ಸೇವಾನಿರತ ಶಿಕ್ಷಕರಿಗೆ ಟಿಇಟಿ ಕಡ್ಡಾಯ ರದ್ದುಪಡಿಸಿ

ಸೇವಾನಿರತ ಶಿಕ್ಷಕರಿಗೆ ಶಿಕ್ಷಕರ ಅರ್ಹತಾ ಪರೀೆ (ಟಿಇಟಿ) ಕಡ್ಡಾಯಗೊಳಿಸಿರುವುದನ್ನು ರದ್ದುಗೊಳಿಸಲು ಕೇಂದ್ರ ಸರ್ಕಾರದ ಮಟ್ಟದಲ್ಲಿ ಕಾನೂನು ರೂಪಿಸುವಂತೆ ಒತ್ತಾಯಿಸಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂದ ಕಾರ್ಯಕರ್ತರು ಕಲಬುರಗಿ ಸಂಸದ ರಾಧಾಕೃಷ್ಣ ದೊಡ್ಡಮನಿ ಅವರಿಗೆ ಭಾನುವಾರ ಮನವಿ ಸಲ್ಲಿಸಿದರು. ಸಂತೋಷ ಗಂಗು, ಮರೆಪ್ಪ ಹೊಸಮನಿ, ಹುಸೇನ್​ ಪಾಶ, ಬಸ್ಸಮ್ಮ, ನಂದಿನಿ, ಪರಮೇಶ್ವರ ಓಕಳಿ, ಅಶೋಕ ಸೊನ್ನ ಇತರರಿದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಸಂಸದ ರಾಧಾಕೃಷ್ಣ ದೊಡ್ಡಮನಿಗೆ ಶಿಕ್ಷಕರ ಮನವಿ
  • ಕೇಂದ್ರದ ಮೇಲೆ ಒತ್ತಡ ಹೇರಲು ಒತ್ತಾಯ
ಕಲಬುರಗಿ: ಸೇವಾನಿರತ ಶಿಕ್ಷಕರಿಗೆ ಶಿಕ್ಷಕರ ಅರ್ಹತಾ ಪರೀೆ (ಟಿಇಟಿ) ಕಡ್ಡಾಯಗೊಳಿಸಿರುವುದನ್ನು ರದ್ದುಗೊಳಿಸಲು ಕೇಂದ್ರ ಸರ್ಕಾರದ ಮಟ್ಟದಲ್ಲಿ ಕಾನೂನು ರೂಪಿಸುವಂತೆ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂದ ಕಾರ್ಯಕರ್ತರು ಒತ್ತಾಯಿಸಿದರು.
ಈ ಕುರಿತು ಸಂಸದ ರಾಧಾಕೃಷ್ಣ ದೊಡ್ಡಮನಿ ಅವರಿಗೆ ಭಾನುವಾರ ಮನವಿಪತ್ರ ಸಲ್ಲಿಸಿ, ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ ಹಾಗೂ ಟಿಇಟಿ ಮಾರ್ಗಸೂಚಿ ಜಾರಿಗೆ ಬರುವುದಕ್ಕೂ ಮುನ್ನ ಕಾನೂನುಬದ್ಧವಾಗಿ ನೇಮಕಗೊಂಡ ಶಿಕ್ಷಕರಿಗೆ ನಂತರ ಜಾರಿಯಾದ ಅರ್ಹತಾ ನಿಯಮಗಳನ್ನು ಹಿಂದಿನ ದಿನಾಂಕದಿಂದ ಅನ್ವಯಿಸಬಾರದು. ಸೇವಾನಿರತ ಶಿಕ್ಷಕರ ಸೇವಾ ಹಕ್ಕು, ಉದ್ಯೋಗ ಭದ್ರತೆ, ವೇತನ, ಪಿಂಚಣಿ ಹಾಗೂ ಬಡ್ತಿ ಅವಕಾಶಗಳಿಗೆ ಯಾವುದೇ ಧಕ್ಕೆಯಾಗದಂತೆ ಕೇಂದ್ರ ಸರ್ಕಾರ ಅಗತ್ಯ ಕಾನೂನು ಹಾಗೂ ಆಡಳಿತಾತ್ಮಕ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ಈ ವಿಷಯವನ್ನು ಸಂಸತ್ತಿನಲ್ಲಿ ಪ್ರಸ್ತಾಪಿಸಿ, ರಾಜ್ಯ ಸರ್ಕಾರಗಳು, ಶಿಕ್ಷಕರ ಸಂಟನೆಗಳು ಹಾಗೂ ಶಿಕ್ಷಣ ತರೊಂದಿಗೆ ಸಮಾಲೋಚನೆ ನಡೆಸಿ ಸೇವಾನಿರತ ಶಿಕ್ಷಕರಿಗೆ ನ್ಯಾಯಸಮ್ಮತ ಮತ್ತು ಮಾನವೀಯ ಪರಿಹಾರ ದೊರಕಿಸಿಕೊಡಲು ಕೇಂದ್ರ ಸರ್ಕಾರದ ಗಮನ ಸೆಳೆಯಬೇಕು ಎಂದು ಕೋರಿದರು.
ಸಂದ ಜಿಲ್ಲಾಧ್ಯಕ್ಷ ಸಂತೋಷ ಗಂಗು, ಪ್ರಧಾನ ಕಾರ್ಯದರ್ಶಿ ಮರೆಪ್ಪ ಹೊಸಮನಿ, ಉಪಾಧ್ಯಕ್ಷ ಹುಸೇನ್​ ಪಾಶ, ಪ್ರಮುಖರಾದ ಬಸ್ಸಮ್ಮ, ನಂದಿನಿ, ಪರಮೇಶ್ವರ ಓಕಳಿ, ಅಶೋಕ ಸೊನ್ನ, ಸಂಗಣ್ಣ ಜಾಬ, ಪರಮೇಶ್ವರ ದೇಸಾಯಿ, ಸಾಗರ, ಸಂತೋಷ್​, ಸಂಗು ಎಂ, ಚನ್ನಬಸಪ್ಪ ದೇಸಾಯಿ, ಮಹಿಬೂಬ್​ ಮಡಿಕಿ, ರಬ್ಬಾನಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net