ ಕಾಂಗ್ರೆಸ್ ಪಕ್ಷದಿಂದ ನಡೆದ ಬಿಎಲ್‌ಎ-2 ವಿಶೇಷ ಸಮಗ್ರ ಪರಿಷ್ಕರಣೆಯ ಕಾರ್ಯಗಾರವನ್ನು ಗಣ್ಯರು ಉದ್ಘಾಟಿಸಿದರು. ಮಾಜಿ ಶಾಸಕ ರಾಜು ಆಲಗೂರ, ಕಾಂತ ನಾಯಕ, ಡಾ. ಪ್ರಭುಗೌಡ ಲಿಂಗದಳ್ಳಿ, ಆನಂದ ದೊಡಮನಿ, ಶಿವಾನಂದ ದೇಸಾಯಿ, ಗೌರಮ್ಮ ಮುತ್ತತ್ತಿ ಇತರರಿದ್ದರು.
ಹೂವಿನಹಿಪ್ಪರಗಿ : ಮುಂಬರುವ ಎಲ್ಲಾ ಚುನಾವಣೆಗಳನ್ನು ದೃಷ್ಟಿಯಲ್ಲಿ ಇಟ್ಟಿಕೊಂಡು ಕರ್ನಾಟಕ ಚುನಾವಣೆ ಆಯೋಗ ಹಮ್ಮಿಕೊಂಡ ವಿಶೇಷ ಮತದಾರರ ಪಟ್ಟಿಯ ಪರಿಷ್ಕರಣೆಯನ್ನು ಮಾಡಿ, ಒಂದೆ ಕಡೆ ಮತದಾನದ ಹಕ್ಕನ್ನು ಚಲಾವಣೆ ಮಾಡುವ ಉದ್ದೇಶದಿಂದ (ಎಸ್‌ಐಆರ್) ಮತ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯ ಉದ್ದೇಶವಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ ಹೇಳಿದರು.
ಹುಣಶ್ಯಾಳ ಪಿಬಿ ಗ್ರಾಮದ ಸದ್ಗುರು ಸಿದ್ಧಾರೂಢ ಸಭಾಭವನದಲ್ಲಿ ನಡೆದ ದೇವರಹಿಪ್ಪರಗಿ ಕ್ಷೇತ್ರದ ಕಾಂಗ್ರೆಸ್ ಪಕ್ಷದ ವತಿಯಿಂದ ಹಮ್ಮಿಕೊಂಡ ವಿಶೇಷ ಸಮಗ್ರ ಪರಿಸ್ಕರಣೆ (ಎಸ್‌ಐಆರ್) ಕಾರ್ಯಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮತದಾರರ ಪಟ್ಟಿಯಿಂದ ಬಿಟ್ಟು ಹೋದ ಹೆಸರು, ಬೇರೆ ಊರಿನಲ್ಲಿ ಇರುವ ವಾಸ್ತವ್ಯ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಹಾಗೂ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಅವರು ಎಲ್ಲಾ ಕಾಂಗ್ರೆಸ್ ಕಾರ್ಯಕರ್ತರಿಗೆ ಒಂದು ಮಹತ್ವದ ಜವಾಬ್ದಾರಿಯನ್ನು ನೀಡಿದ್ದಾರೆ ಎಂದರು.
