ಈ ಹಿಂದೆ ಸಿದ್ದರಾಮಯ್ಯ ಹಾಗೂ ಎಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ರೈತರ ಸಾಲಮನ್ನಾ ಮಾಡಿದ್ದರು. ಇದನ್ನೇ ನೆಪವಾಗಿಟ್ಟುಕೊಂಡು ಚಿಂತಾಮಣಿ ತಾಲೂಕಿನ ಯನುಮಲಪಾಡಿ, ಬೊಮ್ಮೆ ಪಲ್ಲಿ, ಅಂಕಾಲಮೊಡಗು, ನಂದಿಗಾನಹಳ್ಳಿ, ವೈಜಕೂರು, ಹುಲಗುಮ್ಮನಹಳ್ಳಿ ಹಾಗೂ ಕುರುಬೂರು ವಿಎಸ್ಎಸ್ಎನ್ ಸೊಸೈಟಿಗಳಲ್ಲಿ 11 ಕೋಟಿ ರೂ. ಅವ್ಯವಹಾರ ನಡೆಸಲಾಗಿದೆ ಎಂದು ಆರೋಪಿಸಿ ಬಿಜೆಪಿ ಮುಖಂಡ ತಳಗವಾರ ಪ್ರತಾಪ್ ಕುಮಾರ್, 2025ರಲ್ಲಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.