ಜನಗಣತಿಯಲ್ಲಿ ಸಕ್ರಿಯವಾಗಿ ಭಾಗವಹಿಸಿ census

ಬಂಗಾರಪೇಟೆ census ತಾಲೂಕಿನ ಶಾಸಕರ ಕಚೇರಿಯಲ್ಲಿ ಜನಗಣತಿ ಕಾರ್ಯಕ್ರಮಕ್ಕೆ ಶಾಸಕ ಎಸ್​.ಎನ್​. ನಾರಾಯಣಸ್ವಾಮಿ ಚಾಲನೆ ನೀಡಿದರು. ತಹಸೀಲ್ದಾರ್​ ಸುಜಾತಾ, ಇಒ ರವಿಕುಮಾರ್​, ನಗರಸಭೆ ಪೌರಾಯುಕ್ತ ಸತ್ಯನಾರಾಯಣ, ಇನ್​ಸ್ಪೆಕ್ಟರ್​ ರವಿಕುಮಾರ್​ ಇದ್ದರು.

Published on
ಬಂಗಾರಪೇಟೆ : ಜನಗಣತಿ ಕಾರ್ಯ ಸಮರ್ಪಕವಾಗಿ census ಮತ್ತು ಸಮಯೋಚಿತವಾಗಿ ಕೈಗೊಳ್ಳುವ ನಿಟ್ಟಿನಲ್ಲಿ ತಾಲೂಕು ಆಡಳಿತ ಅಗತ್ಯ ಕ್ರಮ ಕೈಗೊಂಡಿದೆ ಎಂದು ಶಾಸಕ ಎಸ್​.ಎನ್​. ನಾರಾಯಣಸ್ವಾಮಿ ಹೇಳಿದರು.
ನಗರದ ಶಾಸಕರ ಕಚೇರಿಯಲ್ಲಿ ಜನಗಣತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಏ.15ರವರೆಗೆ ನಾಗರಿಕರು ಸ್ವಯಂ ಘೋಷಿತರಾಗಿ ತಮ್ಮ ಮೊಬೈಲ್​ ಮೂಲಕ ಮಾಹಿತಿ ದೃಢೀಕರಿಸಬಹುದು. ಬಳಿಕ 15 ದಿನಗಳ ನಂತರ ಅಧಿಕಾರಿಗಳು ಮನೆಮನೆಗೆ ಭೇಟಿ ನೀಡಿ ಸರ್ವೆ ನಡೆಸಲಿದ್ದಾರೆ ಎಂದು ತಿಳಿಸಿದರು.
ಅಧಿಕಾರಿಗಳು ಮನೆಗಳಿಗೆ ಭೇಟಿ ನೀಡಿದಾಗ ತಮ್ಮ ವಿಳಾಸ, ಜಾತಿ, ವೃತ್ತಿ ಸೇರಿ ಕೇಳಲಾಗುವ ಎಲ್ಲ ಮಾಹಿತಿ ನೀಡುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದರು.
ತಾಲೂಕಿನ ಪ್ರತಿಯೊಬ್ಬರೂ ಜನಗಣತಿಯಲ್ಲಿ ಸಕ್ರಿಯವಾಗಿ ಭಾಗವಹಿಸಿ ಸರಿಯಾದ ಮಾಹಿತಿ ನೀಡಬೇಕು. ಜನಗಣತಿ ಮಾಹಿತಿ ಉದ್ಯೋಗ, ವ್ಯಾಪಾರ ಹಾಗೂ ಇತರೆ ವೃತ್ತಿ ಕ್ಷೇತ್ರಗಳ ಯೋಜನೆಗೂ ಬಹುಮುಖ್ಯವಾಗಿದ್ದು, ಯಾವುದೇ ಕಾರಣಕ್ಕೂ ಮಾಹಿತಿ ನೀಡಲು ಹಿಂಜರಿಯಬಾರದು ಎಂದರು.
ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ರವಿ, ಯುವರಾಜ್​, ಪುರಸಭೆ ಸಿಬ್ಬಂದಿ ಸಂತೋಷ್​ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net