ಅಕ್ರಮ ತನಿಖೆಗೆ ಎಬಿವಿಪಿ ಪಟ್ಟು

ABVP insists on probe into irregularities
ABVP insists on probe into irregularities
Published on
ಕೋಲಾರ: ಬೆಂಗಳೂರು ಉತ್ತರ ವಿಶ್ವ ವಿದ್ಯಾಲಯದಲ್ಲಿ ನಡೆಯುತ್ತಿರುವ ಅಕ್ರಮ ಹಾಗೂ ಆಡಳಿತಾತ್ಮಕ ವೈಲ್ಯ ಕುರಿತು ಸಮಗ್ರ ತನಿಖೆ ನಡೆಸಬೇಕು ಎಂದು ಒತ್ತಾಯಿಸಿ ಎಬಿವಿಪಿ ಕಾರ್ಯಕರ್ತರು, ಇಲ್ಲಿನ ಉತ್ತರ ವಿವಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿ, ಮುತ್ತಿಗೆ ಹಾಕಲು ಯತ್ನಿಸಿದರು.
ಪ್ರತಿಭಟನೆಯ ವೇಳೆ ಕಾರ್ಯಕರ್ತರು ವಿವಿಗೆ ಮುತ್ತಿಗೆ ಹಾಕಲು ಮುಂದಾದರು, ಆಗ ಪೊಲೀಸರು ಮಧ್ಯ ಪ್ರವೇಶಿಸಿ ಪಡೆದ ಹಿನ್ನೆಲೆಯಲ್ಲಿ ಕಾರ್ಯಕರ್ತರ ಪ್ರಯತ್ನವೂ ವಿಲವಾಯಿತು. ಪ್ರತಿಭಟನೆಯ ನಂತರ ಕುಲಸಚಿವ ಪ್ರೊ.ಬಿ.ಕೆ.ರವಿ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಎಬಿವಿಪಿ ಜಿಲ್ಲಾ ಸಂಚಾಲಕ ಮಯೂರ್​ ಮಾತನಾಡಿ, ಬಡವರ ಪಾಲಿಗೆ ಇರಬೇಕಿದ್ದ ಉತ್ತರ ವಿವಿಯೂ ಅಧಿಕಾರಿಗಳ, ಸಿಬ್ಬಂದಿಯ ಸ್ವ ಹಿತಾಸಕ್ತಿಗೆ ಸಿಮೀತವಾಗಿದೆ. ಪರೀಾ ಶುಲ್ಕದ ಹೆಸರಿನಲ್ಲಿ ಮಕ್ಕಳಿಂದ ಹಣ ಸುಲಿಗೆ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ಪರೀಕ್ಷಾ ಶುಲ್ಕ ಕಟ್ಟದ ವಿದ್ಯಾರ್ಥಿಗಳಿಗೆ ಹಾಲ್​ ಟಿಕೆಟ್​ ನೀಡಲು 10 ಸಾವಿರ ರೂ.ವರೆಗೂ ದಂಡ ಕಟ್ಟಿಸಿಕೊಂಡು ಹಾಲ್​ ಟಿಕೆಟ್​ ನೀಡಿದ್ದಾರೆ. ಈ ಬಗ್ಗೆ ಸಿಂಡಿಕೇಟ್​ ಸದಸ್ಯರೊಬ್ಬರು ವಾಟ್ಸ್​ಆ್ಯಪ್​ನಲ್ಲಿ ಸ್ಕ್ರೀನ್​ ಶಾಟ್​ ಹಂಚಿಕೊಂಡಿದ್ದರೂ ತಪ್ಪಿತಸ್ಥರ ವಿರುದ್ಧ ಕ್ರಮ ಇಲ್ಲದಿರುವುದು ಖಂಡನೀಯ ಎಂದು ಕಿಡಿಕಾರಿದರು.
ಪ್ರತಿವರ್ಷವೂ ವಿಶ್ವವಿದ್ಯಾಲಯ ಅಂಕ ಪಟ್ಟಿ ಶುಲ್ಕ 200 ರೂ.ಹೆಚ್ಚು ಪಡೆಯುತ್ತಾರೆ. ಆದರೆ ಯಾವ ವಿದ್ಯಾರ್ಥಿಗೂ ಸಹ ಮಾರ್ಚ್​ ಕಳೆದರೂ ಅಂಕ ಪಟ್ಟಿ ನೀಡಿಲ್ಲ. ಅದಕ್ಕೂ ಹೆಚ್ಚುವರಿಯಾಗಿ 75 ರೂ.ನಿಂದ 150 ರೂ.ಪಡೆದಿರುತ್ತಾರೆ. ಬಳಿಕ ಡಿಜಿಲಾಕಾರ್​ನಲ್ಲಿ ಮಾರ್ಕ್ಸ್​ಕಾರ್ಡ್​ ನೀಡಲಾಗುತ್ತದೆ. ಆದರೆ ಹಣ ಪಡೆಯುವ ಅವಶ್ಯ ಏನಿದೆ ಎಂದು ಪ್ರಶ್ನಿಸಿದರು.
ನಿರಂಜನ ವಾನಳ್ಳಿ ಉಪ ಕುಲಪತಿಗಳಾಗಿದ್ದಾಗ ಲ್ಯಾಪ್​ಟಾಪ್​ ಒಂದು ವರ್ಷ ನೀಡಿ ಮತ್ತೆ ಅದನ್ನು ಮುಂದುವರಿಸಿಲ್ಲ ಇದಕ್ಕೆ ಏನು ಕಾರಣ. ಎಲ್ಲ ವಿದ್ಯಾರ್ಥಿಗಳಿಗೂ ವೈೈ ಸೌಲಭ್ಯ ನೀಡುವುದಾಗಿ 2.5 ಕೋಟಿ ರೂ. ವೆಚ್ಚದಲ್ಲಿ ವೈಫೈ ವ್ಯವಸ್ಥೆ ಮಾಡಿಸಲಾಗಿದೆ. ಆದರೆ ಅವುಗಳನ್ನು ಯಾವ ಕಾರಣಕ್ಕೆ ವಿದ್ಯಾರ್ಥಿಗಳಿಗೆ ಬಳಕೆಗೆ ನೀಡುತ್ತಿಲ್ಲ. ಗ್ರಂಥಾಲಯದ ಉನ್ನತಿಕರಣಕ್ಕೆ 1.5 ಕೋಟಿ ರೂ. ಮಂಜೂರು ಆಗಿದ್ದರೂ ಸಹ ಕೇವಲ 20,000 ಪುಸ್ತಕ ಮಾತ್ರವೇ ಗ್ರಂಥಾಲಯದಲ್ಲಿವೆ. ಇದಕ್ಕೆ ಸ್ಪಷ್ಟ ಉತ್ತರ ಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಸಂಘಟನಾ ಕಾರ್ಯದರ್ಶಿ ಶ್ರೀನಿವಾಸ್​, ರಾಜ್ಯ ಕಾರ್ಯಕಾರಿಣಿ ಸದಸ್ಯ ಅಜಿತ್​, ಮುಖಂಡರಾದ ಸುನಿಲ್​ ಕುಮಾರ್​, ಸಾ.ಮಾ.ಧನುಷ್​ ಬಾಬು, ತನುಷ್​, ಪ್ರೇಮ್​, ಅಜಯ್​, ಜಯಂತ್​, ಶಿವು, ಧೀರಜ್​ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net