ಸಂಬಳ ಕೊಡದಿರುವುದಕ್ಕೆ ಕೃತ್ಯ? : ಜಿಗಣಿಗೆ ಬಂದು ಬಾಡಿಗೆ ಮನೆಯಲ್ಲಿ ವಾಸವಿದ್ದ ಅಕ್ಷತಾ ಹಾಗೂ ನಾನಾ ಸಾಹೇಬ್ ಇಬ್ಬರೂ ಖಾಸಗಿ ಕಂಪನಿಯಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದರು. ತಲಾ ಹನ್ನೆರಡು ಸಾವಿರ ಸಂಬಳ ಬರುತ್ತಿತ್ತು. ನಾಲ್ಕೈದು ಸಾವಿರ ರೂ. ಮಾತ್ರ ಖರ್ಚಿಗೆ ಇಟ್ಟುಕೊಂಡು ಅಕ್ಷತಾಳ ಸಂಬಂಳವನ್ನೂ ನಾನಾ ಸಾಹೇಬ್ ತನ್ನ ಪಾಲಕರಿಗೆ ಕಳುಹಿಸುತ್ತಿದ್ದ. ಇದರಿಂದಾಗಿ ತನ್ನ ಆಸೆ, ಅವಶ್ಯಕತೆಗಳು ಈಡೇರದೆ, ಕನಸುಗಳು ಸಾಕಾರಗೊಳ್ಳದೆ ಅಕ್ಷತಾ ಕುಗ್ಗಿದ್ದಳು. ಹೆತ್ತ ಮಕ್ಕಳನ್ನು ಬಿಟ್ಟು ಬಂದಿದ್ದು ತಪ್ಪು ಎಂದು ಆಗಲೇ ಅಕ್ಷತಾಗೆ ಅರಿವಾಗಿತ್ತು. ಇತ್ತೀಚೆಗೆ ನಾನಾ ಸಾಹೇಬ್ನಿಗೆ ಹಣ ಕೊಡಲು ಹಿಂದೆಟು ಹಾಕುತ್ತಿದ್ದಳು. ಇದೇ ವಿಚಾರಕ್ಕೆ ಇಬ್ಬರ ನಡುವೆ ಜಗಳವಾಗಿದ್ದು, ಜಗಳ ವಿಕೋಪಕ್ಕೆ ಹೋಗಿ ನಾನಾ ಸಾಹೇಬ್ ಹಲ್ಲೆ ಮಾಡಿದ್ದ. ನೆಲಕ್ಕೆ ಬಿದ್ದ ಅಕ್ಷತಾಳ ಕುತ್ತಿಯನ್ನು ವೇಲ್ನಿಂದ ಬಿಗಿದು ಕೊಲೆ ಮಾಡಿ, ದೇವರ ಹುಂಡಿ ಹಣದೊಂದಿಗೆ ದಾಖಲೆಗಳು ಹಾಗೂ ಬಟ್ಟೆಗಳನ್ನು ತೆಗೆದುಕೊಂಡು ಪರಾರಿ ಆಗಿದ್ದ ಎಂಬುದು ಪ್ರಾಥಮಿಕ ತನಿಖೆಯಲ್ಲಿ ತಿಳಿದಿದೆ.