ದೊಡ್ಡಬಳ್ಳಾಪುರ ಅಭಿವೃದ್ಧಿಗೆ ಕ್ರಮ / DODABALLAPUR

ದೊಡ್ಡಬಳ್ಳಾಪುರದ ನಗರಸಭೆ ಕಾರ್ಯಾಲಯದಲ್ಲಿ ನೂತನ ಅಧ್ಯೆ ಪ್ರಭಾ ನಾಗರಾಜ್​ ಅವರನ್ನು ಬೆಂಬಲಿಗರು ಸನ್ಮಾನಿಸಿದರು. ನಗರಸಭೆ ಉಪಾಧ್ಯಕ್ಷ ಬಂತಿ ವೆಂಕಟೇಶ್​, ಬಿಜೆಪಿ ನಗರಾಧ್ಯಕ್ಷ ಮುದ್ದಣ್ಣ, ಜೆಡಿಎಸ್​ ತಾಲೂಕು ಅಧ್ಯಕ್ಷ ಹರೀಶ್​ ಗೌಡ, ನಗರಸಭಾ ಸದಸ್ಯರಾದ ಪದ್ಮನಾಭ, ಶಿವು ಮುಖಂಡರಾದ ಕೆಂಪರಾಜು, ನಾಗರಾಜ್​, ಪ್ರವಿಣ್​ ಇದ್ದರು.

Published on
ದೊಡ್ಡಬಳ್ಳಾಪುರ : ನಗರದಲ್ಲಿ ರಸ್ತೆ, ಚರಂಡಿ ಮೂಲಸೌಕರ್ಯ ಸೇರಿದಂತೆ ವಿವಿಧ ಹಂತದಲ್ಲಿ ಅಭಿವೃದ್ಧಿಗೆ ಒತ್ತು ನೀಡಲಾಗುತ್ತಿದೆ ಎಂದು ನಗರಸಭೆ ನೂತನ ಅಧ್ಯೆ ಪ್ರಭಾನಾಗರಾಜು ಹೇಳಿದರು.
ನಗರಸಭೆ ಕಾರ್ಯಾಲಯದಲ್ಲಿ ಪದಗ್ರಹಣ ಸ್ವೀಕರಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಮಳೆ ಕೊರತೆ ಕಾಡುತ್ತಿರುವುದರಿಂದ ನಗರಸಭೆಯ ವ್ಯಾಪ್ತಿಯಲ್ಲಿ ನೀರಿನ ಸಮಸ್ಯೆ ತಲೆದೂರದಂತೆ ಎಚ್ಚರಿಕೆ ವಹಿಸಲಾಗುತ್ತದೆ. ಇದಕ್ಕಾಗಿ ಜನರ ಸಹಕಾರ ಅಗತ್ಯವಾಗಿದ್ದು, ನೀರಿನ ಮಿತ ಬಳಕೆ ಜತೆಗೆ ಎಲ್ಲೂ ನೀರು ಪೋಲಾಗದಂತೆ ನೋಡಿಕೊಳ್ಳಬೇಕು. ಇದರಿಂದ ನೀರಿನ ಸಮಸ್ಯೆ ಒಂದಿಷ್ಟು ಮಟ್ಟಿಗೆ ಕಡಿಮೆಯಾಗಲಿದೆ. ಕುಡಿಯುವ ನೀರಿಗೆ ಎಲ್ಲೂ ಅಭಾವ ಉಂಟಾಗದಂತೆ ಕ್ರಮವಹಿಸಲಾಗುತ್ತದ ಎಂದರು.
ಶಾಸಕರೊಂದಿಗೆ ಚರ್ಚಿಸಿ ಕ್ರಮ : ನಗರದಲ್ಲಿ ಫುಟ್​ಪಾತ್​ ತೆರವು ವಿಚಾರವಾಗಿ ಮಾತನಾಡಿದ ನೂತನ ಅಧ್ಯಕ್ಷರು, ಫುಟ್​ಪಾತ್​ ತೆರವು ವಿಚಾರದಲ್ಲಿ ಶಾಸಕ ಧೀರಜ್​ ಮುನಿರಾಜು ಅವರನ್ನು ನಗರಸಭೆ ಸದಸ್ಯರು, ಪೌರಾಯುಕ್ತರೊಂದಿಗೆ ಭೇಟಿ ಮಾಡಿ ಚರ್ಚಿಸಿ, ಕ್ರಮತೆಗೆದುಕೊಳ್ಳಲಾಗುವುದು ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net