ರಾಯಲ್ಪಾಡು: ನಮಗೆ ಜೀವನದಲ್ಲಿ ಉತ್ತಮ ಭವಿಷ್ಯ ಅಥವಾ ಗೌರವಯುತವಾದ ಬಾಳ್ವೆ ನಡೆಸಬೇಕಾದರೆ ಕಾಲವನ್ನು ವ್ಯರ್ಥ ಮಾಡದೇ ಜ್ಞಾನ ಸಂಪಾದನೆ ಮಾಡಬೇಕು ಎಂದು ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ಸಿಮೆಂಟ್ ನಾರಾಯಣಸ್ವಾಮಿ ಹೇಳಿದರು.
ಗ್ರಾಮದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಸಾಯಿಸ್ವಾಮಿ ಸೇವಾ ೌಂಡೇಷನ್, ಅವನಾಗ್ ೌಂಡೇಷನ್ ಮತ್ತು ಶಿಕ್ಷಣ ಇಲಾಖೆ ಸಹಯೋಗದಲ್ಲಿ ಮೂಲ ಸೌಲಭ್ಯಗಳ ಕುರಿತು ಚರ್ಚಿಸಿ ಮಾತನಾಡಿದರು.
ಗಡಿಭಾಗದ ಸರ್ಕಾರಿ ಶಾಲಾ ಕಾಲೇಜುಗಳು ಎಲ್ಲ ರೀತಿಯ ಅಭಿವೃದ್ಧಿಯಾಗಬೇಕಾದರೆ ದಾನಿಗಳ ಸಹಕಾರ ಬಹುಮುಖ್ಯ. ನೂರು ವರ್ಷಗಳ ಮೇಲ್ಟ ಈ ಶಾಲೆಗೆ ಸುಣ್ಣಬಣ್ಣ ಬಲಿಯಲು ಮುಂದೆ ಬಂದಿರುವ ಸೇವಾರ್ಥಿಗಳಿಗೆ ನಮ್ಮ ಊರಿನ ಪರವಾಗಿ ಧನ್ಯವಾದಗಳನ್ನ ಹೇಳಲು ಬಯಸುತ್ತೇನೆ ಎಂದರು.
ಮುಖ್ಯಶಿಕ್ಷಕ ಟಿ.ಆಂಜಪ್ಪ ಮಾತನಾಡಿ, ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳು ಉಳಿಯಬೇಕಾದರೆ ಶಿಕ್ಷಣ ಪ್ರೇಮಿಗಳ ಮುಂದೆ ಬಂದು ಬಡಮಕ್ಕಳನ್ನು ಶೈಕ್ಷಣಿಕ ಪ್ರಗತಿಯನ್ನು ಹೊಂದಲು ತಮ್ಮಿಂದಾಗುವ ಆರ್ಥಿಕ ಸಹಾಯ ಹಾಗೂ ಶಿಕ್ಷಣಕ್ಕೆ ಬೇಕಾದ ಕಲಿಕಾ ಸಾಮಾಗ್ರಿಗಳನ್ನು, ಅದೇ ರೀತಿಯಾಗಿ ಶಾಲೆಗೆ ಬೇಕಾದ ಮೂಲ ಸೌಲಭ್ಯಗಳನ್ನು ಕೊಡುಗೆ ನೀಡುವುದರ ಮೂಲಕ ಪ್ರೋತ್ಸಾಹಿಸಬೇಕು ಎಂದರು.
ಸಿಆರ್ಪಿ ರಾಘವರೆಡ್ಡಿ, ಶಿಕ್ಷಕರಾದ ಪಿ.ಸಿ.ನಾರಾಯಣಸ್ವಾಮಿ, ರಾಜಶೇಖರ್, ನಿವೃತ್ತ ಮುಖ್ಯ ಶಿಕ್ಷಕಿ ಲಕ್ಷಿ$್ಮನಸಮ್ಮ, ಗ್ರಾಮದ ಮುಖಂಡ ರಮೇಶಚಾರಿ ಇದ್ದರು.