ಎಸ್‌ಐಆರ್ ಉಸ್ತುವಾರಿ ಸೋಮಣ್ಣ ಬೇವಿನಮರದ ಕಾಂತಾ ನಾಯಕ ಮಾತನಾಡಿ, ಸುಭದ್ರ ಭಾರತ ಕಟ್ಟಲು ನಾಳೆಯಿಂದ ನಿಮ್ಮ ಬಿಎಲ್‌ಒ ಗಳ ಜತೆಗೆ ಬಿಎಲ್‌ಎ-2 ಅಂತಾ ನಮ್ಮ ಪಕ್ಷದ ಕಾರ್ಯಕರ್ತರು ಪ್ರತಿ ಮನೆ ಮನೆಗಳಿಗೆ ಭೇಟಿ ನೀಡಿ ಸಾರ್ವಜನಿಕರಿಗೆ ಸರಿಯಾದ ಮಾಹಿತಿ ನೀಡಿ ಮತದಾರರ ಪಟ್ಟಿಯಲ್ಲಿ ಇರುವ ಹಾಗೇ ನಿಗಧಿತ ನಮೂನೆ ಭರ್ತಿ ಮಾಡಿ ಇನ್ನೊಮ್ಮೆ ದಾಖಲಾತಿಗಳನ್ನು ನೀಡಿ ಸೇರ್ಪಡೆ ಮಾಡಿ ನಿಧನವಾದವರು, ಮನೆ ಖಾಲಿ ಮಾಡಿದವರು ಹೀಗೆ ವಿವಿಧ ಕಾರಣಗಳನ್ನು ನೀಡಿ ಮತದಾರರ ಪಟ್ಟಿಯಿಂದ ಕೈಬಿಟ್ಟ ಮತದಾರರ ಹೆಸರುಗಳನ್ನು ಒಂದೇ ಕಡೆ ಉಳಿಸಿ ಗುರುತಿನ ಚೀಟಿಯಲ್ಲಿ ಏನಾದರೂ ದೋಷಗಳು ಇದ್ದಲ್ಲಿ ತಿದ್ದುಪಡಿ ಮಾಡಿಕೊಳ್ಳಲು ಅವಕಾಶವಿದೆ. ಜೂ 30 ರಿಂದ ಜು 29ರವರೆಗೆ ಈ ವಿಶೇಷ ಕಾರ್ಯಗಾರ ನಡೆಯಲಿದೆ. ನಿಮ್ಮ ಮತಗಟ್ಟೆಯ ಮತಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯೇ ಇಲ್ಲವೇ ಕೈಬಿಟ್ಟಿದೆ ಎಂದು ಎಚ್ಚರದಿಂದ ಈ ಕಾರ್ಯ ಮಾಡಬೇಕು ಎಂದು ಹೇಳಿದರು.
ಜಿಲ್ಲಾ ಅಧ್ಯಕ್ಷ ಮಲ್ಲಿಕಾರ್ಜುನ ಲೋಣಿ ಮಾತನಾಡಿ, ಈ ಕಾರ್ಯಗಾರ ಬಹಳ ಮಹತ್ವದ್ದಾಗಿದೆ. ನಮ್ಮ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ. ಆ ನಿಟ್ಟಿನಲ್ಲಿ ನಾವು ಈಗಾಗಲೇ ಗುರುತಿಸಿ ಚುನಾವಣೆ ಆಯೋಗದ ಬಿಎಲ್‌ಎ-2 ಅವರುಗಳ ಹೆಸರುಗಳನ್ನು ನಿಮ್ಮ ನಾಯಕರಿಗೆ ಕೊಟ್ಟಿದ್ದೇವೆ ಯಾರಿಗೆ ಯಾವ ಕೆಲಸವನ್ನು ವಹಿಸಿದ್ದೇವೆ ಅವರು ಒಂದು ತಿಂಗಳ ಕಾಲ ಹಗಲು ರಾತ್ರಿ ಎನ್ನದೇ ಈ ದೇಶ ಕಟ್ಟುವ ಕೆಲಸ ಮಾಡಿದರೆ ಮುಂದೆ ಪಕ್ಷ ಅವರನ್ನು ಗುರುತಿಸಿ ಉನ್ನತ ಸ್ಥಾನಮಾನ ನೀಡುತ್ತದೆ. ಆ ನಿಟ್ಟಿನಲ್ಲಿ ನಿಮಗೆ ಕೊಟ್ಟ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿ ಸುಂದರ ಸಮಾಜ ಕಟ್ಟಲು ನಮ್ಮೊಂದಿಗೆ ಕೈಜೋಡಿಸಬೇಕು ಎಂದು ಕಾರ್ಯಕರ್ತರಲ್ಲಿ ಮನವಿ ಮಾಡಿದರು.
ಮಹಿಳಾ ಜಿಲ್ಲಾ ಅಧ್ಯಕ್ಷ ರಮೀಜಾ ನದಾಫ್, ಬಾಳನಗೌಡ ಪಾಟೀಲ, ಭಶಿರಶೇಠ ಭೇಪಾರಿ, ಆಶೋಕಗೌಡ ಪಾಟೀಲ, ಪಿ.ಜಿ. ಗೋಠೇದ, ಸಾಹೇಬಗೌಡ ಬಿರಾದಾರ, ಸುರೇಶಬಾಬು ಬಿರಾದಾರ, ಟಪಾಲ ಇಂಜಿನಿಯರ್, ಸಂಗಮೇಶ ಛಾಯಾಗೋಳ, ರಮೇಶ ನಾಯಕೋಡಿ, ನಾಗಪ್ಪ ಅರಳಗುಂಡಿಗಿ, ನಜೀರ ಬೀಳಗಿ ಇತರರಿದ್ದರು.