ರಾಜಸ್ಥಾನದ ರಾಜ್ಯಪಾಲ ಹಾಗೂ ಎಂಜಿಎಸ್‌ಯು (ಎಖಖಿ) ಕುಲಾಧಿಪತಿಗಳಾದ ಹರಿಭಾವು ಬಾಗ್ಡೆ, ರಾಜಸ್ಥಾನದ ಉಪಮುಖ್ಯಮಂತ್ರಿ ಹಾಗೂ ಉನ್ನತ ಶಿಕ್ಷಣ ಸಚಿವರಾದ ಡಾ. ಪ್ರೇಮ್ ಚಂದ್ ಬೈರ್ವಾ, ಎಂಜಿಎಸ್‌ಯು ಕುಲಪತಿ ಪ್ರೊ. ಮನೋಜ್ ದೀಕ್ಷಿತ್ ಮತ್ತು ಕುಲಸಚಿವ ಪ್ರೊ. ಯಶ್‌ಪಾಲ್ ಅಹುಜಾ ಅವರು ಉಪಸ್ಥಿತರಿದ್ದ ಸಮಾರಂಭದಲ್ಲಿ ಗೌರವ ಡಾಕ್ಟರೇಟ್ ಅನ್ನು ಪ್ರದಾನ ಮಾಡಲಾಯಿತು. ಈ ಸಂದರ್ಭದಲ್ಲಿ ರಾಜಸ್ಥಾನದ ಹಲವು ಸಚಿವರು, ಶಾಸಕರು ಮತ್ತು ಗಣ್ಯರು ಉಪಸ್ಥಿತರಿದ್ದರು.ಇದೇ ವೇಳೆ ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷರಾದ ವಿಜಯಾ ಕಿಶೋರ್ ರಹತ್ಕರ್ ಅವರಿಗೂ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಯಿತು.