ಪ್ರಕರಣ ಸಂಬಂಧ ನಾಲ್ಕು ತಿಂಗಳ ಹಿಂದೆ ಸುಹೇಲ್ ಅಹ್ಮದ್ ಎಂಬಾತನನ್ನು ಬಂಧಿಸಲಾಗಿತ್ತು. ಈತ ಜನ್‌ಜೀರ್‌ನಿಂದ ಕಂಟ್ರಿಮೆಡ್ ಪಿಸ್ತೂಲ್ ಖರೀದಿಸಿ ನಗರದಲ್ಲಿ ಕೆಲವರಿ ಮಾರಾಟ ಮಾಡಿದ್ದ. ಈತನ ಜತೆಗೆ ಇತರೆ ಇಬ್ಬರು ಆರೋಪಿಗಳ ಬಂಧಿಸಲಾಗಿತ್ತು. ಈ ವೇಳೆ 0.32 ಎಂಎಂ 6 ಪಿಸ್ತೂಲ್, 52 ಜೀವಂತ ಗುಂಡುಗಳನ್ನು ವಶಕ್ಕೆ ಪಡೆಯಲಾಗಿತ್ತು. ಬಳಿಕ ಸುಹೇಲ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಮಧ್ಯಪ್ರದೇಶದ ಇಂಧೋರ್‌ನಲ್ಲಿ ನಡೆಯುವ ಟಗರು ಕಾಳಗಕ್ಕೆ ಹೋದಾಗ ಜನ್‌ಜೀರ್ ಅಹ್ಮದ್ ಪರಿಚಯವಾಗಿದ್ದು, ಈತನು ಕಂಟ್ರಿಮೆಡ್ ಪಿಸ್ತೂಲ್ ತಯಾರಿಸುವ ವಿಚಾರ ಗೊತ್ತಾಗಿತ್ತು. ಹೀಗಾಗಿ ಆತನಿಂದ 10 ಸಾವಿರ ರೂ.ಗೆ ಪಿಸ್ತೂಲ್, ಜೀವಂತ ಗುಂಡುಗಳನ್ನು ಖರೀದಿಸಿ ನಗರದಲ್ಲಿ ಮಾರಾಟ ಮಾಡಿದ್ದೆ ಎಂದು ಹೇಳಿದ್ದ. ಈ ಹಿನ್ನೆಲೆಯಲ್ಲಿ ನಾಲ್ಕು ತಿಂಗಳ ಕಾಲ ಕಾರ್ಯಾಚರಣೆ ನಡೆಸಿ ಜನ್‌ಜೀರ್ ಅಹ್ಮದ್‌ನನ್ನು ಬಂಧಿಸಲಾಗಿದೆ.