ಬಿಎಂ ಕಾವಲ್ 1, 2 ಮತ್ತು 3ನೇ ಹಂತದಲ್ಲಿ 290 ಎಕರೆ ಭೂಮಿ ಸ್ವಾಧೀನಪಡಿಸಿಕೊಳ್ಳಲಾಗುತ್ತಿದೆ. ಅಂದರೆ ಗಂಗಸಂದ್ರ, ಚಿನ್ನಕುರ್ಚಿ, ಉತ್ತರಿ ಗ್ರಾಮಗಳ ಗಡಿ ಭಾಗದವರೆಗೂ ವಿಸ್ತರಿಸಿಕೊಂಡಿದೆ. ಉದ್ದೇಶಿತ 500 ಎಕರೆ ಬಡಾವಣೆ ನಿರ್ಮಾಣಕ್ಕೆ ಬಾಕಿ ಇರುವ 200 ಎಕರೆ ಜಮೀನನ್ನು 2ನೇ ಹಂತದಲ್ಲಿ ಗಡಿಭಾಗದ ಗ್ರಾಮಗಳಿಂದ ಸ್ವಾಧೀನಪಡಿಸಿಕೊಳ್ಳಲು ಕೆಎಚ್‌ಬಿ ಉದ್ದೇಶಿಸಿದೆ.