ಬೆದರಿಸಿ ದೌರ್ಜನ್ಯ ಎಸಗುವ ವ್ಯಾಪಾರಿಗಳ ವಿರುದ್ಧ ಕ್ರಮವಾಗಲಿ

ಗೌರಿಬಿದನೂರು ತಾಲೂಕು ಕಚೇರಿಯಲ್ಲಿ ತಹಸೀಲ್ದಾರ್​ ಅರವಿಂದ್​ಗೆ ರಾಜ್ಯ ರೈತ ಸಂ ಹಾಗೂ ಕುರಿ ಸಾಕಾಣಿಕೆದಾರ ರೈತರು ಮನವಿ ಸಲ್ಲಿಸಿದರು. ಸಂದ ತಾಲೂಕು ಸಂಚಾಲಕ ಎನ್​.ಆರ್​.ರವಿಚಂದ್ರರೆಡ್ಡಿ, ಶಾನ್​ ವಾಜ್​ ಬಾಷಾ, ಬಾಬುರೆಡ್ಡಿ, ಗಂಗಾಧರಪ್ಪ, ಭರತ್​, ಹೂನ್ನೂರು ಅಶ್ವತ್ಥಪ್ಪ, ಸಂಜೀವರೆಡ್ಡಿ, ಕೃಷ್ಣರೆಡ್ಡಿ, ರಾಮಾಂಜಿನಪ್ಪ, ರಾಮರೆಡ್ಡಿ, ದಾದಪೀರ್​, ಲೋಕೇಶ್​ ಗೌಡ, ಬಾಬು ಇದ್ದರು.

Published on
ಗೌರಿಬಿದನೂರು :ಹೊರ ರಾಜ್ಯದ ಕುರಿ ವ್ಯಾಪಾರಿಗಳ ಮೇಲೆ ದಬ್ಬಾಳಿಕೆ, ದೌರ್ಜನ್ಯ ನಡೆಸಿ ಬೆದರಿಸುವ ಸ್ಥಳಿಯ ವ್ಯಾಪಾರಸ್ಥರ ವಿರುದ್ಧ ಕ್ರಮ ಜರುಗಿಸಬೇಕೆಂದು ರೈತ ಸಂ ಹಾಗೂ ಕುರಿ ಸಾಕಣೆದಾರರು ತಹಸೀಲ್ದಾರ್​ ಹಾಗೂ ಪೊಲೀಸರಿಗೆ ಮನವಿ ಸಲ್ಲಿಸಿದ್ದಾರೆ.
ಹೊರ ರಾಜ್ಯದ ವ್ಯಾಪಾರಸ್ಥರು ಸ್ಥಳಿಯ ಮಾರುಕಟ್ಟೆಯಲ್ಲಿ ಖರೀದಿಸಲು ಅರ್ಹರಲ್ಲವೆಂದು ಈಶ್ವರ್​ ರೆಡ್ಡಿ, ಮುತ್ತಪ್ಪ, ಅಶೋಕ, ಜಾನಿರೆಡ್ಡಿ, ಆದರ್ಶ, ಮೋಹಿತ್​, ಬಾಷಾ ಇನ್ನಿತರರು ದೌರ್ಜನ್ಯ ನಡೆಸಿದ್ದಾರೆ.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇಂತಹ ಅಹಿತಕರ ಟನೆಗಳು ನಡೆಯುವುದು ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತರಲಿದೆ. ಈ ಪ್ರಕರಣಗಳು ಮರುಕಳಿಸಿದರೆ ಹೊರಗಿನ ವ್ಯಾಪಾರಸ್ಥರು ಇಲ್ಲಿಗೆ ಬರಲು ಹಿಂದೇಟು ಹಾಕುತ್ತಾರೆ.
ಹಾಗಾಗಿ ಸ್ಥಳಿಯ ಕುರಿ ಸಾಕಣೆ ಮಾಡುವ ರೈತರಿಗೆ ನಷ್ಟ ಉಂಟಾಗುತ್ತಿದೆ. ತಪ್ಪಿತಸ್ಥರ ವಿರುದ್ಧ 2 ದಿನಗಳ ಒಳಗೆ ಕ್ರಮ ಜರುಗಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net